AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಪಶ್ಚಿಮ ಘಟ್ಟಕ್ಕೆ ಕೊಡಲಿ, ಸಾವಿರಕ್ಕೂ ಅಧಿಕ ಮರಗಳನ್ನ ಕಡಿದು ನಾಶ

ಇಡೀ ದೇಶಕ್ಕೆ ದೇಶವೇ ಬರ ಹಾಗೂ ಬಿಸಿಲಿನ ತಾಪದಿಂದ ತತ್ತರಿಸುತ್ತಿದೆ. ಇದಕ್ಕೆ ಪರಿಸರ ನಾಶವೂ ಒಂದು ಕಾರಣ ಎನ್ನಲಾಗುತ್ತಿದೆ, ಪರಿಸ್ಥಿತಿ ಹೀಗಿರುವಾಗಲೇ ಕೊಡಗಿನಲ್ಲಿ ಅತ್ಯಮೂಲ್ಯ ಪಶ್ಚಿಮ ಘಟ್ಟಕ್ಕೆ ಭಾರೀ ಪ್ರಮಾಣದಲ್ಲಿ ಕೊಡಲಿ ಹಾಕಲಾಗಿದೆ. ಸಾವಿರಕ್ಕೂ ಅಧಿಕ ಮರಗಳನ್ನ ಕಡಿದು ನಾಶ ಮಾಡಿರುವುದೂ ಅಲ್ಲದೆ ಇಡೀ ಕಾಡಿಗೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೂ ಯತ್ನಿಸಲಾಗಿದೆ.

ಕೊಡಗು: ಪಶ್ಚಿಮ ಘಟ್ಟಕ್ಕೆ ಕೊಡಲಿ, ಸಾವಿರಕ್ಕೂ ಅಧಿಕ ಮರಗಳನ್ನ ಕಡಿದು ನಾಶ
ಕೊಡಗು
ಗೋಪಾಲ್​ ಸೋಮಯ್ಯ
| Edited By: ಕಿರಣ್ ಹನುಮಂತ್​ ಮಾದಾರ್|

Updated on: May 12, 2024 | 3:23 PM

Share

ಕೊಡಗು, ಮೇ.12: ಮಡಿಕೇರಿ(Madikeri) ತಾಲ್ಲೂಕಿನ ಕೇರಳ ಗಡಿ ಗ್ರಾಮ ಐಯ್ಯಂಗೇರಿಯ ದುರ್ಗಮ ಬೆಟ್ಟ ಪ್ರದೇಶದಲ್ಲಿ ಪ್ರಕೃತಿ ಮೇಲೆ ಘನಘೋರ ಅತ್ಯಾಚಾರ ನಡೆದಿದ್ದು, ಐದು ಏಕರೆ ಅರಣ್ಯವನ್ನ ಕಡಿದು ನಾಶ ಮಾಡಲಾಗಿದೆ. ಸಾವಿರಕ್ಕೂ ಅಧಿಕ ಮರಗಳನ್ನ ಕಡಿದ ಬಳಿಕ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೂ ಯತ್ನಿಸಲಾಗಿದೆ. ಈ ಅರಣ್ಯ ಮುಂಡ್ರೋಟು ಮೀಸಲು ಅರಣ್ಯಕ್ಕೆ ಸೇರಿದ್ದು, ತಲಕಾವೇರಿ ವನ್ಯಧಾಮದಿಂದ ಕೂಗಳತೆ ದೂರದಲ್ಲಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿ ಸ್ಥಾನ ಪಡೆದಿರುವ ಅತೀ ಸೂಕ್ಷ್ಮ ಪರಿಸರ ವಲಯದಲ್ಲೇ ಇಂತಹ ಘನಘೋರ ಕೃತ್ಯ ನಡೆದಿದೆ.

ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದರಿಂದ ಅತ್ಯಮೂಲ್ಯ ಸಸ್ಯ ಹಾಗೂ ಪ್ರಾಣಿ ಪ್ರಬೇಧವೂ ಇಲ್ಲಿ ನಷ್ಟಕ್ಕೊಳಗಾಗಿದೆ. ಇದು ಆನೆ ಕಾರಿಡಾರ್ ಆಗಿದ್ದು ಇಂತಹ ಸ್ಥಳದಲ್ಲೇ ವ್ಯಾಪಕ ಪರಿಸರ ನಾಶ ಮಾಡಲಾಗಿದೆ. ಈ ಬೆಟ್ಟ ಪ್ರದೇಶಕ್ಕೆ ಕೊಡಗಿನ ಮೂಲಕ ತೆರಳಲು ರಸ್ತೆ ಇಲ್ಲ. ಗಡಿಗ್ರಾಮ ಕರಿಕೆಗೆ ತೆರಳಿ ಅಲ್ಲಿಂದ ಕೇರಳದ ಕಣ್ಣೂರಿನ ಮೂಲಕವೇ 140 ಕಿ.ಮಿ ಪ್ರಯಾಣಿಸಬೇಕಿದೆ. ಇದನ್ನೆ ಲಾಭವನ್ನಾಗಿಸಿಕೊಂಡ ಕೇರಳದ ಟಿಂಬರ್ ಮಾಫಿಯಾ, ಕೇರಳ ಬದಿಯಿಂದ ಆಗಮಿಸಿ ಅಪಾರ ಪ್ರಮಾಣದ ಅರಣ್ಯ ನಾಶ ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರಿನ ತೇಗೂರಲ್ಲಿ ಬೆಳ್ಳಂಬೆಳಗ್ಗೆ ಸಲಗ ಕಂಡು ಗ್ರಾಮಸ್ಥರಲ್ಲಿ ಭೀತಿ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ

ಕಾಸರಗೋಡು ಮೂಲದ ಸನ್ನಿ ಮಲೆಬಾರಿ ಹಾಗೂ ಕಣ್ಣುರಿನ ಅಬ್ರಾಹಂ ಎಂಬುವರು ಈ ದುಷ್ಕೃತ್ಯ ಎಸಗಿದ್ದಾರೆ. ಇವರ ವಿರುದ್ಧ ಅರಣ್ಯ ಇಲಾಖೆ ಕಾಟಚಾರಕ್ಕೆ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡಿದೆ. ಈ ಅಕ್ರಮದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆ ಇದೆ. ವಿಚಿತ್ರ ಅಂದರೆ ಇಷ್ಟೊಂದು ಅಗಾಧ ಮಟ್ಟದಲ್ಲಿ ಪರಿಸರ ನಾಶ ಮಾಡಿದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಈ ಪ್ರದೇಶದಲ್ಲಿ 6 ಸಾವಿರಕ್ಕೂ ಅಧಿಕ ಸಸ್ಯ ಪ್ರಬೇಧ, 400 ಕ್ಕೂ ಅಧಿಕ ಪ್ರಾಣಿ ಹಾಗೂ ಪಕ್ಷಿ ಪ್ರಬೇಧವಿದೆ. ಇನ್ನು ನೂರಾರು ಬಗೆಯ ಸರೀಸೃಪಗಳು, ಸಸ್ತನಿಗಳು ಆಶ್ರಯ ಪಡೆದಿದೆ. ನಿತ್ಯ ಹರಿದ್ವರ್ಣ ಕಾಡುಗಳನ್ನೇ ಈ ರೀತಿ ಕಡಿದು ಟಿಂಬರ್ ಮಾಫಿಯ ನಾಶ ಮಾಡಿರುವುದೂ ಜನ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮರ ಕಡಿದ ದುಷ್ಕರ್ಮಿಗಳು ಮಾತ್ರವಲ್ಲದೆ, ಅವರಿಗೆ ರಕ್ಷಣೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು