ಲೋಕಸಭಾ ಎಲೆಕ್ಷನ್: ಕರ್ನಾಟಕದಲ್ಲಿ ನಡೆಯುವ ಮತದಾನದ 2 ದಿನವೂ ಸಾರ್ವತ್ರಿಕ ರಜೆ ಘೋಷಣೆ
ಲೋಕಸಭಾ ಚುನಾವಣೆ (Lok Sabha Election 2024) ದಿನಾಂಕ ಘೋಷಣೆ ಆಗುತ್ತಿದ್ದಂತೆ ಅದರ ಕಾವು ಕೂಡ ಜೋರಾಗಿದೆ. ಅದರಂತೆ ಉಭಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅವರವರ ಕ್ಷೇತ್ರಗಳಲ್ಲಿ ಮತಯಾಚನೆ ಶುರು ಮಾಡಿದ್ದಾರೆ. ಇನ್ನು ದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಬೆಂಗಳೂರು, ಮಾ.30: ಲೋಕಸಭಾ ಚುನಾವಣೆ (Lok Sabha Election 2024) ದಿನಾಂಕ ಘೋಷಣೆ ಆಗುತ್ತಿದ್ದಂತೆ ಅದರ ಕಾವು ಕೂಡ ಜೋರಾಗಿದೆ. ಅದರಂತೆ ಉಭಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅವರವರ ಕ್ಷೇತ್ರಗಳಲ್ಲಿ ಮತಯಾಚನೆ ಶುರು ಮಾಡಿದ್ದಾರೆ. ಇನ್ನು ದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನಲೆ ಮತದಾನ ನಡೆಯುವ ಎರಡು ದಿನವೂ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದ್ದು, ಜೊತೆಗೆ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಇನ್ನು ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪುಜಾಪತಿನಿಧಿ ಕಾಯ್ದೆ 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಪ್ರಕಟಣೆ ಮೂಲಕ ಆದೇಶಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಲೋಕಸಭಾ ಚುನಾವಣೆ ಅಖಾಡಕ್ಕೆ ಎಂಇಎಸ್ ಎಂಟ್ರಿ; ಬಿಜೆಪಿ-ಕಾಂಗ್ರೆಸ್ಗೆ ಮತ ವಿಭಜನೆ ಆತಂಕ
ಜೂನ್ 4ರಂದು ಫಲಿತಾಂಶ ಪ್ರಕಟ
ಹೌದು, ದೇಶದಲ್ಲಿ ಏಳು ಹಂತದಲ್ಲಿ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ತಲಾ 14 ಜಿಲ್ಲೆಗಳಂತೆ ಎರಡು ಹಂತಗಳಲ್ಲಿ ಅಂದರೆ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ.
ಏಪ್ರಿಲ್ 26ರಂದು ಮತದಾನ ನಡೆಯುವ ಕ್ಷೇತ್ರಗಳ ವಿವರ ಇಲ್ಲಿದೆ.
- ಉಡುಪಿ-ಚಿಕ್ಕಮಗಳೂರು
- ಹಾಸನ
- ದಕ್ಷಿಣ ಕನ್ನಡ
- ಚಿತ್ರದುರ್ಗ
- ತುಮಕೂರು
- ಮಂಡ್ಯ
- ಮೈಸೂರು-ಕೊಡಗು
- ಚಾಮರಾಜನಗರ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಉತ್ತರ
- ಬೆಂಗಳೂರು ಕೇಂದ್ರ
- ಬೆಂಗಳೂರು ದಕ್ಷಿಣ
- ಚಿಕ್ಕಬಳ್ಳಾಪುರ
- ಕೋಲಾರ
ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು ವಿವರ ಇಂತಿದೆ.
- ಚಿಕ್ಕೋಡಿ
- ಬೆಳಗಾವಿ
- ಬಾಗಲಕೋಟೆ
- ಬಿಜಾಪುರ
- ಕಲಬುರಗಿ
- ರಾಯಚೂರು
- ಬೀದರ್
- ಕೊಪ್ಪಳ
- ಬಳ್ಳಾರಿ
- ಹಾವೇರಿ
- ಧಾರವಾಡ
- ಉತ್ತರ ಕನ್ನಡ
- ದಾವಣಗೆರೆ
- ಶಿವಮೊಗ್ಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Sat, 30 March 24