ಕೋಲಾರ, ಆ.21: ಜಿಲ್ಲೆಯ ಮುಳಬಾಗಿಲು(Mulabagilu) ನಗರದ ಸುಂಕು ಬಡಾವಣೆಯಲ್ಲಿ ಆಗಸ್ಟ್.14 ರಂದು ಅಪ್ರಾಪ್ತ ಬಾಲಕರು ಸೇರಿಕೊಂಡು ಸರ್ಕಾರಿ ಶಾಲಾ ಶಿಕ್ಷಕಿಯ ದಿವ್ಯಶ್ರೀ ಎಂಬಾಕೆಯನ್ನು ಕುತ್ತಿಗೆ ಕುಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಕೊಲೆ ಮಾಡುವ ಹಿಂದಿನ ದಿನ ಕೊಲೆಯ ಮಾಸ್ಟರ್ ಮೈಂಡ್ ರಂಜಿತ್, ಯುವರಾಜ್ ಜೊತೆಗೆ ಮಾತನಾಡಿರುವ ಕಾಲ್ ರೆಕಾರ್ಡಿಂಗ್ ವೈರಲ್ ಆಗಿದೆ.
‘ಅವರನ್ನು ಸಾಯಿಸಿ ಬಲಗೈ ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ಬಾ, ಮನೆಯಲ್ಲಿರುವ ಹಣ, ಒಡವೆ, ಮೊಬೈಲ್, ಎಲ್ಲವನ್ನೂ ದೋಚಿಕೊಂಡು ಬರುವಂತೆ ಸೂಚನೆ ನೀಡಿದ್ದಾನೆ. ಜೊತೆಗೆ ಎಲ್ಲರಿಗೂ ಐದು ಲಕ್ಷ ರೂಪಾಯಿ ಹಂಚಿಕೊಳ್ಳಬೇಕು ಅದಕ್ಕಾಗಿ ಬೇಕಾಗುವಷ್ಟು ಹಣ ಬೇಕೇ ಬೇಕು. ನನಗೆ 15 ಲಕ್ಷ ಸಾಲ ಇದೆ. ಅದನ್ನು ತೀರಿಸಿಕೊಳ್ಳಬೇಕು ಹಾಗಾಗಿ ಏನನ್ನೂ ಬಿಡಬೇಡ,
ಮನೆಯ ಲಾಕರ್ ಒಡೆಯ ಬೇಡ, ಮತ್ತೆ ನಾನು ಮನೆ ರಿಪೇರಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಆರೋಪಿ ರಂಜಿತ್ ಹೇಳಿರುವ ಆಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಶಿಕ್ಷಕಿ ಕೊಲೆಗೆ ಕಾರಣವೇನು? ಹತ್ಯೆಗೆ ಮುನ್ನ ಆರೋಪಿ ಏನೆಲ್ಲಾ ಪ್ಲ್ಯಾನ್ ಮಾಡಿದ್ದ? ಮಾಹಿತಿ ಬಿಚ್ಚಿಟ್ಟ ಎಸ್ಪಿ
ಇನ್ನು ಶಿಕ್ಷಕಿಯ ಕೊಲೆ ನಂತರ ಮತ್ತೊಂದು ಕೊಲೆಗೆ ಈ ಯುವಕರು ಸಂಚು ಮಾಡಿದ್ದರು. ಸದ್ಯ ಪ್ಲಾನ್ ಎಲ್ಲವೂ ಪ್ಲಾಪ್ ಆಗಿದ್ದು, ನಾಲ್ಕು ಜನ ಅಪ್ರಾಪ್ತರು ಸೇರಿ ಮೂವರು ಆರೋಪಿಗಳು ಪೊಲೀಸರ ಅಥಿತಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಸುಂಕು ಬಡಾವಣೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರನ್ನು ಹಂತಕರ ತಂಡವೊಂದು ಬರ್ಬರವಾಗಿ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದರು. ಮನೆಯಲ್ಲಿದ್ದ ಆಕೆಯ ಮಗಳು ಸ್ವಲ್ಪದರಲ್ಲೇ ಪಾರಾಗಿದ್ದರು. ತಕ್ಷಣ ಸ್ಥಳಕ್ಕೆ ಎಸ್ಪಿ ನಿಖಿಲ್, ಸೇರಿದಂತೆ ಎಫ್ಎಸ್ಎಲ್ ತಂಡ, ಶ್ವಾನ ದಳದ ಸಿಬ್ಬಂದಿ, ಬೆರಳಚ್ಚು ತಜ್ನರು ಹೀಗೆ ಬೇರೆ ಬೇರೆ ತಂಡ ಭೇಟಿ ನೀಡಿ, ಕೊಲೆಯಾದ ಸ್ಥಳದಲ್ಲಿ ಸಾಕ್ಷಿ ಸಂಗ್ರಹದ ಕೆಲಸಕ್ಕೆ ಮುಂದಾಗಿತ್ತು. ಈ ವೇಳೆ ಆಸ್ಪತ್ರೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಆರು ಜನ ಯುವಕರ ತಂಡವೊಂದು ಕೊಲೆಯಾದ ಸಮಯಕ್ಕೆ ಆ ರಸ್ತೆಯಲ್ಲಿ ಹೋಗುವ ದೃಶ್ಯ ಸಿಕ್ಕಿತ್ತು. ಅದೊಂದು ದೃಷ್ಯಾವಳಿಗಳನ್ನು ಹಿಡಿದುಕೊಂಡು ಪೊಲೀಸರ ಹುಡುಕಾಟ ಶುರುವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ