AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಇಂದಿನಿಂದ ಕರ್ನಾಟಕದಾದ್ಯಂತ ಮಳೆ ಮತ್ತಷ್ಟು ಜೋರು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್​

ಮುಂದಿನ ಒಂದು ವಾರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಗದಗ, ಧಾರವಾಡದಲ್ಲಿ ಕೂಡ ಮಳೆಯಾಗಲಿದೆ.

Karnataka Rains: ಇಂದಿನಿಂದ ಕರ್ನಾಟಕದಾದ್ಯಂತ ಮಳೆ ಮತ್ತಷ್ಟು ಜೋರು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್​
ಮಳೆ Image Credit source: PTI
ನಯನಾ ರಾಜೀವ್
|

Updated on: Aug 28, 2025 | 7:18 AM

Share

ಬೆಂಗಳೂರು, ಆಗಸ್ಟ್​ 28: ಕರ್ನಾಟಕದಾದ್ಯಂತ ಇಂದಿನಿಂದ ಮಳೆ(Rain) ಮತ್ತಷ್ಟು ಜೋರಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಗದಗ, ಧಾರವಾಡದಲ್ಲಿ ಕೂಡ ಮಳೆಯಾಗಲಿದೆ. ಕದ್ರಾ, ಸಿದ್ದಾಪುರ, ಗೇರುಸೊಪ್ಪ, ಕಾರ್ಕಳ, ಶಿರಾಲಿ, ಭಾಲ್ಕಿ, ಬಂಟವಾಳ, ಉಪ್ಪಿನಂಗಡಿ, ಮಂಗಳೂರು, ಕಾರವಾರ, ಜೋಯ್ಡಾ, ಬೀದರ್, ಅಂಕೋಲಾದಲ್ಲಿ ಭಾರಿ ಮಳೆಯಾಗಿದೆ. ಮೂಡುಬಿದಿರೆ, ಮಾಣಿ,ಗೋಕರ್ಣ, ಶಕ್ತಿನಗರ, ಕೋಟಾ, ಹುಮ್ನಾಬಾದ್, ಧರ್ಮಸ್ಥಳ, ಯಲ್ಲಾಪುರ, ಉಡುಪಿ, ಸುಳ್ಯ, ಸೈದಾಪುರ, ಪುತ್ತೂರು, ಮಂಠಾಳ, ಮಂಕಿ, ಕುಮಟಾ, ಕಮ್ಮರಡಿ, ಔರಾದ್, ಶೃಂಗೇರಿ, ಮಂಗಳೂರು, ತ್ಯಾಗರ್ತಿ, ಸೋಮವಾರಪೇಟೆ, ಸೇಡಂ, ಲೋಂಡಾ, ಕೊಪ್ಪ, ಖಾನಾಪುರ, ಕಮಲಾಪುರ, ಕಳಸ, ಕಲಬುರಗಿ, ಹುಂಚದಕಟ್ಟೆ, ಹಿರೆಕೆರೂರು, ಚಿತ್ತಾಪುರ, ನಾಪೋಕ್ಲು, ಎನ್​​ಆರ್​ ಪುರ, ಮುಲ್ಕಿ, ಮಸ್ಕಿ, ಲಕ್ಷ್ಮೇಶ್ವರ, ಕುಶಾಲನಗರ, ಜಯಪುರ, ಜೇವರ್ಗಿ, ಹಾವೇರಿ, ಗಂಗಾವತಿ, ಗಂಗಾಪುರ, ದಾವಣಗೆರೆ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ. ಎಚ್​​ಎಎಲ್​​ನಲ್ಲಿ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 28.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್​​ಪೋರ್ಟ್​​ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 28.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Karnataka Rains: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್

ಬೆಳಗಾವಿ ಏರ್​​ಪೋರ್ಟ್​​ನಲ್ಲಿ 26.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್​ನಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ 25.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಗದಗದಲ್ಲಿ 19.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 23.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​