AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿ ಜೊತೆ ಕೋಲಾರಕ್ಕೆ ಬಂದಿದ್ದೆ: ಸಮಾವೇಶದಲ್ಲಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ರಾಹುಲ್

ಮಂಡ್ಯದಲ್ಲಿನ ಸಮಾವೇಶದ ಬಳಿಕ ಕಾಂಗ್ರೆಸ್ ಪಡೆ ಕೋಲಾರದಲ್ಲೂ ಅಬ್ಬರದ ಮತಬೇಟೆಗಿಳಿಯಿತು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ, ಇಂದಿರಾಗಾಂಧಿ ಅವರ ಜೊತೆ ಕೋಲಾರ ಗೋಲ್ಡ್ ಫೀಲ್ಡ್​​ಗೆ ಭೇಟಿ ನೀಡಿದ್ದು, ಕಾರ್ಮಿಕರನ್ನ ಮಾತನಾಡಿಸಿದ್ದ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. 

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Apr 17, 2024 | 6:39 PM

Share

ಕೋಲಾರ, ಏಪ್ರಿಲ್​ 17: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗುತ್ತಿರುವ ಹೊತ್ತಲ್ಲಿ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ಮಂಡ್ಯದಲ್ಲಿ ಭರ್ಜರಿ ಮತಯಾಚನೆ ಮಾಡಿದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ (Rahul Gandhi), ಇದೀಗ ಕೋಲಾರಕ್ಕೆ ಆಗಮಿಸಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿಯಲ್ಲಿ ನಡೆದ ಕಾಂಗ್ರೆಸ್ (Congress) ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ಕೋಲಾರ ಗೋಲ್ಡ್ ಫೀಲ್ಡ್​​ಗೆ ಇಂದಿರಾಗಾಂಧಿ ಅವರ ಜೊತೆ ಬಂದಿದ್ದೆ‌. ಸುರಂಗದ ಒಳಗೆ ಹೋಗಿ ಅಲ್ಲಿ ಕಾರ್ಮಿಕರನ್ನ ಮಾತನಾಡಿಸಿದ್ದು ನೆನಪಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಅಲ್ಲಿ ಚಿನ್ನದ ಇಟ್ಟಿಗೆಯನ್ನ ನೋಡಿದೆ. ಅಲ್ಲಿ ಕೋಲಾರ ಸಂಪನ್ಮೂಲ ಆ ಗಣಿಯಲ್ಲಿದೆ ಎಂದು ತಿಳಿಯಿತು. ರೈತರಾಗಿ, ಕಾರ್ಮಿಕರಾಗಿ ದುಡಿದು ಗೌರವ ತರುತ್ತಿದ್ದೀರ. ನನ್ನ ರಾಜಕಾರಣದ ಗುರುಗಳು ಇಂದಿರಾ ಗಾಂಧಿ ಅವರು. ಅವರು ಹಲವಾರು ರಾಜಕೀಯ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ಹಲವಾರು ಜನ ರಾಜಕಾರಣವನ್ನ ಕಷ್ಟದ ಕೆಲಸ ಎಂದುಕೊಂಡಿದ್ದಾರೆ. ರಾಜಕಾರಣ ಮಾಡಬೇಕಾದರೆ ಸಾಕಷ್ಟು ಪ್ಲಾನ್ ಮಾಡಬೇಕು ಅಂದಿಕೊಂಡಿದ್ದಾರೆ. ಆದರೆ ಇಂದಿರಾಗಾಂಧಿ ಈ ರೀತಿಯ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Rahul Gandhi: ಮಂಡ್ಯದಲ್ಲಿ ರಾಹುಲ್​ ಗಾಂಧಿ ಅಬ್ಬರದ ಭಾಷಣ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಅವರು ನನ್ನೊಂದಿಗೆ ಮಾತನಾಡಿದಾಗ ಒಂದು ಅಂಶ ಹೇಳಿದರು. ಆ ಒಂದು ಪಾಠದಿಂದ ಪೂರ್ತಿ ರಾಜಕಾರಣ ಅರ್ಥ ಮಾಡಿಕೊಳ್ಳಬಹುದು. ರಾಹುಲ್ ನಾಯಕನಿಗೆ ಇರುವುದು ಒಂದೇ ಕೆಲಸ. ಒಬ್ಬ ನಾಯಕ ಸಾಮಾಜದಲ್ಲಿರುವ ತಾರತಮ್ಯವನ್ನ ಗುರುತಿಸಬೇಕು. ಆ ತಾರತಮ್ಯವನ್ನ ಹೆಜ್ಜೆ ಹಿಂದೆ ಇಡದೆ ಮಾಡಬೇಕು. ಅವರು ಹೇಳಿಕೊಟ್ಟ ಪಾಠದಲ್ಲಿ ಇದೆ ಅತ್ಯಂತ ಪ್ರಮುಖವಾದುದು ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಸಚಿವರಿಂದ ಭಾರೀ ಸ್ವಾಗತ

ಈ ದೇಶದಲ್ಲಿ ಕೋಟ್ಯಾಂತರ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಇವಾಗ ನಾವು ರೈತರ ಸಾಲ ಮನ್ನಾ ಮಾಡಿದರೆ, ಮುಂದೆ 25 ವರ್ಷಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುವಷ್ಟು ಆ ಬಿಲೆನಿಯರ್ಸ್​ಗೆ ನೀಡಿದ್ದಾರೆ. 22 ಜನ ಬಿಲೆನಿಯರ್ಸ್ ಆಸ್ತಿ, ಇಡೀ ದೇಶದ ಆಸ್ತಿ ಒಂದೇ. ಈ‌ ದೇಶದ ಆಸ್ತಿ ಬರೀ 22 ಜನರ ಹತ್ತಿರ ಮಾತ್ರ ಇದೆ ಎಂದು ಕಿಡಿಕಾರಿದ್ದಾರೆ.

ಗಂಭೀರ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ

ದೊಡ್ಡ ಉದ್ಯಮಿಗಳ ಕಂಪನಿಗಳಲ್ಲಿ ಹಿಂದುಳಿದ ವರ್ಗದವರು ಇಲ್ಲ. ಕಂಪನಿಗಳ ಉನ್ನತ ಹುದ್ದೆಯಲ್ಲಿ ಹಿಂದುಳಿದವರು ಯಾರೂ ಇಲ್ಲ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಹಿಂದುಳಿದ ವರ್ಗದವರಿಗೆ ಸ್ಥಾನವೇ ಇಲ್ಲ. ದೇಶದ ಶೇ.90ರಷ್ಟು ಜನರು ಈ ಉದ್ಯಮಿಗಳ ಕಂಪನಿಗಳಲ್ಲಿ ಇಲ್ಲ. ದೇಶದಲ್ಲಿ ಒಬಿಸಿ ಸಮುದಾಯದರು ಶೇ.50ರಷ್ಟು ಇದ್ದಾರೆ. ಆದರೆ 90 ಅಧಿಕಾರಿಗಳ ಪೈಕಿ ಕೇವಲ ಮೂವರು ಒಬಿಸಿಯವರು. ದಲಿತರು ಹಾಗೂ ಆದಿವಾಸಿಗಳಿಗೆ ಅಧಿಕಾರದಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:28 pm, Wed, 17 April 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್