ಅಪಘಾತದಲ್ಲಿ ಒಂದೇ ಊರಿನ ಏಳು ಸ್ನೇಹಿತರು ದುರ್ಮರಣ! ಕೊಡಗು ಗ್ರಾಮದಲ್ಲಿ ಸೂತಕದ ಛಾಯೆ
ಮಧುಮಗ ಜಾನಿಯ ತಂದೆ ಫಿಲಿಪ್ ಕೂಡ ಇವರ ಜೊತೆ ಇದ್ದರು. ಅಲ್ಲಿಂದ ಹೊರಟ ಅರ್ಧ ಗಂಟೆಯಲ್ಲೇ ದುರ್ಘಟನೆ ಸಂಭವಿಸಿದೆ. ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಫಿಲಿಪ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊಡಗು: ಒಂದೇ ಊರಿನ ಏಳು ಮಂದಿ ಅಪಘಾತದಲ್ಲಿ (Accident) ಮೃತಪಟ್ಟಿದ್ದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮದುವೆಗೆ (Marriage) ಎಂದು ಮೈಸೂರಿಗೆ ಹೋದ ಏಳು ಮಂದಿ ಸ್ನೇಹಿತರು ಹೆಣವಾಗಿ ಊರಿಗೆ ಮರಳಿದ್ದಾರೆ. ಅಪಘಾತಕ್ಕೆ ಒಳಗಾದವರೆಲ್ಲರೂ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮಸ್ಥರು. ಇವರ ಅಗಲಿಕೆಯಿಂದ ಇಡೀ ಗ್ರಾಮ ದಿಗ್ಭ್ರಾಂತಿಗೆ ಒಳಗಾಗಿದೆ. ಸಾವನ್ನಪ್ಪಿದವರನ್ನು ಒಂದೇ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಪಾಲಿಬೆಟ್ಟ ಗ್ರಾಮದ ಫಿಲಿಪ್ ಎಂಬುವರ ಪುತ್ರ ಜಾನಿಯ ವಿವಾಹ ಹುಣಸೂರಿನಲ್ಲಿ ನಿನ್ನೆ (ಏಪ್ರಿಲ್ 20) ಆಯೋಜನೆಯಾಗಿತ್ತು. ಸಂತೋಷ್, ವಿನೀದ್, ಎಂಆರ್ ಅನಿಲ್, ರಾಜೇಶ್, ದಯಾನಂದ್ ಮತ್ತು ಬಾಬು ಒಂದೇ ಜೀಪಿನಲ್ಲಿ ತೆರಳಿದ್ದರು. ಮದುವೆಯಲ್ಲಿ ಎಂಜಾಯ್ ಮಾಡಿ ಊಟದ ಬಳಿಕ ಮಧ್ಯಾಹ್ನ ಮೂರು ಗಂಟೆಗೆ ಮರಳಿ ಪಾಲಿಬೆಟ್ಟಕ್ಕೆ ಹೊರಟಿದ್ದಾರೆ. ಮಧುಮಗ ಜಾನಿಯ ತಂದೆ ಫಿಲಿಪ್ ಕೂಡ ಇವರ ಜೊತೆ ಇದ್ದರು. ಅಲ್ಲಿಂದ ಹೊರಟ ಅರ್ಧ ಗಂಟೆಯಲ್ಲೇ ದುರ್ಘಟನೆ ಸಂಭವಿಸಿದೆ. ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಫಿಲಿಪ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ವಿನೀದ್ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ದಿನದಲ್ಲಿ ಇದೇ ಪಾಲಿಬೆಟ್ಟ ಗ್ರಾಮದಲ್ಲಿ ಆತನ ವಿವಾಹವಾಗಬೇಕಾಗಿತ್ತು. ಮಧುಮಗನಾಗಿ ಮೆರವಣಿಗೆ ತೆರಳಬೇಕಾಗಿದ್ದ ವಿನೀದ್ ಹೆಣವಾಗಿ ಸ್ಮಶಾನಕ್ಕೆ ಬಂದಿದ್ದಾನೆ ಅಂತ ಊರಿನವರು ಮಮ್ಮಲ ಮರುಗಿದರು.
ತಂದೆ ಫಿಲಿಪ್ ಅವರನ್ನು ಕಳೆದುಕೊಂಡಿರುವ ಮಧುಮಗ ಜಾನಿ ಮತ್ತು ಕುಟುಂಬ ಮದುವೆಯನ್ನು ಸಂಭ್ರಮಿಸಲಾಗದೆ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಇದನ್ನೂ ಓದಿ
Redmi 10A: ಕೇವಲ 8,499 ರೂಪಾಯಿಗೆ ಎಂಥಾ ಫೋನ್: ರೆಡ್ಮಿ 10A ಕಂಡು ದಂಗಾದ ಬಜೆಟ್ ಪ್ರಿಯರು
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ; ಮೈಸೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ
Published On - 1:54 pm, Thu, 21 April 22