AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಆರ್‌ಎಸ್, ಆಲಮಟ್ಟಿ ಸೇರಿದಂತೆ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ!

ಕರ್ನಾಟಕದ ಜಲಾಶಯಗಳ (ಆಗಸ್ಟ್ 31) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಆಲಮಟ್ಟಿ, ಬಸವಸಾಗರ ಮತ್ತು ಲಿಂಗನಮಕ್ಕಿ ಡ್ಯಾಂಗಳ ಆಗಸ್ಟ್ 31ರ ಇಂದಿನ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ವಿವರ ಇಲ್ಲಿದೆ. ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುತ್ತಿರುವುದಕ್ಕೆ ಸ್ಥಳೀಯ ರೈತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಜಲಾಶಯಗಳ ಸಂಪೂರ್ಣ ಸಂಗ್ರಹಣಾ ಸಾಮರ್ಥ್ಯ ಮತ್ತು ನೀರಿನ ವಿವರ ಇಲ್ಲಿದೆ.

Karnataka Dam Water Level: ಆರ್‌ಎಸ್, ಆಲಮಟ್ಟಿ ಸೇರಿದಂತೆ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ!
ಬಸವಸಾಗರ ಜಲಾಶಯ
ಭಾವನಾ ಹೆಗಡೆ
|

Updated on: Aug 31, 2026 | 10:57 AM

Share

ಮುಖ್ಯಾಂಶಗಳು

  • ಕೆಆರ್‌ಎಸ್, ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ.
  • ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಯುತ್ತಿದೆ.
  • ಸರ್ಕಾರದ ನೀರು ಹರಿಸುವ ನಿರ್ಧಾರಕ್ಕೆ ಸ್ಥಳೀಯ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಆಗಸ್ಟ್ 31: ರಾಜ್ಯದಲ್ಲಿ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿತ್ತು. ಆದರೆ ಇದೀಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕಾವೇರಿ ನದಿಯ ಜೀವನಾಡಿ ಕೆಆರ್‌ಎಸ್ ಜಲಾಶಯದಿಂದಲೂ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ರಾಜ್ಯದ ರೈತರ ಬೆಳೆಗಳಿಗೆ ನೀರು ಒದಗಿಸಲು ನಿರಾಕರಿಸುತ್ತಿರುವ ಸರ್ಕಾರ, ತಮಿಳುನಾಡಿನ ಕೃಷಿಗಾಗಿ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಸ್ಥಳೀಯ ರೈತ ಸಮುದಾಯದಿಂದ ತೀವ್ರ ಆಕ್ರೋಶ ಹಾಗೂ ಖಂಡನೆ ವ್ಯಕ್ತವಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳ ಆಗಸ್ಟ್ 31ರ ಇಂದಿನ ನೀರಿನ ಮಟ್ಟ ಹಾಗೂ ಒಳ-ಹೊರಹರಿವಿನ ವಿವರಗಳು ಕೆಳಗಿನಂತಿವೆ:

1. ಕೆಆರ್‌ಎಸ್ ಜಲಾಶಯ (ಮಂಡ್ಯ)

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ.

  • ಗರಿಷ್ಠ ನೀರಿನ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 110.04 ಅಡಿ
  • ಒಳಹರಿವು: 5,426 ಕ್ಯೂಸೆಕ್
  • ಹೊರಹರಿವು: 7,170 ಕ್ಯೂಸೆಕ್
  • ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ನೀರು ಸಂಗ್ರಹ: 31.381 ಟಿಎಂಸಿ

2. ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರವು ಜಲಾಶಯ ಭರ್ತಿಯಾಗುವ ಹಂತ ತಲುಪಿದೆ.

  • ಗರಿಷ್ಠ ನೀರಿನ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.56 ಮೀಟರ್
  • ಒಳಹರಿವು: 21,878 ಕ್ಯೂಸೆಕ್
  • ಹೊರಹರಿವು: 23,903 ಕ್ಯೂಸೆಕ್

3. ಬಸವಸಾಗರ ಜಲಾಶಯ (ಯಾದಗಿರಿ)

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯದಲ್ಲೂ ಸಹ ನೀರು ಗರಿಷ್ಠ ಮಟ್ಟದಲ್ಲಿದ್ದು, ಬೃಹತ್ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ.

  • ಗರಿಷ್ಠ ನೀರಿನ ಮಟ್ಟ: 492.25 ಮೀಟರ್
  • ಇಂದಿನ ನೀರಿನ ಮಟ್ಟ: 492.23 ಮೀಟರ್
  • ಒಳಹರಿವು: 20,000 ಕ್ಯೂಸೆಕ್
  • ಹೊರಹರಿವು: 16,000 ಕ್ಯೂಸೆಕ್

4. ಲಿಂಗನಮಕ್ಕಿ ಜಲಾಶಯ

  • ಇಂದಿನ ನೀರಿನ ಮಟ್ಟ: 1798.00 ಅಡಿ (ಗರಿಷ್ಠ ಮಟ್ಟ: 1819 ಅಡಿ)
  • ಒಳಹರಿವು: 11,256 ಕ್ಯೂಸೆಕ್
  • ಲೈವ್ ಸಂಗ್ರಹ ಸಾಮರ್ಥ್ಯ: 60.07
  • ಇಂದಿನ ನೀರಿನ ಏರಿಕೆ: 0.30 ಅಡಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ