ಮಡಿಕೇರಿಯಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿಯಿಂದ ‘ಆಪರೇಷನ್ ಗಜಪಡೆ’
ಮಡಿಕೇರಿ: ಅವ್ರೆಲ್ಲಾ ಒಂಟಿಯಾಗಿ ಬಂದ್ರೆನೆ ಜನ್ರ ಜೀವ ಬಾಯಿಗೆ ಬಂದಂಗೆ ಆಗುತ್ತೆ. ಅಂಥಾದ್ರಲ್ಲಿ ಗ್ಯಾಂಗ್ ಕಟ್ಕೊಂಡು ಊರಿಗೆ ಬಂದ್ರು ಅಂದ್ರೆ ಕೇಳ್ಬೇಕಾ. ಮನೆಯಿಂದ ಹೊರ ಬರೋಕೂ ಭಯ ಪಡ್ಬೇಕು. ಹೀಗಾಗೇ ಆ ಗ್ಯಾಂಗ್ನ ವಾಪಸ್ ಕಳಿಸೋಕೆ ನಡೆದ ಸರ್ಕಸ್ ಅಷ್ಟಿಷ್ಟಲ್ಲ. ನಾಡಿಗೆ ನುಗ್ಗಿದ ಗಜಪಡೆಯನ್ನ ಕಾಡಿಗಟ್ಟಲು ಸರ್ಕಸ್: ಕಾಡಾನೆಗಳ ಎಂಟ್ರಿ ಕೊಟರೆ ಹಂಗೆ. ಅದ್ರಲ್ಲೂ ಕೊಡಗಿನಲ್ಲಂತೂ ದಿನಬೆಳಗಾದ್ರೆ ಆನೆಗಳದ್ದೇ ಹಾವಳಿ. ಆಹಾರ ಅರಸಿಕೊಂಡು ಅರಣ್ಯ ಪ್ರದೇಶ ಬಿಟ್ಟು ನಾಡಿಗೆ ಬರುವ ಆನೆಗಳು ತಾವು ನಡೆದದ್ದೇ ದಾರಿ ಎಂಬಂತೆ […]
ಮಡಿಕೇರಿ: ಅವ್ರೆಲ್ಲಾ ಒಂಟಿಯಾಗಿ ಬಂದ್ರೆನೆ ಜನ್ರ ಜೀವ ಬಾಯಿಗೆ ಬಂದಂಗೆ ಆಗುತ್ತೆ. ಅಂಥಾದ್ರಲ್ಲಿ ಗ್ಯಾಂಗ್ ಕಟ್ಕೊಂಡು ಊರಿಗೆ ಬಂದ್ರು ಅಂದ್ರೆ ಕೇಳ್ಬೇಕಾ. ಮನೆಯಿಂದ ಹೊರ ಬರೋಕೂ ಭಯ ಪಡ್ಬೇಕು. ಹೀಗಾಗೇ ಆ ಗ್ಯಾಂಗ್ನ ವಾಪಸ್ ಕಳಿಸೋಕೆ ನಡೆದ ಸರ್ಕಸ್ ಅಷ್ಟಿಷ್ಟಲ್ಲ.
ನಾಡಿಗೆ ನುಗ್ಗಿದ ಗಜಪಡೆಯನ್ನ ಕಾಡಿಗಟ್ಟಲು ಸರ್ಕಸ್: ಕಾಡಾನೆಗಳ ಎಂಟ್ರಿ ಕೊಟರೆ ಹಂಗೆ. ಅದ್ರಲ್ಲೂ ಕೊಡಗಿನಲ್ಲಂತೂ ದಿನಬೆಳಗಾದ್ರೆ ಆನೆಗಳದ್ದೇ ಹಾವಳಿ. ಆಹಾರ ಅರಸಿಕೊಂಡು ಅರಣ್ಯ ಪ್ರದೇಶ ಬಿಟ್ಟು ನಾಡಿಗೆ ಬರುವ ಆನೆಗಳು ತಾವು ನಡೆದದ್ದೇ ದಾರಿ ಎಂಬಂತೆ ಓಡಾಡುತ್ತವೆ.
ಸದ್ಯ ಇಂಥದ್ದೇ ಒಂದು ಗ್ಯಾಂಗ್ ಸೋಮವಾರಪೇಟೆ ತಾಲೂಕಿನ ಕುಶಾಲನಗರ ವಲಯದ ಹುದುಗೂರು ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡುಬಿಟ್ಟಿದೆ. ಹೀಗಾಗಿ ಇವುಗಳನ್ನ ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆ ನಡೆಯಿತು. ಅರಣ್ಯ ಇಲಾಖೆಯ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಈ ರಿಸ್ಕಿ ಆಪರೇಷನ್‍ನಲ್ಲಿ ಪಾಲ್ಗೊಂಡಿದ್ದರು.
ಇನ್ನು ದೊಡ್ಡತ್ತೂರು, ಚಿಕ್ಕತ್ತೂರು, ಹಾರಂಗಿ, ಸೀಗೆಹೊಸೂರು, ಮದಲಾಪುರ, ಜೇನುಕಲ್ಲು ಬೆಟ್ಟ, ಬೆಂಡೆಬೆಟ್ಟ ಭಾಗದಲ್ಲಿ ಇತ್ತೀಚೆಗೆ ಆನೆ ಹಾವಳಿ ವಿಪರೀತವಾಗಿದೆ. ಇದ್ರಿಂದ ರೈತರು, ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸ್ತಿದ್ದಾರೆ.
ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಗಳನ್ನ ಕಾಡಿಗೆ ಅಟ್ಟಿದ್ದಾರೆ. ಇದ್ರಿಂದ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯಕ್ಕೇನೋ ಆನೆಗಳು ಮರಳಿ ಕಾಡಿಗೆ ಹೋಗಿವೆ. ಆದ್ರೆ ಯಾವಾಗ ಗುಂಪು ಕಟ್ಕೊಂಡು ವಾಪಸ್ ಎಂಟ್ರಿ ಕೊಡ್ತಾವೋ ಹೇಳೋಕಾಗಲ್ಲ.
Published On - 3:30 pm, Sun, 2 February 20