ರೇವಣ್ಣ ವಿರುದ್ಧದ ಕಿಡ್ನ್ಯಾಪ್​ ಕೇಸ್​: ಸಂತ್ರಸ್ತ ಮಹಿಳೆ ಸಿಕ್ಕ ತೋಟದ ಸಿಬ್ಬಂದಿ ಸ್ಫೋಟಕ ಹೇಳಿಕೆ

ಮೈಸೂರಿನಲ್ಲಿ ಟಿವಿ9 ಜೊತೆ ಸಂತ್ರಸ್ತ ಮಹಿಳೆ ರಕ್ಷಣೆಯಾದ ತೋಟದ ಸಿಬ್ಬಂದಿ ಸ್ವಾಮಿ ಮಾತನಾಡಿದ್ದು, ಮೂರು ದಿನಗಳ ಹಿಂದೆಯಷ್ಟೇ ಆ ಮಹಿಳೆ ಇಲ್ಲಿಗೆ ಬಂದಿದ್ದರು. ತೋಟದ ಮನೆಯಲ್ಲಿ ಸಂತ್ರಸ್ತ ಮಹಿಳೆ ಇದ್ದಿದ್ದು ಸತ್ಯ. ತೋಟದ ಮನೆಗೆ ಶಾಸಕ ಹೆಚ್​.ಡಿ.ರೇವಣ್ಣ ಬಂದಿಲ್ಲ ಎಂದು ಹೇಳಿದ್ದಾರೆ. ಮಹಿಳೆಯನ್ನು ಹುಣಸೂರು ನಿಲ್ದಾಣ ಬಳಿ ಹಿಡಿದುಕೊಂಡು ಹೋದರು ಎಂದಿದ್ದಾರೆ.

Follow us
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 05, 2024 | 11:12 AM

ಮೈಸೂರು, ಮೇ 05: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್​ ಆರೋಪ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ (HD Revanna) ಬಂಧನವಾಗಿದೆ. ಎಸ್​ಐಟಿ (SIT) ಅಧಿಕಾರಿಗಳು ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಸಂತ್ರಸ್ತ ಮಹಿಳೆ ರಕ್ಷಣೆಯಾದ ತೋಟದ ಸಿಬ್ಬಂದಿ ಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೂರು ದಿನಗಳ ಹಿಂದೆಯಷ್ಟೇ ಆ ಮಹಿಳೆ ಇಲ್ಲಿಗೆ ಬಂದಿದ್ದರು. ತೋಟದ ಮನೆಯಲ್ಲಿ ಸಂತ್ರಸ್ತ ಮಹಿಳೆ ಇದ್ದಿದ್ದು ಸತ್ಯ. ತೋಟದ ಮನೆಗೆ ಶಾಸಕ ಹೆಚ್​.ಡಿ.ರೇವಣ್ಣ ಬಂದಿಲ್ಲ ಎಂದು ಹೇಳಿದ್ದಾರೆ.

ಇಲ್ಲಿಗೆ ಕೆಲಸಕ್ಕೆ ಬಂದಿದ್ದೇನೆ ಅಂತಾ ಆ ಮಹಿಳೆ ಹೇಳಿದ್ದರು. ಸಂಘಕ್ಕೆ ದುಡ್ಡು ಕಟ್ಟಬೇಕು ಅದಕ್ಕೆ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿದರು. ರೇವಣ್ಣ ಆಪ್ತ ರಾಜಗೋಪಾಲ್​ ಕೂಡ ಇದೇ ತೋಟದಲ್ಲಿ ಇದ್ದರು. ಮೊನ್ನೆ ರಾತ್ರಿ ರಾಜಗೋಪಾಲ್​ನನ್ನು ಪೊಲೀಸರು ಕರೆದುಕೊಂಡು ಹೋದರು. ನಿನ್ನೆ ಪೊಲೀಸರು ಬಂದಾಗ ಆ ಮಹಿಳೆ ಬೆಳಗ್ಗೆ ತಪ್ಪಿಸಿಕೊಂಡು ಹೋದ್ದರು. ಮಹಿಳೆಯನ್ನು ಹುಣಸೂರು ನಿಲ್ದಾಣ ಬಳಿ ಹಿಡಿದುಕೊಂಡು ಹೋದರು. ಪೊಲೀಸರು ನನಗು ಕೂಡ ಹೊಡೆದರು ಎಂದು ತೋಟದ ಸಿಬ್ಬಂದಿ ಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಹೆಚ್​ಡಿ ರೇವಣ್ಣ ಮುಂದಿರುವ ಹಾದಿಗಳೇನು?

ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ರೇವಣ್ಣ ಆಪ್ತ ರಾಜಗೋಪಾಲ್ ತೋಟದಲ್ಲಿದ್ದ ಸಂತ್ರಸ್ಥ ಮಹಿಳೆಯ ರಕ್ಷಣೆ ಮಾಡಲಾಗಿದೆ. ಸುಮಾರು 25 ಎಕರೆಯ ತೋಟ ಇದಾಗಿದ್ದು, ತೋಟದಲ್ಲಿ ಎರಡು ಕುಟುಂಬಗಳು ವಾಸಿಸುತ್ತಿವೆ. ತೋಟದ ಮನೆಯಲ್ಲಿ ಹಸು, ಕುರಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ.

ಏಪ್ರಿಲ್ 29 ರಂದು ಮಹಿಳೆ ಕಾಣೆಯಾಗಿದ್ದರು ಅಂದಿನಿಂದ ಮಹಿಳೆಯನ್ನ ರೇವಣ್ಣ ಆಪ್ತರು ತೋಟದಲ್ಲಿ ತಂದಿರಿಸಿದ್ದರು. ಹೀಗಾಗಿ ತಡರಾತ್ರಿ 40ಕ್ಕೂ ಹೆಚ್ಚು ಪೊಲೀಸರು ಬಂದು ತಲಾಷ್ ಮಾಡಿದ್ದರು. ರಾಜಗೋಪಾಲ್​ ವಿಶಾಲ ತೆಂಗಿನ ತೋಟದಲ್ಲಿದ್ದರು.

ಇಡೀ ಪ್ರಕರಣ ನಿಂತಿರುವುದೇ ಸಂತ್ರಸ್ತೆಯೇ ಹೇಳಿಕೆ ಮೇಲೆ

ಸದ್ಯ ಇಡೀ ಪ್ರಕರಣ ಸಂತ್ರಸ್ತೆಯೇ ಹೇಳಿಕೆ ಮೇಲೆ ನಿಂತಿದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ರೇವಣ್ಣರನ್ನು ಮಧ್ಯಾಹ್ನ 2 ಗಂಟೆಗೆ ಜಡ್ಜ್‌ ಮುಂದೆ ಎಸ್‌ಐಟಿ ಹಾಜರುಪಡಿಸಲಿದೆ. ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣನ ಭವಿಷ್ಯ ನಿಂತಿದೆ. ಯಾರೂ ಕಿಡ್ನ್ಯಾಪ್‌ ಮಾಡಿಲ್ಲ ನಾನೇ ಹೋಗಿದ್ದೆ ಅಂದ್ರೆ ರಿಲೀಫ್ ಸಾಧ್ಯತೆ ಇದೆ. ಒಂದು ವೇಳೆ ಕಿಡ್ನ್ಯಾಪ್ ಮಾಡಿದ್ದರು ಅಂತಾ ಸಂತ್ರಸ್ತೆ ಹೇಳಿದರೆ ರೇವಣ್ಣಗೆ ಜೈಲು ಫಿಕ್ಸ್‌ ಸಾಧ್ಯತೆ ಇದೆ. ಹೀಗಾಗಿ ಪ್ರಜ್ವಲ್‌ ರೇವಣ್ಣ ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಎಸ್‌ಐಟಿ ಪ್ರಶ್ನೆಗಳಿಗೆ ರೇವಣ್ಣ ಕೊಟ್ಟ ಉತ್ತರವೇನು?

ಈಗಾಗಲೇ ಸಂತ್ರಸ್ತೆಯ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಹೀಗಾಗಿ ಅಪ್ಪ, ಮಗನ ಭವಿಷ್ಯ ಸಂತ್ರಸ್ತೆಯ ಮೇಲೆಯೇ ನಿಂತಿದೆ. ಸಂತ್ರಸ್ತ ಮಹಿಳೆಯ ಹೇಳಿಕೆಯೇ ಅಂತಿಮವಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.