AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake Medicine: ರಾಮನಗರ ನಕಲಿ ಔಷಧ ಜಾಲ: ಪೋರ್ಟರ್’ ಆ್ಯಪ್ ಮೂಲಕ ನಡೆಯುತ್ತಿತ್ತು ಸಪ್ಲೈ!

ರಾಮನಗರದ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ತಯಾರಿಕಾ ಜಾಲದ ಸ್ಪೋಟಕ ವಿವರಗಳು ಬಯಲಾಗಿವೆ. ಖಾಸಗಿ 'ಪೋರ್ಟರ್' ಆ್ಯಪ್ ಮೂಲಕ ಪ್ರತಿವಾರ ನೂರಾರು ಬಾಟಲಿ ನಕಲಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದ ಕಿಂಗ್‌ಪಿನ್ ಪ್ರಶಾಂತ್ ತಂತ್ರ ಹಾಗೂ ಪೊಲೀಸರ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Fake Medicine: ರಾಮನಗರ ನಕಲಿ ಔಷಧ ಜಾಲ: ಪೋರ್ಟರ್' ಆ್ಯಪ್ ಮೂಲಕ ನಡೆಯುತ್ತಿತ್ತು ಸಪ್ಲೈ!
ಕಿಂಗ್‌ಪಿನ್ ಪ್ರಶಾಂತ್
ಶಿವಪ್ರಸಾದ್​ ಬಿ.
| Edited By: |

Updated on: Aug 22, 2026 | 10:34 AM

Share

ಮುಖ್ಯಾಂಶಗಳು

  • ರಾಮನಗರ ಫಾರ್ಮ್‌ಹೌಸ್‌ನಿಂದ ಪೋರ್ಟರ್ ಆ್ಯಪ್ ಮೂಲಕ ನಕಲಿ ಔಷಧ ಸರಬರಾಜಾಗುತ್ತಿತ್ತು.
  • ಬೆಂಗಳೂರಿನಲ್ಲಿ ಕುಳಿತು ಪ್ರಶಾಂತ್ ಪ್ರತಿ ವಾರ ನೂರು ಬಾಟಲ್ ಬುಕ್ ಮಾಡುತ್ತಿದ್ದ.
  • ಸ್ಥಳೀಯರ ಅನುಮಾನದ ಮೇರೆಗೆ ದಾಳಿ ನಡೆಸಿ ನಕಲಿ ದಂಧೆಯನ್ನು ಪೊಲೀಸರು ಬಯಲುಗೊಳಿಸಿದರು.

ರಾಮನಗರ, ಆಗಸ್ಟ್ 22: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನಕಲಿ ಔಷಧ ತಯಾರಿಕಾ ಜಾಲದ ತನಿಖೆಯನ್ನು ಇತ್ತೀಚೆಗಷ್ಟೇ ಎಸ್‌ಐಟಿ (SIT) ವಹಿಸಿಕೊಂಡು, ಮುಖ್ಯ ಸೂತ್ರಧಾರ ಪ್ರಶಾಂತ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ರಾಮನಗರದ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ದಂಧೆಯ ಕರಾಳ ಜಾಲ ‘ಟಿವಿ9’ಗೆ ಲಭ್ಯವಾಗಿದೆ.

‘ಪೋರ್ಟರ್’ ಆ್ಯಪ್ ಮೂಲಕ ಡೆಲಿವರಿ, ಬೆಂಗಳೂರಿನಲ್ಲಿ ಕುಳಿತು ಬುಕ್ಕಿಂಗ್!

ಅತ್ಯಂತ ರಹಸ್ಯವಾಗಿ ನಡೆಯುತ್ತಿದ್ದ ಈ ದಂಧೆಗೆ ಆರೋಪಿಗಳು ಖಾಸಗಿ ಡೆಲಿವರಿ ಆ್ಯಪ್ ಒಂದನ್ನು ಬಳಸಿಕೊಳ್ಳುತ್ತಿದ್ದರು. ಕಿಂಗ್‌ಪಿನ್ ಪ್ರಶಾಂತ್ ಹಾಗೂ ಆತನ ಸಹಚರ ವೆಂಕಟೇಶ್, ‘ಪೋರ್ಟರ್’ (Porter) ಆ್ಯಪ್ ಮೂಲಕ ನಕಲಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದರು. ಬೆಂಗಳೂರಿನಲ್ಲಿಯೇ ಕುಳಿತು ಆ್ಯಪ್‌ನಲ್ಲಿ ಬುಕ್ ಮಾಡುತ್ತಿದ್ದ ಪ್ರಶಾಂತ್, ರಾಮನಗರದ ಫಾರ್ಮ್‌ಹೌಸ್‌ನಿಂದ ಔಷಧ ಪಡೆದು ಎಲ್ಲಿಗೆ ತಲುಪಿಸಬೇಕು ಎಂದು ಸೂಚಿಸುತ್ತಿದ್ದ. ಈ ಮೂಲಕ ಪ್ರತಿ ವಾರ ಕನಿಷ್ಠ 100 ಬಾಟಲಿಗಳಷ್ಟು ನಕಲಿ ಔಷಧಗಳನ್ನು ವಿವಿಧ ಕಡೆಗಳಿಗೆ ರವಾನಿಸಲಾಗುತ್ತಿತ್ತು.

ಫಾರ್ಮ್‌ಹೌಸ್ ಮೇಲೆ ಪೊಲೀಸರ ದಾಳಿ ಹೀಗಾಯಿತು!

ಈ ಹಿಂದೆ ದೊಡ್ಡೇರಿ ಗ್ರಾಮದ ರಹಸ್ಯ ಫಾರ್ಮ್‌ಹೌಸ್ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡಿತ್ತು. ವಾರದಲ್ಲಿ 2-3 ಬಾರಿ ಆ ಫಾರ್ಮ್‌ಹೌಸ್‌ಗೆ ಕಾರು ಬಂದು ಹೋಗುತ್ತಿತ್ತು ಹಾಗೂ ಸ್ಥಳೀಯರಿಗೆ ಯಾರಿಗೂ ಒಳಗೆ ಪ್ರವೇಶವಿರಲಿಲ್ಲ. ಯಾರೂ ಹತ್ತಿರ ಬರಬಾರದು ಎಂದು ಕ್ರೂರ ತಳಿಯ ನಾಯಿಯೊಂದನ್ನು ಸಾಕಲಾಗಿತ್ತು.

ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಕೆಲವು ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಿದಾಗಲೂ ಒಳಗಡೆ ಬಿಡಲಿಲ್ಲ. ಇದರಿಂದ ಶಂಕೆ ವ್ಯಕ್ತಪಡಿಸಿದ ಪೊಲೀಸರು ದಿಢೀರ್ ದಾಳಿ ನಡೆಸಿದಾಗ ಈ ಬೃಹತ್ ನಕಲಿ ಔಷಧ ಜಾಲ ಬೆಳಕಿಗೆ ಬಂದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More