ಬೇರೆ ಭಾಗಗಳಿಂದ ತಂದು ಕೊಡಗಿನಲ್ಲಿ ಕೋತಿಗಳನ್ನು ಬಿಡುತ್ತಿದ್ದಾರೆ! ಆ ಮಂಗಗಳ ಕಾಟದಿಂದ ಕಾಫಿ ಬೆಳೆಗಾರರು ಹಣ್ಣಾಗಿದ್ದಾರೆ!

ಹೊರ ಜಿಲ್ಲೆ, ರಾಜ್ಯದಲ್ಲಿ ಹಿಡಿದ ಮಂಗಗಳನ್ನ ರಾತ್ರೋರಾತ್ರಿ ತಂದು ಇಲ್ಲಿ ರಸ್ತೆ ಬದಿ ಬಿಡಲಾಗಿದೆ. ನಗರದಲ್ಲೇ ಹುಟ್ಟಿ ಬೆಳೆದಿರೋ ಈ ಮಂಗಗಳಿಗೆ ಕಾಡಿನ ಆಹಾರ ಗೊತ್ತಿಲ್ಲ. ಹಾಗಾಗಿ ಈ ಮಂಗಗಳು ಕಾಫಿ, ಬಾಳೆ, ಕಿತ್ತಳೆ ಬೆಳೆಗಳನ್ನ ಸರ್ವನಾಶ ಮಾಡುತ್ತಿವೆ.

ಬೇರೆ ಭಾಗಗಳಿಂದ ತಂದು ಕೊಡಗಿನಲ್ಲಿ ಕೋತಿಗಳನ್ನು ಬಿಡುತ್ತಿದ್ದಾರೆ! ಆ ಮಂಗಗಳ ಕಾಟದಿಂದ ಕಾಫಿ ಬೆಳೆಗಾರರು ಹಣ್ಣಾಗಿದ್ದಾರೆ!
ಬೇರೆ ಭಾಗಗಳಿಂದ ತಂದ ಕೋತಿಗಳನ್ನು ಕೊಡಗಿನಲ್ಲಿ ಬಿಡುತ್ತಿದ್ದಾರೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 15, 2022 | 1:37 PM

ಡಿಸೆಂಬರ್ ಬಂತೆಂದ್ರೆ ಸಾಕು ಕೊಡಗು (Kodagu) ಜಿಲ್ಲೆಯಲ್ಲಿ ಕಾಫಿ ಕೊಯ್ಲು ಕೆಲಸ ಆರಂಭವಾಗುತ್ತೆ. ಆದ್ರೆ ಪ್ರತಿವರ್ಷ ಆನೆಗಳ ಕಾಟದಿಂದ ಬೇಸೆತ್ತಿರುವ ಜನರು ಇದೀಗ ಹೊಸ ಸಮಸ್ಯೆಯೊಂದನ್ನ ಎದುರಿಸುತ್ತಿದ್ದಾರೆ. ನೂರಾರು ಸಂಖ್ಯೆಯ ಮಂಗಗಳು ಕಾಫಿ ತೋಟಗಳಿಗೆ ಲಗ್ಗೆ ಇಟ್ಟು (Trouble) ಬೆಳೆಗಳನ್ನ ಸರ್ವನಾಶ ಮಾಡುತ್ತಿವೆ. ಕಾಫಿ ಗಿಡದ ಮೇಲೆ ಕುಳಿತು ಹುಲುಸಾಗಿ ಬೆಳೆದಿರುವ ಕಾಫಿ ಹಣ್ಣುಗಳನ್ನ ಕಿತ್ತು ತಿನ್ನುತ್ತಿರೋ ಮಂಗ (Monkey)… ಕಾಫಿಗಾಗಿ ಗಿಡದ ರೆಕ್ಕೆಗಳನ್ನ ಕಿತ್ತು ಅಧ್ವಾನ ಮಾಡುತಿಹುದು. ಬಹುಶಃ ಈ ದೃಶ್ಯವೊಂದೇ ಸಾಕು ಸದ್ಯ ಕೊಡಗಿನ ಹಲವೆಡೆ ರೈತರು (Coffee Growers) ಅನುಭವಿಸುತ್ತಿರುವ ಪರಿಸ್ಥಿತಿಯನ್ನ ವಿವರಿಸಲು. ಹೌದು ಇದುವರೆಗೂ ಕಾಫಿ ತೋಟದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿತ್ತು. ಇದೀಗ ಅವುಗಳ ಸಾಲಿಗೆ ಮಂಗಗಳ ಕಾಟ ಶುರುವಾಗಿದೆ. ಎಲ್ಲಿದಂಲೋ ಬಂದಿರುವ ನೂರಾರು ಮಂಗಳು ಕಾಫಿ ತೋಟಕ್ಕೆ ಲಗ್ಗೆ ಇಟ್ಟು ಕಾಫಿ ಹಣ್ಣುಗಳನ್ನು ಕಿತ್ತು ತಿನ್ನುವುದು ಚೆಲ್ಲುವುದು ಮಾತ್ರವಲ್ಲದೆ, ಗಿಡದ ರೆಕ್ಕೆಗಳನ್ನ ಕೂಡ ಮುರಿದು ಇನ್ನಿಲ್ಲದ ಹಾನಿ ಮಾಡುತ್ತಿವೆ.

ಒಂದು ಕಾಫಿ ಗಿಡ ಸಮೃದ್ಧವಾಗಿ ಬೆಳೆಯಲು ಕನಿಷ್ಟ 10 ವರ್ಷ ತೆಗೆದುಕೊಳ್ಳುತ್ತದೆ. ಅದಕ್ಕೆ ಸಾವಿರಾರು ರೂಪಾಯಿಯನ್ನ ರೈತ ವಿನಿಯೋಗಿಸಿರುತ್ತಾನೆ. ಆದ್ರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಈ ಕಾಫಿ ಗಿಡಗಳು ಸಿಕ್ಕಿ ಸರ್ವನಾಶವಾಗುತ್ತಿವೆ. ಅಂದಹಾಗೆ ರೈತರು ಹೇಳುವ ಪ್ರಕಾರ ಈ ಮಂಗಗಳು ಕೊಡಗಿನ ಕಾಡು ಮಂಗಗಳಲ್ಲ. ಹೊರ ಜಿಲ್ಲೆ, ಹೊರ ರಾಜ್ಯಗಳ ನಗರಗಳಲ್ಲಿ ಹಿಡಿದ ಮಂಗಗಳನ್ನ ರಾತ್ರೋ ರಾತ್ರಿ ತಂದು ಇಲ್ಲಿನ ರಸ್ತೆ ಬದಿ ಬಿಟ್ಟು ಹೋಗಲಾಗಿದೆ. ನಗರದಲ್ಲೇ ಹುಟ್ಟಿ ಬೆಳೆದಿರೋ ಈ ಮಂಗಗಳಿಗೆ ಕಾಡಿನ ಆಹಾರ ಗೊತ್ತಿಲ್ಲ. ಹಾಗಾಗಿ ಈ ಮಂಗಗಳೇ ಕಾಫಿ, ಬಾಳೆ, ಕಿತ್ತಳೆ ಬೆಳೆಗಳನ್ನ ಸರ್ವನಾಶ ಮಾಡುತ್ತಿವೆ.

ಮನೆಗಳಿಗೂ ನುಗ್ಗಿ ಆಹಾರ ಪಾತ್ರೆ ಗಳನ್ನ ಚೆಲ್ಲಾಡುತ್ತಿವೆ. ಕೊಡಗಿನ ಕಾಡುಗಳಲ್ಲಿ ಇರುವ ಕಾಡು ಮಂಗಗಳು ಸಾಮಾನ್ಯವಾಗಿ ಈ ರೀತಿ ದಾಂಧಲೆ ಮಾಡುವುದಿಲ್ಲ. ಆದ್ರೆ ನಗರದಿಂದ ಬಂದಿರೋ ಈ ಮಂಗಗಳು ಇದೀಗ ಕೊಡಗಿನ ರೈತರ ಪಾಲಿಗೆ ಇನ್ನಿಲ್ಲದ ತಲೆನೋವು ತಂದಿವೆ. ಇವುಗಳನ್ನ ನಿಯಂತ್ರಣ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಂತ್ರಸ್ತ ರೈತ ಕರಣ್ ಕಾಳಯ್ಯ ಅವರು.

ಒಂದೆಡೆ ಮಂಗ, ಆನೆಗಳ ಕಾಟವಾದ್ರೆ ಇತ್ತ ಬದಲಾದ ವಾತಾವರಣ ಕೂಡ ರೈತರನ ಗಾಯಕ್ಕೆ ಬರೆ ಎಳೆದಿದೆ. ಇದೀಗ ಅರೇಬಿಕಾ ಕಾಫಿ ಕೊಯ್ಲಿನ ಸಮಯ, ಆದ್ರೆ ಮಳೆ ಹಾಗೂ ಮೋಡದಿಂದ ಕಾಫಿ ಕೊಯ್ಲು ಮಾಡಲಾಗದೆ, ಈಗಾಗಲೇ ಕೊಯ್ಲು ಮಾಡಿದ ಕಾಫಿಯನ್ನ ಒಣಗಿಸಲಾರದೆ ರೈತರ ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಇದಕ್ಕೆ ಕಾಫಿ ಒಣಗಿಸಲು ಕೃತಕ ಡ್ರೈಯರ್​ಗಳನ್ನ ಒದಗಿಸುವಂತೆ ರೈತ ಕುಶಾಲಪ್ಪ ಅವರು ಸರ್ಕಾರವನ್ನ ಒತ್ತಾಯಿಸುತ್ತಿದ್ದಾರೆ.

ಒಂದೆಡೆ ಆನೆ ಕಾಟ , ಮತ್ತೊಂದೆಡೆ ಮಂಗಗಳ ಕಾಟ, ಇವುಗಳ ಮಧ್ಯೆ ವಾತಾವರಣ ಬದಲಾವಣೆಯಿಂದ ಕೊಡಗಿನ ರೈತರು ಅಕ್ಷರಶಃ ಕಂಗೆಟ್ಟಿದ್ದಾರೆ. ಪ್ರಕೃತಿ ಮತ್ತು ವನ್ಯಜೀವಿಗಳ ಜೊತೆಗಿನ ಹೋರಾಟದಲ್ಲಿ ಸೋತು ಸುಣ್ಣವಾಗುತ್ತಿದ್ದಾನೆ.

ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು

ವೈರಲ್ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್