AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಎರಡು ದಶಕಗಳಿಂದ ಮನೆಯಂಗಳದಲ್ಲಿ ಅರಳುತ್ತಿದೆ ವಿದೇಶಿ ಹೂವು; ಮಹಿಳೆಯರಿಂದಲೇ ಹೂದೋಟ ಕೃಷಿ ಆರಂಭ

ವಿಶೇಷವಾಗಿ ಆಂತೋರಿಯಂ, ಬಿಗೋನಿಯಾ, ಬೋಗನ್ವಿಲ್ಲಾ, ಆರ್ಕಿಡ್, ಡೇಲಿಯಾ, ವಾಟರ್ ಲಿಲ್ಲಿ, ಲೋಟಸ್ ಸೇರಿದಂತೆ ಹತ್ತಾರು ಬಗೆಯ ವೈವಿಧ್ಯಮಯ ಹೂವುಗಳು ಮನೆ ಮನಗಳನ್ನು ಅಲಂಕರಿಸಿವೆ.

ಕೊಡಗು: ಎರಡು ದಶಕಗಳಿಂದ ಮನೆಯಂಗಳದಲ್ಲಿ ಅರಳುತ್ತಿದೆ ವಿದೇಶಿ ಹೂವು; ಮಹಿಳೆಯರಿಂದಲೇ ಹೂದೋಟ ಕೃಷಿ ಆರಂಭ
ಮಹಿಳೆಯರಿಂದಲೇ ಹೂದೋಟ ಕೃಷಿ ಆರಂಭ
TV9 Web
| Edited By: |

Updated on: Aug 16, 2021 | 9:23 AM

Share

ಕೊಡಗು: ಮನೆಯ ಕೈದೋಟದಲ್ಲಿ ಎಳೆ ಬಿಸಿಲಿಗೆ ಮೈಯೊಡ್ಡಿ ನಸು ನಗುತ್ತಾ ನಿಂತಿರುವ ಹೂವುಗಳು ಎಂತವರನ್ನು ತನ್ನತ್ತ ಆಕರ್ಷಿಸುತ್ತದೆ. ಹೀಗಾಗಿಯೇ ವೈವಿದ್ಯಮಯವಾದ ಹೂವುಗಳನ್ನು ಮನೆಯಲ್ಲಿ ನೆಡುವುದು ಮಹಿಳೆಯರಿಗೆ ಒಂದು ಹವ್ಯಾಸವಾಗಿದೆ. ಇಂತಹದ್ದೇ ಪದ್ಧತಿಯನ್ನು ಕೊಡಗು ಜಿಲ್ಲೆಯ ಹೆಂಗೆಳೆಯರು ಮುಂದುವರಿಸಿಕೊಂಡು ಬಂದಿದ್ದು, ಮನೆಯಂಗಳದಲ್ಲಿ ಹೂವಿನ ಉದ್ಯಾನವನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲೂ ಕೊಡಗಿನ ವಾತಾವರಣ ಹೂವಿನ ಗಿಡಗಳಿಗೆ ಹೇಳಿ ಮಾಡಿಸಿದಂತಿದ್ದು, ಮನೆಯ ಹೆಣ್ಣು ಮಕ್ಕಳು ಪ್ರತಿನಿತ್ಯ ಕೆಲವು ಗಂಟೆಗಳ ಕಾಲ ಹೂವಿನ ಗಿಡಗಳ ಆರೈಕೆಗೆಂದೇ ಸಮಯ ಮೀಸಲಿಟ್ಟಿದ್ದಾರೆ.

ಹೂವಿನ ಗಿಡಗಳನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಸಾವಿರಾರು ರೂಪಾಯಿ ಹಣ ಖರ್ಚಾಗುತ್ತದೆ. ಹುಳ ಹುಪ್ಪಟೆಗಳಿಂದ ಇದನ್ನು ರಕ್ಷಿಸಬೇಕು. ಒಳ್ಳೆಯ ಗೊಬ್ಬರ ಕೊಡಬೇಕು. ಹೆಚ್ಚು ನೀರು ಬೀಳಬಾರದು. ಹೆಚ್ಚು ಬಿಸಿಲೂ ಬೀಳದಂತೆ ಬಹಳ ಎಚ್ಚರಿಕೆಯಿಂದ ಒಂದು ರೀತಿಯಲ್ಲಿ ಮಕ್ಕಳಂತೆ ಆರೈಕೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೊಡಗಿನ ಮಹಿಳೆಯರು ಹೂ ಕೃಷಿಯಲ್ಲಿ ಪಳಗಿರುವುದರಿಂದ ಕೈದೋಟ ಹವ್ಯಾಸ ಇವರಿಗೆ ಸ್ವಲ್ಪ ಸಲೀಸೇ ಆಗಿದೆ.

ಬೇರೆ ಕಡೆಗಳಲ್ಲಾದರೆ ಹೂದೋಟ ನಿರ್ವಹಣೆಗೆ ತರಬೇತಿ ಬೇಕು. ಆದರೆ ಕೊಡಗಿನಲ್ಲಿ ಹಿರಿಯರಿಂದಲೇ ಮಕ್ಕಳು ಹೂದೋಟ ಕೃಷಿಯನ್ನು ಕಲಿಯುತ್ತಾರೆ. ಕಳೆದ ಎರಡು ದಶಕಗಳಿಂದ ಕೊಡಗು ಜಿಲ್ಲೆಗೆ ದೇಶ ವಿದೇಶಗಳ ಹೂವುಗಳೂ ಲಗ್ಗೆ ಇಟ್ಟಿವೆ. ವಿಶೇಷವಾಗಿ ಆಂತೋರಿಯಂ, ಬಿಗೋನಿಯಾ, ಬೋಗನ್ವಿಲ್ಲಾ, ಆರ್ಕಿಡ್, ಡೇಲಿಯಾ, ವಾಟರ್ ಲಿಲ್ಲಿ, ಲೋಟಸ್ ಸೇರಿದಂತೆ ಹತ್ತಾರು ಬಗೆಯ ವೈವಿಧ್ಯಮಯ ಹೂವುಗಳು ಮನೆ ಮನಗಳನ್ನು ಅಲಂಕರಿಸಿವೆ.

flower

ವೈವಿಧ್ಯಮಯ ಹೂವುಗಳು

ಹೂವಿನ ತೋಟ ಎನ್ನುವುದು ಕೇವಲ ಒಂದು ಹವ್ಯಾಸವಲ್ಲ. ಅದೊಂದು ಪ್ಯಾಶನ್, ಒಂದು ಸಂಸ್ಕೃತಿ, ಈ ಮೂಲಕ ಜೀವನದ ಖುಷಿ ಕಾಣುವ ಒಂದು ಸಂತೃಪ್ತಿ. ಹಚ್ಚ ಹಸಿರ ಪ್ರಕೃತಿ ಮಧ್ಯೆ ಬಣ್ಣ ಬಣ್ಣದಲ್ಲಿ ಅರಳಿ ನಸು ನಗುವ ಈ ಹೂವುಗಳನ್ನು ಬೆಳಗೆದ್ದು ನೋಡುವುದೇ ಒಂದು ಅಂದ ಎಂದು ಹೂವಿನ ಉದ್ಯಾನವನ ಮಾಡಿರುವ ಪೂಜಿತ ಹೇಳಿದ್ದಾರೆ.

ವರದಿ: ಗೋಪಾಲ್ ಸೋಮಯ್ಯ

ಇದನ್ನೂ ಓದಿ: ಗದಗ: ಎರಡು ಎಕರೆ ಜಮೀನಿನಲ್ಲಿ ಭರ್ಜರಿ ಗುಲಾಬಿ ಹೂವು ಬೆಳೆದ ಉಪನ್ಯಾಸಕ; ಲಕ್ಷ ಲಕ್ಷ ರೂಪಾಯಿ ಸಂಪಾದನೆ

ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್