ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ: PIL ವಜಾಗೊಳಿಸಿದ ಸುಪ್ರೀಂ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 26, 2025 | 11:57 AM

ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಸಂಬಂಧಿಸಿದಂತೆ ವಿನಯ್ ಕುಮಾರ್ ಸಿಂಗ್​​ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್​​ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ನೀವು ಜಾರ್ಖಂಡ್​​ನವರು ನಿಮಗೇನು ಸಂಬಂಧ ಎಂದು ಪ್ರಶ್ನೆ ಮಾಡಿದೆ.

ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ: PIL ವಜಾಗೊಳಿಸಿದ ಸುಪ್ರೀಂ
ಸುಪ್ರೀಂಕೋರ್ಟ್
Follow us on

ಬೆಂಗಳೂರು, ಮಾರ್ಚ್​ 26: ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ (Honey Trap) ಆರೋಪ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಲಾಯರ್​ ವಿನಯ್ ಕುಮಾರ್ ಸಿಂಗ್​​ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್​​ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ನೀವು ಜಾರ್ಖಂಡ್​​ನವರು ನಿಮಗೇನು ಸಂಬಂಧ? ಪೊಲಿಟಿಕಲ್ ನಾನ್​ಸೆನ್ಸ್​ಗಳನ್ನೆಲ್ಲಾ ವಿಚಾರಣೆ ಮಾಡಲು ಆಗಲ್ಲ. ಜಡ್ಜ್​ಗಳು ಏಕೆ ಹನಿಟ್ರ್ಯಾಪ್​​ಗೆ ಒಳಗಾಗುತ್ತಾರೆ, ಅದನ್ನು ಜಡ್ಜ್​ಗಳು ನೋಡಿಕೊಳ್ಳುತ್ತಾರೆ ನಿಮಗೇನು ಸಂಬಂಧ ಎಂದು ಸುಪ್ರೀಂ ಪ್ರಶ್ನೆ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ಸಚಿವರ ಹನಿಟ್ರ್ಯಾಪ್ ಯತ್ನದ ವಿಚಾರ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಇತ್ತೀಚೆಗೆ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Honey-Trap : ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕರ್ನಾಟಕದ ಹನಿಟ್ರ್ಯಾಪ್ ಪ್ರಕರಣ

ಇದನ್ನೂ ಓದಿ
ಹನಿಟ್ರ್ಯಾಪ್​​ ಕೇಸಿನಲ್ಲಿ ಮಹತ್ವದ ಬೆಳವಣಿಗೆ: ಕೊನೆಗೂ ದೂರು ನೀಡಿದ ರಾಜಣ್ಣ
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ

ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ವಿಚಾರಣೆ ಮಾಡಿದೆ. ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಾಧೀಶರ ಹನಿಟ್ರ್ಯಾಪ್​​ ಆರೋಪಗಳ ಬಗ್ಗೆ ಅರ್ಜಿದಾರರು ವಾದವನ್ನು ಮಂಡಿಸಿದರು. ವಾದ-ವಿವಾದ ಆಲಿಸಿದ ಸುಪ್ರೀಂಕೋರ್ಟ್ ಲಾಯರ್​ ವಿನಯ್ ಕುಮಾರ್ ಸಿಂಗ್​​ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಇತ್ತ ರಾಜ್ಯದಲ್ಲಿ ಹನಿಟ್ರ್ಯಾಪ್​ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಹನಿ ಹಿಂದಿರೋರು ಯಾರು ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಸಚಿವ ಕೆ.ಎನ್.ರಾಜಣ್ಣರೇ, ಮಧುಬಲೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬ್ಲೂ ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡು, ಪರ್ಸನಲ್​ ಆಗಿ ಮಾತನಾಡ್ಬೇಕು ಅಂತಾ, 2 ಬಾರಿ ಹನಿಟ್ರ್ಯಾಪ್​ಗೆ ಯತ್ನಿಸಿದ್ದಾರೆ, ಇದರ ಹಿಂದಿರೋರ ವಿರುದ್ಧ ಕ್ರಮ ಆಗಬೇಕು ಅಂತಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್​​ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಕೊನೆಗೂ ಗೃಹ ಸಚಿವರಿಗೆ ದೂರು ನೀಡಿದ ಕೆಎನ್ ರಾಜಣ್ಣ

ಸದನದಲ್ಲಿ ಪ್ರಸ್ತಾಪ ಆಗಿ ಇಷ್ಟು ದಿನವಾದ್ರೂ, ಸಚಿವ ರಾಜಣ್ಣ ದೂರು ಕೊಡದೇ ಇರೋದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ದೂರು ಕೊಡೋ ಮೊದ್ಲು ಮಾತನಾಡಿದ ಸಚಿವ ರಾಜಣ್ಣ, ಪರಮೇಶ್ವರ್ ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ದೂರು ಕೊಡ್ತೀನಿ ಅಂದಿದ್ರು. ಅದರಂತೆಯೇ, ನೆಲಮಂಗಲದ ಟಿ.ಬೇಗೂರು ಕಾಲೇಜ್​ನಲ್ಲಿದ್ದ ಪರಮೇಶ್ವರ್​ಗೆ ದೂರು ಕೊಡೋಕೆ ರಾಜಣ್ಣ ಹೋಗಿದ್ದರು. ಆದರೆ ದೂರು ಕೊಡದೇ ವಾಪಸ್​ ತೆರಳಿದ್ದರು. ಮತ್ತೆ ಸದಾಶಿವನಗರದಲ್ಲಿರುವ ಪರಮೇಶ್ವರ ನಿವಾಸಕ್ಕೆ ಭೇಟಿ ಕೊಟ್ಟು, ಅಧಿಕಾರಿಗಳ ಸಮ್ಮುಖದಲ್ಲೇ ವಿವರವಾದ ದೂರನ್ನ ಸಚಿವ ರಾಜಣ್ಣ ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:17 am, Wed, 26 March 25