AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಕೆಆರ್‌ಎಸ್, ಆಲಮಟ್ಟಿ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಕರ್ನಾಟಕದ ಜಲಾಶಯಗಳ (ಆಗಸ್ಟ್ 22) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಆಲಮಟ್ಟಿ, ತುಂಗಭದ್ರಾ, ಬಸವಸಾಗರ, ಲಿಂಗನಮಕ್ಕಿ ಹಾಗೂ ಭದ್ರಾ ಡ್ಯಾಂಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ಅಂಕಿ-ಅಂಶಗಳು ಇಲ್ಲಿವೆ. ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ಪ್ರಸ್ತುತ ನೀರು ಸಂಗ್ರಹದ ವರದಿ ಪರಿಶೀಲಿಸಿ.

Karnataka Dam Water Level: ಕೆಆರ್‌ಎಸ್, ಆಲಮಟ್ಟಿ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
ತುಂಗಭದ್ರಾ ಜಲಾಶಯ
ಭಾವನಾ ಹೆಗಡೆ
|

Updated on: Aug 22, 2026 | 12:01 PM

Share

ಮುಖ್ಯಾಂಶಗಳು

  • ಆಗಸ್ಟ್ 22 ರಂದು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 108.80 ಅಡಿಯಾಗಿದೆ.
  • ಆಲಮಟ್ಟಿ ಮತ್ತು ಬಸವಸಾಗರ ಡ್ಯಾಂಗಳಿಗೆ ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ.
  • ತುಂಗಭದ್ರಾ ಜಲಾಶಯದ ನೀರು ಸಂಗ್ರಹಣೆಯು 94.819 ಟಿಎಂಸಿಗೆ ಏರಿಕೆಯಾಗಿದೆ.

ಬೆಂಗಳೂರು, ಆಗಸ್ಟ್ 22: ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಕಾವೇರಿ, ಕೃಷ್ಣಾ, ತುಂಗಭದ್ರಾ ಹಾಗೂ ಶರಾವತಿ ಜಲಾನಯನ ಪ್ರದೇಶಗಳ ಪ್ರಮುಖ ಡ್ಯಾಂಗಳಲ್ಲಿನ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ವಿವರಗಳು ಲಭ್ಯವಾಗಿವೆ. ರಾಜ್ಯದ ಕೆಆರ್‌ಎಸ್, ತುಂಗಭದ್ರಾ, ಆಲಮಟ್ಟಿ, ಬಸವಸಾಗರ, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳ ಆಗಸ್ಟ್ 22ರ ಬೆಳಗಿನ ಜಲಸ್ಥಿತಿಯ ಸಂಪೂರ್ಣ ವರದಿ ಇಲ್ಲಿದೆ.

1. ಕೆಆರ್‌ಎಸ್ ಜಲಾಶಯ

ಗರಿಷ್ಠ ಮಟ್ಟ: 124.80 ಅಡಿ ಇಂದಿನ ನೀರಿನ ಮಟ್ಟ: 108.80 ಅಡಿ ಒಳಹರಿವು: 1,395 ಕ್ಯೂಸೆಕ್ ಹೊರಹರಿವು: 3,734 ಕ್ಯೂಸೆಕ್ ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ ಇಂದಿನ ನೀರು ಸಂಗ್ರಹ: 30.532 ಟಿಎಂಸಿ

2. ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ: 1633.00 ಅಡಿ ಇಂದಿನ ನೀರಿನ ಮಟ್ಟ: 1630.20 ಅಡಿ ಒಳಹರಿವು: 8,475 ಕ್ಯೂಸೆಕ್ (ತತ್ಕ್ಷಣದ ಒಳಹರಿವು) ಹೊರಹರಿವು: 8,143 ಕ್ಯೂಸೆಕ್ (ಕಾಲುವೆಗೆ: 7,943 ಕ್ಯೂಸೆಕ್, ನದಿಗೆ: 200 ಕ್ಯೂಸೆಕ್) ಗರಿಷ್ಠ ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ ಇಂದಿನ ನೀರು ಸಂಗ್ರಹ: 94.819 ಟಿಎಂಸಿ

3. ಬಸವಸಾಗರ ಜಲಾಶಯ

ಗರಿಷ್ಠ ಮಟ್ಟ: 492.25 ಮೀಟರ್ ಇಂದಿನ ನೀರಿನ ಮಟ್ಟ: 492.15 ಮೀಟರ್ ಒಳಹರಿವು: 42,000 ಕ್ಯೂಸೆಕ್ ಹೊರಹರಿವು: 32,000 ಕ್ಯೂಸೆಕ್

4. ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ: 519.60 ಮೀಟರ್ ಇಂದಿನ ನೀರಿನ ಮಟ್ಟ: 519.44 ಮೀಟರ್ ಒಳಹರಿವು: 40,245 ಕ್ಯೂಸೆಕ್ ಹೊರಹರಿವು: 44,157 ಕ್ಯೂಸೆಕ್

5. ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ: 1819.00 ಅಡಿ ಇಂದಿನ ನೀರಿನ ಮಟ್ಟ: 1796.00 ಅಡಿ ಒಳಹರಿವು: 7,790 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಜಲಮಟ್ಟ 1816.80 ಅಡಿ ಹಾಗೂ ಶೇ 95.15 ಸಂಗ್ರಹವಿತ್ತು.

6. ಭದ್ರಾ ಜಲಾಶಯ

ಗರಿಷ್ಠ ಮಟ್ಟ: 186 ಅಡಿ 0 ಇಂಚು (2158.0 ಸಮುದ್ರ ಮಟ್ಟದಿಂದ) ಇಂದಿನ ನೀರಿನ ಮಟ್ಟ: 174 ಅಡಿ 11 ಇಂಚು (2146.91 ಸಮುದ್ರ ಮಟ್ಟದಿಂದ) ಒಳಹರಿವು: 4,510 ಕ್ಯೂಸೆಕ್ ಹೊರಹರಿವು: 205 ಕ್ಯೂಸೆಕ್ ಗರಿಷ್ಠ ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ ಇಂದಿನ ನೀರು ಸಂಗ್ರಹ: 58.284 ಟಿಎಂಸಿ ಕಳೆದ ವರ್ಷ ಇದೇ ದಿನ ಜಲಮಟ್ಟ 184 ಅಡಿ ಇತ್ತು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ