AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ; ಆಲಮಟ್ಟಿ, ಬಸವಸಾಗರ ಭರ್ತಿ

ಕರ್ನಾಟಕದ ಜಲಾಶಯಗಳ (ಆಗಸ್ಟ್ 21) ನೀರಿನ ಮಟ್ಟ: ಇಂದಿನ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಸಂಪೂರ್ಣ ವಿವರ ಇಲ್ಲಿದೆ. ಕೃಷ್ಣಾ, ಕಾವೇರಿ ಹಾಗೂ ತುಂಗಭದ್ರಾ ನದಿ ಪಾತ್ರದ ಆಲಮಟ್ಟಿ, ಬಸವಸಾಗರ, ಕೆಆರ್‌ಎಸ್, ತುಂಗಭದ್ರಾ ಹಾಗೂ ಭದ್ರಾ ಜಲಾಶಯಗಳ ಇಂದಿನ ಒಳಹರಿವು, ಹೊರಹರಿವು ಮತ್ತು ಒಟ್ಟು ನೀರಿನ ಸಂಗ್ರಹದ ವರದಿ ಓದಿ.

Karnataka Dam Water Level: ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ; ಆಲಮಟ್ಟಿ, ಬಸವಸಾಗರ ಭರ್ತಿ
ಭದ್ರಾ ಜಲಾಶಯ
ಭಾವನಾ ಹೆಗಡೆ
|

Updated on: Aug 21, 2026 | 11:56 AM

Share

ಮುಖ್ಯಾಂಶಗಳು

  • ಕೃಷ್ಣಾ ಹಾಗೂ ತುಂಗಭದ್ರಾ ನದಿ ಪಾತ್ರದ ಜಲಾಶಯಗಳಿಗೆ ಅಪಾರ ನೀರು ಹರಿವು.
  • ಲಿಂಗನಮಕ್ಕಿ ಮತ್ತು ಭದ್ರಾ ಡ್ಯಾಂಗಳಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಏರಿಕೆ.
  • ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳು ಗರಿಷ್ಠ ಮಟ್ಟಕ್ಕೆ ತಲುಪುವ ಸನ್ನಿಹದಲ್ಲಿವೆ.

ಬೆಂಗಳೂರು, ಆಗಸ್ಟ್ 21: ರಾಜ್ಯದಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿ ಪಾತ್ರದ ಆಲಮಟ್ಟಿ, ಬಸವಸಾಗರ ಮತ್ತು ತುಂಗಭದ್ರಾ ಡ್ಯಾಂಗಳು ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದ್ದು, ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇತ್ತ ಕಾವೇರಿ ಕೊಳ್ಳದ ಕೆಆರ್‌ಎಸ್ ಹಾಗೂ ಶಿವಮೊಗ್ಗದ ಲಿಂಗನಮಕ್ಕಿ, ಭದ್ರಾ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಗಸ್ಟ್ 21, 2026ರಂದಿನ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.

1. ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ: 1819.00 ಅಡಿ ಇಂದಿನ ಮಟ್ಟ: 1795.85 ಅಡಿ ಒಳಹರಿವು: 9,339 ಕ್ಯೂಸೆಕ್ ಪ್ರಸ್ತುತ ಸಂಗ್ರಹ: ಶೇ 56.72

2. ಭದ್ರಾ ಜಲಾಶಯ

ಗರಿಷ್ಠ ಮಟ್ಟ: 186 ಅಡಿ (2158.00 ಅಡಿ ಸಮುದ್ರ ಮಟ್ಟದಿಂದ) ಇಂದಿನ ಮಟ್ಟ: 174 ಅಡಿ 7 ಇಂಚು (2146.58 ಅಡಿ) ಒಳಹರಿವು: 3,457 ಕ್ಯೂಸೆಕ್ ಹೊರಹರಿವು: 204 ಕ್ಯೂಸೆಕ್ ಒಟ್ಟು ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ ಪ್ರಸ್ತುತ ಸಂಗ್ರಹ: 57.912 ಟಿಎಂಸಿ

3. ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ: 519.60 ಮೀಟರ್ ಇಂದಿನ ಮಟ್ಟ: 519.47 ಮೀಟರ್ ಒಳಹರಿವು: 48,508 ಕ್ಯೂಸೆಕ್ ಹೊರಹರಿವು: 58,657 ಕ್ಯೂಸೆಕ್

4. ಬಸವಸಾಗರ ಜಲಾಶಯ

ಗರಿಷ್ಠ ಮಟ್ಟ: 492.25 ಮೀಟರ್ ಇಂದಿನ ಮಟ್ಟ: 492.07 ಮೀಟರ್ ಒಳಹರಿವು: 58,000 ಕ್ಯೂಸೆಕ್ ಹೊರಹರಿವು: 10,000 ಕ್ಯೂಸೆಕ್

5. ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ: 1633.00 ಅಡಿ ಇಂದಿನ ಮಟ್ಟ: 1630.18 ಅಡಿ ಒಳಹರಿವು: 11,050 ಕ್ಯೂಸೆಕ್ ಹೊರಹರಿವು: 8,121 ಕ್ಯೂಸೆಕ್ ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ ಪ್ರಸ್ತುತ ಸಂಗ್ರಹ: 94.743 ಟಿಎಂಸಿ

6. ಕೆಆರ್‌ಎಸ್ ಜಲಾಶಯ

ಗರಿಷ್ಠ ಮಟ್ಟ: 124.80 ಅಡಿ ಇಂದಿನ ಮಟ್ಟ: 109.02 ಅಡಿ ಒಳಹರಿವು: 1,551 ಕ್ಯೂಸೆಕ್ ಹೊರಹರಿವು: 2,907 ಕ್ಯೂಸೆಕ್ ಒಟ್ಟು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ ಪ್ರಸ್ತುತ ಸಂಗ್ರಹ: 30.746 ಟಿಎಂಸಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us