Karnataka Dam Water Level: ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ, ಒಳಹರಿವು ಭಾರಿ ಏರಿಕೆ!
ಕರ್ನಾಟಕದ ಜಲಾಶಯಗಳ (ಆಗಸ್ಟ್ 26) ನೀರಿನ ಮಟ್ಟ: ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಕೆಆರ್‌ಎಸ್, ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಭದ್ರಾ ಡ್ಯಾಂಗಳಿಗೆ ನೀರಿನ ಒಳಹರಿವು ತೀವ್ರಗೊಂಡಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ಇಂದಿನ ಜಲಾಶಯಗಳ ನೀರಿನ ಸಂಪೂರ್ಣ ಮಾಹಿತಿಗಾಗಿ ಓದಿ.

ಮುಖ್ಯಾಂಶಗಳು
- ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ, ಡ್ಯಾಂಗಳಿಗೆ ಒಳಹರಿವು ಗಣನೀಯ ಏರಿಕೆ.
- ಭರ್ತಿಯತ್ತ ಆಲಮಟ್ಟಿ ಜಲಾಶಯ; ಕೆಆರ್‌ಎಸ್ ನೀರಿನ ಮಟ್ಟ 108.63 ಅಡಿಗೆ.
- ಲಿಂಗನಮಕ್ಕಿ, ಭದ್ರಾ, ತುಂಗಭದ್ರಾಗೂ ಹರಿದು ಬಂದ ಭಾರೀ ಪ್ರಮಾಣದ ನೀರು.
ಬೆಂಗಳೂರು, ಆಗಸ್ಟ್ 26: ರಾಜ್ಯಾದ್ಯಂತ ವರುಣನ ಕೃಪೆ ಮುಂದುವರಿದಿದ್ದು, ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಪರಿಣಾಮವಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಕೆಆರ್‌ಎಸ್, ಆಲಮಟ್ಟಿ, ಲಿಂಗನಮಕ್ಕಿ ಸೇರಿದಂತೆ ಹಲವು ಡ್ಯಾಂಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇದೇ ರೀತಿ ಮಳೆ ಮುಂದುವರಿದು ನೀರಿನ ಹರಿವು ಹೆಚ್ಚಾದರೆ ಡ್ಯಾಂಗಳು ಭರ್ತಿಯಾಗುವ ಸಾಧ್ಯತೆಯಿದ್ದು, ತಮಿಳುನಾಡಿಗೆ ನೀರು ಹರಿಸುವ ಸಂಕಟವೂ ಸೇರಿದಂತೆ ಹಲವು ನೀರಿನ ಸಮಸ್ಯೆಗಳು ಪರಿಹಾರವಾಗಲಿವೆ.
1. ಕೆಆರ್‌ಎಸ್ ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 108.63 ಅಡಿ
- ಒಳಹರಿವು: 9,438 ಕ್ಯೂಸೆಕ್
- ಹೊರಹರಿವು: 4,478 ಕ್ಯೂಸೆಕ್
- ಸದ್ಯದ ಸಂಗ್ರಹ: 30.367 ಟಿಎಂಸಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಏರಿಕೆಯಾಗಿದೆ.
2. ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 519.57 ಮೀಟರ್
- ಒಳಹರಿವು: 28,746 ಕ್ಯೂಸೆಕ್
- ಹೊರಹರಿವು: 22,658 ಕ್ಯೂಸೆಕ್
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ ಡ್ಯಾಂ) ಭರ್ತಿಯ ಹಂತಕ್ಕೆ ತಲುಪಿದೆ.
3. ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ನೀರಿನ ಮಟ್ಟ: 1797.00 ಅಡಿ
- ಒಳಹರಿವು: 10,451 ಕ್ಯೂಸೆಕ್
- ಲೈವ್ ಶೇಕಡಾವಾರು ಸಂಗ್ರಹ: 58.52%
- ಇಂದಿನ ನೀರಿನ ಮಟ್ಟ ಏರಿಕೆ: 0.20 ಅಡಿ
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1817.00 ಅಡಿ ಇತ್ತು. ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಲಿಂಗನಮಕ್ಕಿ ಜಲಾಶಯಕ್ಕೂ ನೀರಿನ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.
4. ಭದ್ರಾ ಜಲಾಶಯ
- ಗರಿಷ್ಠ ಮಟ್ಟ (ಪೂರ್ಣ ಟ್ಯಾಂಕ್ ಮಟ್ಟ): 186 ಅಡಿ 0 ಇಂಚು (ಸಮುದ್ರ ಮಟ್ಟದಿಂದ 2158.0 ಅಡಿ)
- ಒಟ್ಟು ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ
- ಇಂದಿನ ನೀರಿನ ಮಟ್ಟ: 176 ಅಡಿ 4 ಇಂಚು (ಸಮುದ್ರ ಮಟ್ಟದಿಂದ 2148.33 ಅಡಿ)
- ಇಂದಿನ ಸಂಗ್ರಹ ಪ್ರಮಾಣ: 59.898 ಟಿಎಂಸಿ
- ಒಳಹರಿವು: 5,739 ಕ್ಯೂಸೆಕ್
- ಹೊರಹರಿವು: 206 ಕ್ಯೂಸೆಕ್ (ನದಿಸ್ಪೂಯಿರ್ ಗೇಟ್: 100 ಕ್ಯೂಸೆಕ್)
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 184 ಅಡಿ 5 ಇಂಚು ಹಾಗೂ ಸಂಗ್ರಹ 69.553 ಟಿಎಂಸಿ ಇತ್ತು. ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಯಲ್ಲೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.
5. ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 84.00 ಅಡಿ
- ಇಂದಿನ ನೀರಿನ ಮಟ್ಟ: 72.79 ಅಡಿ
- ಒಳಹರಿವು: 9,487 ಕ್ಯೂಸೆಕ್
- ನದಿಗೆ ಹೊರಹರಿವು: 6,100 ಕ್ಯೂಸೆಕ್
- ಕಾಲುವೆಗೆ ಹೊರಹರಿವು: 1,660 ಕ್ಯೂಸೆಕ್
- ಒಟ್ಟು ಹೊರಹರಿವು: 7,760 ಕ್ಯೂಸೆಕ್
- ಇಂದಿನ ಸಂಗ್ರಹ: 13.09 ಟಿಎಂಸಿ (ಲೈವ್ ಸ್ಟೋರೇಜ್: 3.28 TMC)
ಮೈಸೂರು ಭಾಗದ ಜಲಾಶಯ ಪ್ರದೇಶದಲ್ಲಿಯೂ ಮಳೆಯ ಆರ್ಭಟವಿದ್ದು, 30 ಮಿ.ಮೀ ಮಳೆ ದಾಖಲಾಗಿದೆ.
6. ತುಂಗಭದ್ರಾ ಡ್ಯಾಂ
- ಗರಿಷ್ಠ ಸಾಮರ್ಥ್ಯ: 105 ಟಿಎಂಸಿ
- ಇಂದಿನ ಸಂಗ್ರಹ ಮಟ್ಟ: 95 ಟಿಎಂಸಿ
- ಒಳಹರಿವು: 10,632 ಕ್ಯೂಸೆಕ್
- ಹೊರಹರಿವು: 7,968 ಕ್ಯೂಸೆಕ್
- ಕಾಲುವೆಗಳಿಗೆ ಹರಿವು: 7,935 ಕ್ಯೂಸೆಕ್
- ನದಿ ಹರಿವು: 33 ಕ್ಯೂಸೆಕ್
ತುಂಗಭದ್ರಾ ಜಲಾಶಯದಲ್ಲೂ ನೀರು ಸಮೃದ್ಧವಾಗಿದ್ದು, ನದಿ ಹಾಗೂ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




