ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ

ಹುಲಿ ಉಗುರು ಕೊಂಬುಗಳ ಸೇರಿದಂತೆ ಕಾಡು ಪ್ರಾಣಿಗಳ ದೇಹದ ವಿವಿಧ ಭಾಗಗಳನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಲು ಸರ್ಕಾರ ಈಗಾಗಲೆ ಮೂರು ತಿಂಗಳ ಗಡುವು ನೀಡಿದೆ. ಆದ್ರೆ ಈ ಗಡುವು ಕೊಡಗು ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ. ಯಾಕಂದ್ರೆ ಜಿಲ್ಲೆಯ ನೂರಾರು ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಜಿಂಕೆ, ಕಡವೆ ಕೊಂಬುಗಳು, ಚಮರಿ ಮೃಗದ ಬಾಲ ನವಿಲು ಗರಿಗಳನ್ನ ಧಾರ್ಮಿಕ ಉತ್ಸವದಲ್ಲಿ ಬಳಸಲಾಗುತ್ತಿದೆ. ಇವುಗಳನ್ನ ಹಿಂದಿರುಗಿಸಲು ಆಗುವುದಿಲ್ಲ. ಹಾಗಾಗಿ ಸರ್ಕಾರ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ
ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2024 | 9:50 PM

ಕೊಡಗು, ಫೆ.17: ಕೊಡಗು(Kodagu) ಜಿಲ್ಲೆಯ ಹಬ್ಬ ಹರಿದಿನಗಳು ಕೂಡ ಪ್ರಕೃತಿಯನ್ನೇ ಆಧಾರಿಸಿವೆ. ಇಲ್ಲಿನ ಬಹುತೇಕ ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವ ನಡೆಯುವಾಗ ಜಿಂಕೆ, ಕಡವೆಯ ಕೊಂಬುಗಳನ್ನ ಹಾಗೆಯೇ ನವಿಲುಗರಿಗಳ ಗೊಂಚಲನ್ನು ಹಿಡಿದು ನೃತ್ಯ ಮಾಡಲಾಗುತ್ತದೆ. ಇದು ಇಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿದೆ. ಇಲ್ಲಿರುವ ಕೊಂಬುಗಳ ಕೂಡ ನೂರಾರು ವರ್ಷಗಳಷ್ಟು ಹಳೆಯದಾಗಿವೆ. ಆದ್ರೆ, ಇದೀಗ ರಾಜ್ಯದಲ್ಲಿ ಕಾಡು ಪ್ರಾಣಿಗಳ ದೇಹದ ಯಾವುದೇ ಭಾಗವನ್ನ ಸರ್ಕಾರಕ್ಕೆ ಹಿಂದಿರುಗಿಸಲು ಜನವರಿ 16ರಿಂದ ಮೂರು ತಿಂಗಳ ಗಡುವು ನೀಡಲಾಗಿದೆ. ಈ ಗಡುವು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.

ಇದೀಗ ಜಿಲ್ಲೆಯಲ್ಲಿ ಹಬ್ಬಗಳ ಸೀಸನ್. ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವಗಳು ನಡೆಯುತ್ತವೆ. ದೇವರುಗಳನ್ನು ನೃತ್ಯ ಮಾಡಿ ಸಂತೃಪ್ತಿಗೊಳಿಸಲು ಈ ಕೊಂಬು ಗರಿಗಳನ್ನು ಬಳಸಲಾಗುತ್ತದೆ. ಆದ್ರೆ, ಈ ಕೊಂಬುಗಳನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ರೆ, ದೇವರ ಹಬ್ಬಗಳಿಗೆ ಮಹತ್ವ ಇರುವುದಿಲ್ಲ ಎಂದು ಭಕ್ತರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಾಡು ಪ್ರಾಣಿಗಳ ಹಾವಳಿಯಿಂದ ಬೇಸೆತ್ತ ಕಾಡಿಂಚಿನ ಜನರು: ಬೆಳೆ ನಾಶ, ಸೂಕ್ತ ಪರಿಹಾರಕ್ಕೆ ರೈತರು ಮನವಿ

ಜಿಲ್ಲೆಯ ಬಹಳಷ್ಟು ದೇವಸ್ಥಾನಗಳಲ್ಲಿ ಇಂದಿಗೂ ಕೊಂಬಾಟ್, ಪೀಲಿಯಾಟ್​ ಎಂಬ ನೃತ್ಯಪ್ರಕಾರಗಳಲ್ಲಿ ಜಿಂಕೆ, ಕಡವೆಯ ಕೊಂಬುಗಳನ್ನ ಹಾಗೂ ನವಿಲುಗರಿಗಳನ್ನ ಹಿಡಿದು ನೃತ್ಯ ಮಾಡಲಾಗಿದೆ. ಆದ್ರೆ, ಇದೀಗ ಈ ದೇವಸ್ಥಾನಗಳ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಗೊಂದಲ ತಲೆದೋರಿದೆ. ತಮ್ಮ ಉತ್ಸವಗಳಲ್ಲಿ ಈ ಕೊಂಬುಗಳನ್ನ ಬಳಕೆ ಮಾಡಿದ್ರೆ ಅರಣ್ಯ ಇಲಾಖೆ ಕ್ರಮಕ್ಕೆ ಮುಮದಾಗುತ್ತದೆಯೇ ಎಂಬ ಆತಂಕ ಮೂಡಿದೆ. ಹಾಗಾಗಿ ನೂರಾರು ವರ್ಷಗಳಿಂದ ಆಚರಣೆಯಲ್ಲಿರುವ ತಮ್ಮ ಪದ್ಧತಿ ಪಾಲನೆಗೆ ಅವಕಾಶ ನೀಡುವಂತೆ ಕೋರಿದ್ದಾರೆ. ಇವು ಯಾವುದು ಕೂಡ ಇತ್ತೀಚೆಗೆ ಪ್ರಾಣಿ ಹತ್ಯೆ ಮಾಡಿರುವಂತಹದ್ದಲ್ಲ. ಎಲ್ಲವೂ ನೂರಾರು ವರ್ಷಗಹಳಷ್ಟು ಹಳೆಯದ್ದು.

ಸಧ್ಯ ಕೊಡಗು ಜನರ ಬೇಡಿಕೆಗೆ ರಾಜ್ಯ ಸರ್ಕಾರ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಈ ಹಿಂದೆ ದೇವಸ್ಥಾನ ಹಾಗೂ ಐನ್​ಮನೆಗಳಲ್ಲಿ ಇರುವಂತಹ ಕೊಂಬುಗಳನ್ನು ನೋಂದಾವಣಿ ಮಾಡಿ ಇಟ್ಟುಕೊಳ್ಳುವಂತೆ ಅರಣ್ಯ ಇಲಾಖೆ ಸೂಚಿಸಿತ್ತು. ಆದ್ರೆ ಆ ಸಂದರ್ಭ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಕಾನೂನು ಜಾರಿಗೆ ಅರಣ್ಯ ಇಲಾಖೆ ಮುಮದಾಗಿರುವುದು ಎಲ್ಲರ ನಿದ್ದೆಗೆಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ