ಎಲೆಕ್ಟ್ರಿಕ್ ಬೈಕ್ ತಯಾರಿಸಿದ ವಿದ್ಯಾರ್ಥಿ; 40 ಕಿಲೋಮೀಟರ್ ಪ್ರಯಾಣಕ್ಕೆ ಕೇವಲ 10 ರೂ. ಸಾಕು

ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಗಿರೀಶ್ ಲಾಕ್​ಡೌನ್​ ಅವಧಿಯನ್ನು ತಮ್ಮ ಪ್ರಯೋಗಶೀಲತೆಗೆ ಬಳಸಿಕೊಂಡಿದ್ದಾರೆ. 1000 ರೂಪಾಯಿ ತೆತ್ತು ಗುಜರಿಯಿಂದ ಬೈಕ್ ತಂದು ಸುಮಾರು 30 ಸಾವಿರ ರೂಪಾಯಿ ವೆಚ್ಚ ಮಾಡಿ ಬ್ಯಾಟರಿ ಚಾಲಿತ ಬೈಕ್ ತಯಾರಿಸಿದ್ದಾರೆ.

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ವಿದ್ಯಾರ್ಥಿ; 40 ಕಿಲೋಮೀಟರ್ ಪ್ರಯಾಣಕ್ಕೆ ಕೇವಲ 10 ರೂ. ಸಾಕು
ಎಲೆಕ್ಟ್ರಿಕ್ ಬೈಕ್ (ಸಂಗ್ರಹ ಚಿತ್ರ
Follow us
TV9 Web
| Updated By: preethi shettigar

Updated on: Aug 24, 2021 | 7:51 AM

ಕೊಡಗು: ಹೇಳಿ ಕೇಳಿ ಈಗ ಎಲೆಕ್ಟ್ರಾನಿಕ್ ಯುಗ. ಜಗತ್ತಿನ ಎಲ್ಲವೂ ಎಲೆಕ್ಟ್ರಿಕ್ಮಯವಾಗುತ್ತಿವೆ. ವಿಶೇಷವಾಗಿ ಮೋಟಾರ್ ವಾಹನಗಳು. ಹಾಗಾಗಿ ಹೆಚ್ಚಿನ ಸಂಸ್ಥೆಗಳೆಲ್ಲವೂ ಎಲೆಕ್ಟ್ರಾನಿಕ್ ವಾಹನಗಳ ತಯಾರಿಕೆಯಲ್ಲಿ ಮುಗಿಬಿದ್ದಿವೆ. ಹೀಗಿರುವಾಗಲೇ ಕಾಫಿ ಕಣಿವೆಯ ಯುವಕನೋರ್ವ ಸದ್ದೇ ಇಲ್ಲದೆ ಗುಜರಿ ಬೈಕ್ ಅನ್ನು ಬ್ಯಾಟರಿ ಬೈಕ್ ಆಗಿ ಪರಿವರ್ತಿಸಿದ್ದಾನೆ.

90ರ ದಶಕದಲ್ಲಿ ರಸ್ತೆಯಲ್ಲಿ ಧೂಳೆಬ್ಬಿಸಿದ್ದ ಸುಝುಕಿ ಸಮುರೈ ಬೈಕ್ ಈಗ ನೋಡಲು ಸಿಗುವುದೇ ಇಲ್ಲ. ಆದರೆ ಇದೇ ಬೈಕ್ ಇಂದು ಹೊಸ ರೂಪ ತಾಳಿದ್ದು, ಸದ್ದು ಮಾಡುತ್ತಿದೆ. ಹೌದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದ ಇಂಜಿನಿಯರಿಂಗ್​ ವಿದ್ಯಾರ್ಥಿ ಗಿರೀಶ್, ಗುಜರಿಯಲ್ಲಿದ್ದ ಬೈಕ್​ಗೆ ಹೊಸ ರೂಪ ನೀಡಿ ಬ್ಯಾಟರಿ ಚಾಲಿತ ಬೈಕ್ ಆಗಿ ಪರಿವರ್ತಿಸಿದ್ದಾರೆ.

ಗಿರೀಶ್ ಸಣ್ಣ ವಯಸ್ಸಿನಿಂದಲೇ ಎಲೆಕ್ಟ್ರಿಕ್ ವಸ್ತುಗಳೆಂದರೆ ಬಹಳ ಇಷ್ಟ. ಸದಾ ಪ್ರಯೋಗಶೀಲರಾಗಿದ್ದ ಗಿರೀಶ್​ಗೆ ಬ್ಯಾಟರಿ ಚಾಲಿತ ಬೈಕ್ ಒಂದನ್ನು ತಯಾರಿಸಬೇಕೆಂಬುದು ಮಹಾದಾಸೆಯಾಗಿತ್ತು. ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಗಿರೀಶ್ ಲಾಕ್​ಡೌನ್​ ಅವಧಿಯನ್ನು ತಮ್ಮ ಪ್ರಯೋಗಶೀಲತೆಗೆ ಬಳಸಿಕೊಂಡಿದ್ದಾರೆ. 1000 ರೂಪಾಯಿ ತೆತ್ತು ಗುಜರಿಯಿಂದ ಬೈಕ್ ತಂದು ಸುಮಾರು 30 ಸಾವಿರ ರೂಪಾಯಿ ವೆಚ್ಚ ಮಾಡಿ ಬ್ಯಾಟರಿ ಚಾಲಿತ ಬೈಕ್ ತಯಾರಿಸಿದ್ದಾರೆ. ಆರು ಗಂಟೆಗಳ ಕಾಲ ಚಾರ್ಜ್ ಮಾಡಿದರೆ, 40 ಕಿಲೋ ಮೀಟರ್ ಪ್ರಯಾಣಿಸಬಹುದು. ಇಷ್ಟು ದೂರ ತೆರಳಲು ತಗಲುವ ವೆಚ್ಚ ಕೇವಲ 10 ರೂಪಾಯಿ ಮಾತ್ರ ಎನ್ನುವುದು ವಿಶೇಷ.

ಬೈಕ್​ಗೆ 750 ವ್ಯಾಟ್ ಸಾಮರ್ಥ್ಯದ ಮೋಟಾರ್ ಅಳವಡಿಸಿದ್ದು, 48 ವೋಲ್ಟ್ ಸಾಮರ್ಥ್ಯದ ಬ್ಯಾಟರಿ ಬಳಸಲಾಗಿದೆ. ಆರು ಗಂಟೆಗಳ ಕಾಲ ಚಾರ್ಜ್ ಆಗಲು ಕೇವಲ 10 ರೂಪಾಯಿ ವೆಚ್ಚವಾಗುತ್ತದೆ. ಹೊಸ ಮಾದರಿಯ ಬೈಕ್ ಇದಾಗಿದ್ದು, ಈಗ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಬ್ಯಾಟರಿ ಚಾಲಿತ ಬೈಕ್​ಗಳಿಗಿಂತ ಯಾವುದರಲ್ಲು ಕಡಿಮೆ ಇಲ್ಲ. ಡಬ್ಬಲ್ ರೈಡಿಂಗ್ ಮಾಡುವಷ್ಟು ಸಾಮರ್ಥ್ಯವೂ ಇದಕ್ಕಿದೆ. ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಇದು ಚಲಿಸುತ್ತಿದೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಗಿರೀಶ್ ಕರುಂಬಯ್ಯ ತಿಳಿಸಿದ್ದಾರೆ.

ಬ್ಯಾಟರಿ ಚಾಲಿತ ಬೈಕ್ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಂಶೋಧನೆ ಮಾಡುವ ಬಯಕೆ ಗೀರಿಶ್​ದಾಗಿದೆ. ಹೀಗಾಗಿ ತಮ್ಮ ಮಗನ ಸಾಧನೆಗೆ ಸೂಕ್ತ ಪ್ರೋತ್ಸಾಹ ನೀಡಿ ಬೆಂಬಲಿಸಿ ಎಂದು ಗೀರಿಶ್ ಪೋಷಕರು ಮನವಿ ಮಾಡಿದ್ದಾರೆ.

ಇನ್ನು ಬೈಕ್​ಗೆ ಲೀಥಿಯಂ ಬ್ಯಾಟರಿ ಅಳವಡಿಸುವುದರ ಮೂಲಕ ಬೈಕ್​ನ ಶಕ್ತಿ ಸಾಮರ್ಥ್ಯ ಹೆಚ್ಚಿಸಲು ಗಿರೀಶ್ ನಿರ್ಧರಿಸಿದ್ದಾರೆ. ವಿದ್ಯಾರ್ಥಿ ಹಂತದಲ್ಲೇ ಪ್ರಯೋಗಗಳಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಗಿರೀಶ್ ಮುಂದೊಂದು ದಿನ ಇದೇ ಕ್ಷೇತ್ರದಲ್ಲಿ ಮಿಂಚುವ ಭರವಸೆ ಇಟ್ಟುಕೊಂಡಿದ್ದಾರೆ.

ವರದಿ: ಗೋಪಾಲ್ ಸೋಮಯ್ಯ

ಇದನ್ನೂ ಓದಿ:

ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ

ಸೋಲಾರ್ ಚಾಲಿತ ಸೈಕಲ್ ತಯಾರಿಸಿದ ವಿದ್ಯಾರ್ಥಿಗಳು; ಒಮ್ಮೆ ಚಾರ್ಚ್ ಆದರೆ 25 ಕಿಲೋಮೀಟರ್ ಓಡಾಟ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ