AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರ್ವೆಯಲ್ಲಿಯೂ ಹೆಸರು ಪಡೆಯಿತು ಕಾರವಾರದ ರೈಲು ನಿಲ್ದಾಣ; ಅದ್ಭುತ ಹಸಿರು ಎಂದು ಟ್ವೀಟ್​

Karwar Railway Station: ನಾರ್ವೆಯ ಅಂತರಾಷ್ಟ್ರಿಯ ಅಭಿವೃದ್ಧಿ ಖಾತೆಯ ಮಾಜಿ ಸಚಿವ ಎರಿಕ್​ ಸೋಲ್ಹಿಮ್​ ಅವರು ತಮ್ಮ ಟ್ವಿಟರ್​ ಅಧಿಕೃತ ಖಾತೆಯಲ್ಲಿ ಕಾರವಾರದ ರೈಲು ನಿಲ್ದಾಣದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ನಾರ್ವೆಯಲ್ಲಿಯೂ ಹೆಸರು ಪಡೆಯಿತು ಕಾರವಾರದ ರೈಲು ನಿಲ್ದಾಣ; ಅದ್ಭುತ ಹಸಿರು ಎಂದು ಟ್ವೀಟ್​
ಕಾರವಾರದ ರೈಲ್ವೆ ನಿಲ್ದಾಣ
TV9 Web
| Edited By: |

Updated on:Jul 13, 2021 | 1:18 PM

Share

Karwar Railway Station: ಹಚ್ಚಹಸಿರು ಸೊಬಗಿನ ಸೌಂದರ್ಯದ ನಡುವೆ ಹಾಯಾಗಿ ರೈಲಿನಲ್ಲಿ ಪ್ರಯಾಣ ಮಾಡುವುದೇ ಮನಸ್ಸಿಗೆ ಖುಷಿ ತರುತ್ತದೆ. ಜಿಟಿಜಿಟಿ ಮಳೆಯಲ್ಲಿ ಈಗತಾನೆ ಮಿಂದು ನಿಂತ ಹಸಿರು ಪ್ರಕೃತಿಯ ಮಧ್ಯೆ ರೈಲು ಸಾಗುತ್ತಿರುವಾಗ ಕಿಟಕಿಯಿಂದಾಚೆ ನೋಡುವ ಖುಷಿ ಇನ್ನೆಲ್ಲೂ ಸಿಗದು. ಕಾರವಾರದ ಹಚ್ಚ ಹಸುರಿನ ಪ್ರಕೃತಿಯ ನಡುವೆ ಇರುವ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣ ನಾರ್ವೆ ದೇಶದಲ್ಲಿಯೂ ಹೆಸರು ಪಡೆಯುತ್ತಿದೆ. ಸುಂದರ ಪ್ರಕೃತಿಯ ನಡುವೆ ಪ್ರಯಾಣ ಕೈಗೊಳ್ಳುವುದು ಭಾಗ್ಯ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ನಾರ್ವೆಯ ಅಂತರಾಷ್ಟ್ರಿಯ ಅಭಿವೃದ್ಧಿ ಖಾತೆಯ ಮಾಜಿ ಸಚಿವ ಎರಿಕ್​ ಸೋಲ್ಹಿಮ್​ ಅವರು ತಮ್ಮ ಟ್ವಿಟರ್​ ಅಧಿಕೃತ ಖಾತೆಯಲ್ಲಿ ಕಾರವಾರದ ರೈಲು ನಿಲ್ದಾಣದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅತ್ಯಂತ ಹಸಿರಾದ ನಿಲ್ದಾಣಗಳಲ್ಲಿ ಕಾರವಾರದ ರೈಲ್ವೆ ನಿಲ್ದಾಣವೂ ಸಹ ಒಂದಾಗಿರಬೇಕು. ಅದ್ಭುತವಾದ ಹಸಿರು ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗುತ್ತಿದ್ದಂತೆಯೇ 5,800ಕ್ಕಿಂತಲೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. 660 ರೀಟ್ವೀಟ್​ಗಳೂ ಸಹ ಲಭಿಸಿವೆ. ಸುಂದರ ಪ್ರಕೃತಿಯ ನಡುವೆ ಸಾಗುವ ರೈಲ್ವೆಯಲ್ಲಿ ಪ್ರಯಾಣಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಪರಿಸರದ ಸೊಬಗೆ ಹಾಗೇ..! ನಿಸರ್ಗದ ಸೌಂದರ್ಯ ನೋಡುತ್ತಾ ನಿಂತರೆ ಮೈಮರೆಯುವುದಂತೂ ಸತ್ಯ. ನಿಸರ್ಗದ ಸಹಜತೆ ಜನರಿಗೆ ಖುಷಿಕೊಡುವುದಂತೂ ಸತ್ಯ.

ಇದನ್ನೂ ಓದಿ:

ಮೈಸೂರು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ

ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ, 2ಬಿ ಹಂತಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

Published On - 11:30 am, Tue, 13 July 21

Follow Us
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ