ಕೆಎಂಎಫ್​​ ಇದೀಗ ಆರ್​ಸಿಬಿ ತಂಡದ ಅಫಿಶಿಯಲ್​ ಪಾರ್ಟ್​ನರ್: ಕೊಹ್ಲಿ, ಪಡಿಕಲ್​ರಿಂದ ಉತ್ಪನ್ನಗಳ ಪ್ರಚಾರ

ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕನ್ನಡಿಗರ ಹೆಮ್ಮೆಯ ಬ್ರಾಂಡ್​ ಕೆಎಂಎಫ್​​ ಆರ್​​ಸಿಬಿಗೆ ಸಾಥ್​ ನೀಡಿದೆ. 2026ರ ಆವೃತ್ತಿಯಲ್ಲಿ ಆರ್​ಸಿಬಿಗೆ ಕೆಎಂಎಫ್​​ ಪ್ರಾಯೋಜಕತ್ವ ನೀಡಿದೆ. ಒಟ್ಟು 4 ಕೋಟಿ ರೂ ವೆಚ್ಚದಲ್ಲಿ ಒಂದು ವರ್ಷದ ಟೆಂಡರ್ ಪಡೆದಿದೆ. ಆ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ.

ಕೆಎಂಎಫ್​​ ಇದೀಗ ಆರ್​ಸಿಬಿ ತಂಡದ ಅಫಿಶಿಯಲ್​ ಪಾರ್ಟ್​ನರ್: ಕೊಹ್ಲಿ, ಪಡಿಕಲ್​ರಿಂದ ಉತ್ಪನ್ನಗಳ ಪ್ರಚಾರ
ನಂದಿನಿ ಉತ್ಪನ್ನಗಳು
Image Credit source: tv9 kannada
Edited By:

Updated on: Mar 24, 2026 | 6:04 PM

ಬೆಂಗಳೂರು, ಮಾರ್ಚ್​ 24: ಐಪಿಎಲ್ (IPL)​​ ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಿಲ್ಲದ ಸಂಭ್ರಮ. ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ಸ್ ​​ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಆರ್​ಸಿಬಿ ಪಂದ್ಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡಿಗರ ಹೆಮ್ಮೆಯ ಬ್ರಾಂಡ್​ ಕೆಎಂಎಫ್ (KMF)​​ 2026ರ ಆವೃತ್ತಿಯಲ್ಲಿ ಆರ್​ಸಿಬಿಗೆ ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ.

2026ರ ಆವೃತ್ತಿಯಲ್ಲಿ ಕನ್ನಡಿಗರ ಹೆಮ್ಮೆಯ ಬ್ರಾಂಡ್​ ಕೆಎಂಎಫ್ ಪ್ರಾಯೋಜಕತ್ವ ನೀಡುವ ಮೂಲಕ ಆರ್​ಸಿಬಿಗೆ ಸಾಥ್​ ನೀಡಿದೆ. ಆರ್​ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಹಾಗಾಗಿ ಪ್ರಾಯೋಜಕತ್ವ ನೀಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯಕ್ಕೆ ಮುಂದಾಗಿದೆ.

KMF​ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಿಷ್ಟು 

ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ KMF​ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, 2026ರ ಆವೃತ್ತಿಯಲ್ಲಿ ಆರ್​ಸಿಬಿಗೆ KMF ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ. ಆರ್​ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯವಾಗಲಿದೆ. ವಿಚಾಟ್​ ​ಕೊಹ್ಲಿ, ರಜತ್​ ಪಾಟಿದಾರ್, ದೇವದತ್ತ ಪಡಿಕಲ್​ರಿಂದ KMF ಉತ್ಪನ್ನ ಪ್ರಚಾರಕ್ಕೆ ಮುಂದಾಗಿದ್ದೇವೆ.​ 4 ಕೋಟಿ ರೂ ವೆಚ್ಚದಲ್ಲಿ KMF ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಯುದ್ಧದಿಂದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಎಫೆಕ್ಟ್ ಆಗಿಲ್ಲ

ಇನ್ನು ಇರಾನ್​ ಹಾಗೂ ಅಮೆರಿಕ, ಇಸ್ರೇಲ್​ ನಡುವಿನ ಯುದ್ಧದಿಂದ ನಂದಿನಿ ಉತ್ಪನ್ನಗಳಿಗೆ ಎಫೆಕ್ಟ್ ವಿಚಾರವಾಗಿ ಮಾತನಾಡಿದ ಅವರು, ಯುದ್ಧದಿಂದ ಹಾಲಿನ ಮಾರಾಟದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. 4-5 ಸಾವಿರ ಲೀಟರ್​ ಹಾಲು ಮಾರಾಟ ಮಾತ್ರ ಕಡಿಮೆಯಾಗಿದೆ. ಯುದ್ಧದಿಂದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಎಫೆಕ್ಟ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಇನ್ನೆರಡು ದಿನ ಕಳೆದ್ರೆ ನಂದಿನಿ ಉತ್ಪನ್ನಗಳೂ ಸಿಗೋದು ಡೌಟ್! ಕೆಎಂಎಫ್​ಗೂ ಎದುರಾಯ್ತು ಸಂಕಷ್ಟ

ಟಿಟಿಡಿ ತುಪ್ಪದ ಟೆಂಡರ್​ನಲ್ಲಿ ಮಾತುಕಥೆ ನಡೆದಿದೆ. ಟೆಂಡರ್ ಹಾಕಿದ್ದೇವೆ ಇನ್ನು ಅಂತಿಮ ಆಗಿಲ್ಲ. ನಮ್ಮಲ್ಲಿ ಉತ್ಪಾದನೆ ಸಾಕಷ್ಟಿದೆ. ಟಿಟಿಡಿಗೆ ಬೇಕಾದಷ್ಟು ತುಪ್ಪ ಪೂರೈಕೆ ಮಾಡಲು ಶಕ್ತವಾಗಿದ್ದೇವೆ ಎಂದು KMF​ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​

ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದು, ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:17 pm, Tue, 24 March 26

Follow Us