ಎಲ್‌ಪಿಜಿ ಕೊರತೆ: ರಾಜ್ಯ ಸರ್ಕಾರದಿಂದ ಆಟೋ ಚಾಲಕರಿಗೆ ಮಹತ್ವದ ಪ್ರಕಟಣೆ
ಗ್ಯಾಸ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಆಟೋದವರ ಬದುಕು ಕೂಡಾ ಬೀದಿಗೆ ಬರ್ತಿದೆ. ಗಂಟೆಗಟ್ಟಲ್ಲೇ ಕ್ಯೂ ನಿಂತ್ರೂ ಆಟೋದವರಿಗೆ ಗ್ಯಾಸ್ ಸಿಗುತ್ತಿಲ್ಲ. ಹೀಗಿರುವಾಗಿ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜಿನ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. ಆಟೋ ಚಾಲಕರಿಗೆ ಆತಂಕ ಬೇಡ ಎಂದಿದೆ.

ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಗ್ಯಾಸ್ ಸಿಗದೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ದಿನವಿಡಿ ದುಡಿಮೆ ಬಿಟ್ಟು ಬಂಕ್ಗಳ ಬಳಿ ಗಂಟೆಗಟ್ಟಲೇ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೋ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಆಟೋ ಗ್ಯಾಸ್ (Auto LPG) ಕೊರತೆ ಬಗ್ಗೆ ವಂದತಿಗಳು ಕೂಡ ಹರಿದಾಡಿದ್ದವು. ಸದ್ಯ ಆಟೋ ಎಲ್‌ಪಿಜಿ ಸರಬರಾಜು ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.
ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್ವರೆಗೂ ಪೂರೈಕೆ
ಆಟೋ ಎಲ್‌ಪಿಜಿ ಸರಬರಾಜು ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. IOCL, BPC, HPC ಕಂಪನಿಗಳಿಂದ ಗ್ಯಾಸ್ ಪೂರೈಕೆ ನಡೆಯುತ್ತಿದೆ. ಏಪ್ರಿಲ್ 2ರಿಂದ ಏಪ್ರಿಲ್ 6ರವರೆಗೆ ದಿನನಿತ್ಯ ಸರಬರಾಜು ಆಗುತ್ತಿದೆ. ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್ವರೆಗೂ ಪೂರೈಕೆ ಮಾಡಲಾಗಿದೆ. ಏಪ್ರಿಲ್ 5ರಂದು ಅತಿ ಹೆಚ್ಚು 94.11 MT ಸರಬರಾಜು ಮಾಡಲಾಗಿದೆ. ಆಟೋ ಚಾಲಕರು ಆತಂಕಪಡಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯ್ಲ್! ಡ್ಯುಯಲ್ ಫ್ಯೂಯಲ್ ಬಳಕೆಗೆ ಸಲಹೆ
ಇನ್ನು ಎಲ್‌ಪಿಜಿ ಪೂರೈಕೆ ವ್ಯವಸ್ಥೆಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಏಪ್ರಿಲ್ 5ರಂದು ಗರಿಷ್ಠ 94.11 MT ಪೂರೈಕೆಯಾಗಿದೆ. ಆಟೋ ಚಾಲಕರಿಗೆ ಆತಂಕ ಬೇಡ, ಪೂರೈಕೆ ಮೇಲೆ ಸರ್ಕಾರದ ನಿಗಾ ಇದೆ.
- ದಿನಾಂಕ ಆಟೋ ಎಲ್‌ಪಿಜಿ ಸರಬರಾಜು (ಮೆಟ್ರಿಕ್ ಟನ್ನಲ್ಲಿ)
- ಏಪ್ರಿಲ್ 2ರಂದು 87.78
- ಏಪ್ರಿಲ್ 3ರಂದು 86.05
- ಏಪ್ರಿಲ್ 4ರಂದು 84.80
- ಏಪ್ರಿಲ್ 5ರಂದು 94.11
- ಏಪ್ರಿಲ್ 6ರಂದು 83.58
ಇನ್ನೂ ಓದಿ: ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?
ಸದ್ಯ ರಾಜ್ಯದಲ್ಲಿನ ಆಟೋ ಮಾಲೀಕರು ಮತ್ತು ಚಾಲಕರುಗಳು ಆತಂಕ ಪಡದೇ ಮತ್ತು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಸಹಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಕೈಗಾರಿಕಾ ವಲಯಕ್ಕೆ ಎಲ್‌ಪಿಜಿ ಹಂಚಿಕೆಗೆ ಮಾರ್ಗಸೂಚಿ
ಇನ್ನು ಕೈಗಾರಿಕಾ ವಲಯಕ್ಕೆ ಎಲ್‌ಪಿಜಿ ಹಂಚಿಕೆ ಕುರಿತು ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ರಿಂದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಲಾಗಿದೆ.
- ವಿವಿಧ ಕೈಗಾರಿಕಾ ವಲಯಗಳಿಗೆ ಶೇ.70ರಷ್ಟು LPG ಹಂಚಿಕೆಗೆ ನಿರ್ಧಾರ.
- ಪಿಎನ್‌ಜಿ ಸುಧಾರಣೆ ತಂದ ರಾಜ್ಯಗಳಿಗೆ ಹೆಚ್ಚುವರಿ ಶೇ.10ರಷ್ಟು ಎಲ್‌ಪಿಜಿ
- ಫಾರ್ಮಾ, ಫುಡ್, ಅಗ್ರಿಕಲ್ಚರ್ ಸೇರಿ ಪ್ರಮುಖ ವಲಯಗಳಿಗೆ ಅನಿಲ ಪೂರೈಕೆ
- ಬೃಹತ್ LPG ಬಳಕೆಗೆ ದಿನಕ್ಕೆ 0.2 ಟಿಎಂಟಿ ಮಿತಿ ನಿಗದಿ
- ನೈಸರ್ಗಿಕ ಅನಿಲ ಬಳಸಲು ಸಾಧ್ಯವಿಲ್ಲದ ಘಟಕಗಳಿಗೆ ಮೊದಲ ಆದ್ಯತೆ
- ಸಿಜಿಡಿ ಘಟಕಗಳಿಗೆ ಪಿಎನ್‌ಜಿ ನೋಂದಣಿ ಕಡ್ಡಾಯ
- ಪ್ಯಾಕೇಜಿಂಗ್, ಪೇಂಟ್, ಸ್ಟೀಲ್ ಮತ್ತು ಸೆರಾಮಿಕ್ ಘಟಕಗಳಿಗೆ ಸಿಗಲಿದೆ ನೆರವು
- ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅನಿಲಪೂರೈಕೆ ವ್ಯವಸ್ಥೆ
- ಮಾರ್ಚ್ 2026ರ ಬಳಕೆ ಆಧರಿಸಿ ಕೈಗಾರಿಕೆಗಳಿಗೆ ಇಂಧನ ಕೋಟಾ ನಿಗದಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:14 pm, Wed, 8 April 26




