AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾರರ ಪಟ್ಟಿ ಪರಿಷ್ಕರಣೆ; ಆ. 8ರೊಳಗೆ ಫಾರ್ಮ್ ಸಲ್ಲಿಸದಿದ್ದರೆ ವೋಟರ್ ಐಡಿಯಿಂದ ಹೆಸರು ಔಟ್; 17.19 ಲಕ್ಷ ಫಾರ್ಮ್‌ಗಳಲ್ಲಿ ಸರಿಯಾದ ಮಾಹಿತಿ ಇಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 17.19 ಲಕ್ಷ ಫಾರ್ಮ್‌ಗಳಿಗೆ ಪ್ರೊಜೆನಿ ಮ್ಯಾಪಿಂಗ್ ಮಾಹಿತಿ ಲಭ್ಯವಿಲ್ಲ. ಮ್ಯಾಪಿಂಗ್ ವಿವರಗಳಿಲ್ಲದಿದ್ದರೂ, ಮತದಾರರು ತಮ್ಮ ಫಾರ್ಮ್‌ಗಳನ್ನು ಆಗಸ್ಟ್ 8ರೊಳಗೆ ಮತಗಟ್ಟೆ ಹಂತದ ಅಧಿಕಾರಿಗಳಿಗೆ (BLO) ಕಡ್ಡಾಯವಾಗಿ ಸಲ್ಲಿಸಬೇಕು. ನಂತರ ಪ್ರಕಟವಾಗುವ ಕರಡು ಪಟ್ಟಿಯಲ್ಲಿ ಹೆಸರು ಸೇರಲಿದೆ. ದೋಷಗಳಿದ್ದಲ್ಲಿ, ಸೂಕ್ತ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳಬಹುದು.

ಮತದಾರರ ಪಟ್ಟಿ ಪರಿಷ್ಕರಣೆ; ಆ. 8ರೊಳಗೆ ಫಾರ್ಮ್ ಸಲ್ಲಿಸದಿದ್ದರೆ ವೋಟರ್ ಐಡಿಯಿಂದ ಹೆಸರು ಔಟ್; 17.19 ಲಕ್ಷ ಫಾರ್ಮ್‌ಗಳಲ್ಲಿ ಸರಿಯಾದ ಮಾಹಿತಿ ಇಲ್ಲ
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on: Jul 23, 2026 | 9:24 AM

Share

ಬೆಂಗಳೂರು, ಜು.23: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಸಂದರ್ಭದಲ್ಲಿ, ಬೇಸ್ ವರ್ಷದ (ಆಧಾರ ವರ್ಷ) ವಿವರಗಳನ್ನು ಹಿಂಪಡೆಯಲು ಸಾಧ್ಯವಾಗದ ಕಾರಣ ಬರೋಬ್ಬರಿ 17.19 ಲಕ್ಷ ಎನ್ಯುಮರೇಶನ್ (ಗಣತಿ) ಫಾರ್ಮ್‌ಗಳು ‘ಪ್ರೊಜೆನಿ ಮ್ಯಾಪಿಂಗ್’ (ವಂಶಾವಳಿ/ವಂಶವೃಕ್ಷ ಜೋಡಣೆ) ಮಾಹಿತಿಯಿಲ್ಲದೆ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯಾದ್ಯಂತ ಮನೆ-ಮನೆ ಗಣತಿಯ ವೇಳೆ ವಿತರಿಸಲಾದ ಒಟ್ಟು 5.53 ಕೋಟಿ ಎಸ್‍ಐಆರ್ ಫಾರ್ಮ್‌ಗಳಲ್ಲಿ ಇದುವರೆಗೆ 3.67 ಕೋಟಿ (ಶೇ. 66.35) ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. 1.56 ಕೋಟಿ ಮತದಾರರ ಸ್ವಯಂ ಮ್ಯಾಪಿಂಗ್, 1.93 ಕೋಟಿ ಮತದಾರರು ವಂಶಾವಳಿ ಮ್ಯಾಪಿಂಗ್, 17.19 ಲಕ್ಷ (ಶೇ. 3.1) ಫಾರ್ಮ್‌ಗಳನ್ನು ಯಾವುದೇ ಮ್ಯಾಪಿಂಗ್ ವಿವರಗಳಿಲ್ಲದೆ ಸಲ್ಲಿಸಲಾಗಿದೆ.

ಮ್ಯಾಪಿಂಗ್ ವಿವರಗಳು ಲಭ್ಯವಿಲ್ಲದಿದ್ದರೂ ಸಹ, ಮತದಾರರು ತಮ್ಮ ಫಾರ್ಮ್‌ಗಳನ್ನು ಆಗಸ್ಟ್ 8 ರೊಳಗೆ ತಮ್ಮ ಮತಗಟ್ಟೆ ಹಂತದ ಅಧಿಕಾರಿಗಳಿಗೆ (BLO) ಕಡ್ಡಾಯವಾಗಿ ಸಲ್ಲಿಸಬೇಕು.  ಮ್ಯಾಪಿಂಗ್ ವಿವರಗಳು ಲಭ್ಯವಿಲ್ಲದಿದ್ದರೂ ಸಹ, ಮತದಾರರು ತಮ್ಮ ಫಾರ್ಮ್‌ಗಳನ್ನು ಆಗಸ್ಟ್ 8 ರೊಳಗೆ ತಮ್ಮ ಮತಗಟ್ಟೆ ಹಂತದ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಫಾರ್ಮ್‌ಗಳನ್ನು ಸಲ್ಲಿಸಲು ಕುಟುಂಬದ ಯಾವುದೇ ವಯಸ್ಕ ಸದಸ್ಯರು/ಪ್ರಬುದ್ಧರು ಕ್ರಮ ಕೈಗೊಳ್ಳಬಹುದು. ಫಾರ್ಮ್ ಸಲ್ಲಿಸುವ ಪ್ರತಿಯೊಬ್ಬರ ಹೆಸರನ್ನು ಆಗಸ್ಟ್ 17 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕ್ಕುಮಾರ್ ಅವರು ಮತದಾರರಲ್ಲಿ ವಿನಂತಿಸಿದ್ದಾರೆ.

ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ ಅಥವಾ ಡೇಟಾ ಇಲ್ಲದಿದ್ದರೆ ಮತದಾರರಿಗೆ ನೋಟಿಸ್ ನೀಡಲಾಗುವುದು. ಅವರು ಫಾರ್ಮ್ ಹಿಂಭಾಗದಲ್ಲಿ ನಮೂದಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ರಾಜ್ಯದಲ್ಲಿ ‘ASDDO’ (ಆಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಅದರ್ಸ್) ವಿಭಾಗದಡಿ ಗುರುತಿಸಲಾದ ಮತದಾರರ ಸಂಖ್ಯೆ 44.84 ಲಕ್ಷಕ್ಕೆ ಏರಿಕೆಯಾಗಿದೆ. ಗೈರುಹಾಜರಿ 5.87 ಲಕ್ಷ, ಶಾಶ್ವತವಾಗಿ ಸ್ಥಳಾಂತರ 26.32 ಲಕ್ಷ, ಮೃತಪಟ್ಟವರು 9.81 ಲಕ್ಷ, ನಕಲಿ ದಾಖಲಾತಿ 2.70 ಲಕ್ಷ, ಇತರರು 12,344 ಜನ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ: 3 ಸಾಕಾನೆಗಳೊಂದಿಗೆ ಬರೋಬ್ಬರಿ 6 ಗಂಟೆ ಭರ್ಜರಿ ಕಾರ್ಯಾಚರಣೆ

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿದ ಗಮನ

ಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿಯೇ ಬರೋಬ್ಬರಿ 23.86 ಲಕ್ಷ ASDDO ಪ್ರಕರಣಗಳು ದಾಖಲಾಗಿವೆ. ಇಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಕೇವಲ ಶೇ. 30 ರಷ್ಟಾಗಿದೆ. ಬೆಂಗಳೂರಿನಲ್ಲಿ 4.51 ಲಕ್ಷ ಗೈರುಹಾಜರಿ, 16.62 ಲಕ್ಷ ಸ್ಥಳಾಂತರಗೊಂಡವರು, 2.40 ಲಕ್ಷ ಮೃತಪಟ್ಟವರು, 27,480 ನಕಲಿ ಹಾಗೂ 5,189 ಇತರೆ ದಾಖಲೆಗಳು ಪತ್ತೆಯಾಗಿವೆ.

ಉತ್ತರಹಳ್ಳಿ (40 ಭಾಗಗಳು) ಮತ್ತು ಯಲಹಂಕದಲ್ಲಿ (24 ಭಾಗಗಳು) 2002ರ ಪಟ್ಟಿಯ ‘ಕಾಣೆಯಾದ’ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಆರಂಭದಲ್ಲಿ ಪಿಡಿಎಫ್ ಆವೃತ್ತಿಗಳನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದ್ದು, ಎಕ್ಸೆಲ್ ಫೈಲ್‌ಗಳನ್ನು ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿತ್ತು. ಪ್ರಸ್ತುತ ಈ ದೋಷವನ್ನು ಪರಿಹರಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್