AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ ವಿಸ್ತರಣೆ, ಎಷ್ಟು ವರ್ಷ?

1993ನೇ ಸಾಲಿನ IPS ಅಧಿಕಾರಿಯಾಗಿರುವ ಕನ್ನಡಿಗ ಎಂ.ಎ.ಸಲೀಂ ಅವರ ಸೇವಾವಧಿ ವಿಸ್ತರಣೆಯಾಗಿದೆ. ಡಾ. ಅಲೋಕ್ ಮೋಹನ್ ಅವರು ನಿವೃತ್ತಿಯಾದ ಬಳಿಕ ಕರ್ನಾಟಕ ಪೊಲೀಸ್​ ಮಹಾನಿರ್ದೇಶಕರಾಗಿ ಡಾ. ಎಂ.ಎ.ಸಲೀಂ ಅವರು ನೇಮಕಗೊಂಡಿದ್ದರು. 2025ರ ಮೇನಲ್ಲಿ ಪ್ರಭಾರ ಡಿಜಿ-ಐಜಿಪಿಯಾಗಿದ್ದ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇದೀಗ ಇನ್ನೊಂದು ವರ್ಷ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ ವಿಸ್ತರಣೆ, ಎಷ್ಟು ವರ್ಷ?
Dg And Igp Dr Ma SaleemImage Credit source: DH
ಪ್ರದೀಪ್​ ಚಿಕ್ಕಾಟಿ
| Edited By: |

Updated on:Apr 16, 2026 | 10:30 PM

Share

ಬೆಂಗಳೂರು, (ಏಪ್ರಿಲ್ 16): ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ(ಡಿಜಿ-ಐಜಿಪಿ) ಎಂ.ಎ.ಸಲೀಂ (DG and IGP Dr MA saleem) ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ. 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಂ.ಎ.ಸಲೀಂ ಅವರ ಸೇವಾವಧಿಯನ್ನು 2027ರ ಆ.29ರವರೆಗೆ ವಿಸ್ತರಣೆ ರಾಜ್ಯ ಸರ್ಕಾರ ಇಂದು ಏಪ್ರಿಲ್ 16) ಆದೇಶ ಹೊರಡಿಸಿದೆ. 1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕರಾಗಿದ್ದರು. ಬಳಿಕ 2025ರ ಆಗಸ್ಟ್ ನಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿದ್ದು, ಈ ವರ್ಷದ ಜೂನ್​ನಲ್ಲಿ ನಿವೃತ್ತಿಯಾಗಬೇಕಿತ್ತು. ಆದ್ರೆ, 22.09.2006ರ ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಡಿಜಿಪಿಗೆ ಕನಿಷ್ಠ 2 ವರ್ಷಗಳ ಅಧಿಕಾರಾವಧಿ ಇರಬೇಕು. ಹೀಗಾಗಿ 22.09.2006ರ ಸರ್ವೋಚ್ಚ ನ್ಯಾಯಾಲಯದ ಪ್ರಕಾಶ್ ಸಿಂಗ್ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪಿನ ಅನುಸಾರ ಡಿಜಿ & ಐಜಿಪಿ ಎಂ.ಎ.ಸಲೀಂ‌ ಅವರ ಅವಧಿ ಒಟ್ಟು 2 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ. ಎಂ ಎ ಸಲೀಂ ನೇಮಕ

2025ರ ಮೇನಲ್ಲಿ ಪ್ರಭಾರ ಡಿಜಿ ಐಜಿಪಿಯಾಗಿ ನೇಮಕವಾಗಿದ್ದ ಸಲೀಂ ಅವರನ್ನು 2025ರ ಆಗಸ್ಟ್ ನಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ, ಇನ್ನೊಂದು ವರ್ಷ ಅಂದರೆ 2027ರ ಅಕ್ಟೋಬರ್ 29ರವರೆಗೆ ಸೇವಾ ಅವಧಿ ವಿಸ್ತರಣೆ ಮಾಡಿದೆ.

ಡಾ. ಎಂ ಎ ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್​ನ ಅಧಿಕಾರಿಯಾಗಿದ್ದು, ಈ ಹಿಂದೆ ಕಲಬುರಗಿಯಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್​ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಾ. ಎಂ. ಎ ಸಲೀಂ ಅವರು ಸಿಐಡಿ ಡಿಜಿಪಿಯಾಗಿದ್ದರು. ಅಲ್ಲದೇ ಪ್ರಮುಖವಾಗಿ ಬೆಂಗಳೂರು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ಅನೇಕ ಸಂಚಾರ ಸುಧಾರಣೆ ಜಾರಿಗೆ ತಂದು ಜನಪ್ರಿಯರಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Thu, 16 April 26

Follow Us
ಅಮಿತ್ ಶಾರನ್ನು ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ;ಪ್ರಿಯಾಂಕಾ ಗಾಂಧಿ ಲೇವಡಿ
ಅಮಿತ್ ಶಾರನ್ನು ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ;ಪ್ರಿಯಾಂಕಾ ಗಾಂಧಿ ಲೇವಡಿ
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ