ಬಿತ್ತನೆ ಬೀಜದ ದರ ನಿಗದಿಗೆ ಮುಂದಾದ ಜಿಲ್ಲಾಡಳಿತ; ರೈತರನ್ನು ವಂಚಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ

ಇನ್ನು ಮುಂದೆ ಖರೀದಿ ಮಾಡಿದ ಬಿತ್ತನೆ ಆಲೂಗಡ್ಡೆಗೆ ಬಿಲ್ ಕೊಡಬೇಕು ಹಾಗೂ ಪ್ರತಿ ವಾರ ದರ ಮಾಪನ ಮಾಡುವಂತೆ ಅಧಿಕಾರಿಗಳಿಗೆ ಕೋಲಾರ ಜಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದ್ದಾರೆ.

ಬಿತ್ತನೆ ಬೀಜದ ದರ ನಿಗದಿಗೆ ಮುಂದಾದ ಜಿಲ್ಲಾಡಳಿತ; ರೈತರನ್ನು ವಂಚಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ
ಬಿತ್ತನೆ ಬೀಜದ ದರ ನಿಗದಿಗೆ ಮುಂದಾದ ಜಿಲ್ಲಾಡಳಿತ
Follow us
TV9 Web
| Updated By: preethi shettigar

Updated on: Sep 07, 2021 | 8:25 AM

ಕೋಲಾರ: ಆಲೂಗಡ್ಡೆ ಬೆಳೆ ರೈತರ ಕೈ ಹಿಡಿದರೆ ಲಕ್ಷಾಧಿಪತಿ, ಅದೇ ಒಂದು ವೇಳೆ ಕೈ ಕೊಟ್ಟರೆ ರೈತರ ಪಾಡು ದೇವರೇ ಗತಿ ಎನ್ನುವಂತಾಗುತ್ತದೆ. ಹೀಗಿರುವಾಗಲೇ ಇಂತಹ ಬೆಳೆಯನ್ನು ಬಂಡವಾಳ ಮಾಡಿಕೊಂಡ ಕೆಲವರು ಕೋಟ್ಯಾಂತರ ರೂಪಾಯಿ ರೈತರಿಂದ ಲೂಟಿ ಮಾಡಲು ನಿಂತಿದ್ದಾರೆ. ಇದೆಲ್ಲವನ್ನು ಮನಗಂಡ ಕೋಲಾರ ಜಿಲ್ಲಾಡಳಿತ ಅಂತಹ ವ್ಯಾಪಾರಕ್ಕೆ ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ಅಷ್ಟಕ್ಕೂ ಏನದು ವ್ಯಾಪಾರ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಇತ್ತೀಚೆಗೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಬಿತ್ತನೆ ಬೀಜದ ವಿವಾದ ಕುರಿತು ಎಚ್ಛೆತ್ತ ಕೋಲಾರ ಜಿಲ್ಲಾಡಳಿತ ಬಿತ್ತನೆ ಬೀಜದ ದರ ನಿಗದಿ ಸೇರಿದಂತೆ, ಬಿತ್ತನೆ ಬೀಜದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದೆ. ಬಂಗಾರಪೇಟೆ ಎಪಿಎಂಸಿ ಸೇರಿದಂತೆ ಜಿಲ್ಲೆಯ ಹಲವು ಎಪಿಎಂಸಿಗಳಲ್ಲಿ ಬಿತ್ತನೆ ಬೀಜವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಖರೀದಿ ಮಾಡಿದ ಬಿತ್ತನೆ ಬೀಜಕ್ಕೆ ಬಿಲ್ ಕೊಡದೆ ರೈತರನ್ನು ವಂಚನೆ ಮಾಡಲಾಗುತ್ತಿದೆ ಎನ್ನುವ ದೂರು ಬಂದ ಹಿನ್ನೆಯಲ್ಲಿ ಇಂದು ಕೋಲಾರ ಜಿಲ್ಲಾಧಿಕಾರಿ, ರೈತ ಮುಖಂಡರು ಹಾಗೂ ವರ್ತಕರು, ಅಧಿಕಾರಿಗಳ ಸಭೆ ಕರೆದಿದ್ದರು.

ಜಿಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 50-60 ಕೋಟಿ ರೂಪಾಯಿ ವೆಚ್ಚದಲ್ಲಿ ಆಲೂಗಡ್ಡೆ ವಹಿವಾಟು ಮಾಡಲಾಗುತ್ತದೆ. ಹೀಗಿರುವಾಗ ರೈತರಿಗೆ ಗುಣಮಟ್ಟದ ಹಾಗೂ ದೃಡೀಕೃತ ಬಿತ್ತನೆ ಆಲೂಗಡ್ಡೆ ಬೀಜ ಸಿಗುತ್ತಿಲ್ಲ ಎನ್ನುವ ಕೂಗು ಕೇಳಿ ಬಂದಿತ್ತು. ಪರಿಣಾಮ ಎಚ್ಛೇತ್ತ ಅಧಿಕಾರಿಗಳು ಲಂಗು ಲಾಗಮು ಇಲ್ಲದೆ ತಮಗಿಷ್ಟ ಬಂದಂತೆ, ಜಲಂದರ್ ಹೆಸರಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಿ ರೈತರನ್ನು ಮೋಸ ಮಾಡುತ್ತಿದ್ದವರಿಗೆ ಕಡಿವಾಣ ಹಾಕಿದ್ದಾರೆ. ಇನ್ನು ಮುಂದೆ ಖರೀದಿ ಮಾಡಿದ ಬಿತ್ತನೆ ಆಲೂಗಡ್ಡೆಗೆ ಬಿಲ್ ಕೊಡಬೇಕು ಹಾಗೂ ಪ್ರತಿ ವಾರ ದರ ಮಾಪನ ಮಾಡುವಂತೆ ಅಧಿಕಾರಿಗಳಿಗೆ ಕೋಲಾರ ಜಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಗೆ ಪಂಜಾಬ್‌ನ ಜಲಂದರ್‌ನಿಂದ ಬಿತ್ತನೆ ಆಲೂಗಡ್ಡೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಆಮದು ಮಾಡಿಕೊಂಡ ಆಲೂಗಡ್ಡೆಗೆ ವ್ಯಾಪಾರಸ್ಥರು ಕ್ವಿಂಟಾಲ್​ಗೆ 2000-3000 ಸಾವಿರ ರೂ. ರೈತರಿಗೆ ನೀಡುತ್ತಿದ್ದಾರೆ. ಆದರೆ ಬಿತ್ತನೆ ಆಲೂಗಡ್ಡೆಗೆ ಯಾವುದೇ ಬಿಲ್ ನೀಡುವುದಿಲ್ಲ. ಜೊತೆಗೆ ದೃಡೀಕೃತ ಬಿತ್ತನೆ ಆಲೂಗಡ್ಡೆ ನೀಡುತ್ತಿರಲಿಲ್ಲ. ರಾಜ್ಯದಲ್ಲೇ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ಹಾಸನ ಜಿಲ್ಲೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಲು ಅನುಮತಿ ನೀಡಿದೆ. ಅದೇ ಮಾದರಿಯಲ್ಲಿ ಬಿತ್ತನೆ ಬೀಜ ಮಾರಾಟಕ್ಕೆ ಕೋಲಾರದಲ್ಲಿಯೂ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೆ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಇಲ್ಲೇ ಬಿತ್ತನೆ ಆಲೂಗಡ್ಡೆ ಮಾಡುವಂತೆ ತರಬೇತಿ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅದರೆ ಸದ್ಯಕ್ಕೆ ಇಷ್ಟೆಲ್ಲಾ ಗೊಂದಲಗಳ ನಡುವೆ ರೈತರು ಮೋಸ ಹೋಗದಂತೆ ಜಿಲ್ಲಾಡಳಿತ ಬಿತ್ತನೆ ಆಲೂಗಡ್ಡೆ ಸರ್ಟಿಪೈಡ್ ಮಾಡಿಕೊಡುವುದರ ಜೊತೆಗೆ ರೈತರಿಗೆ ಬೇಕಾದ ಬಿತ್ತನೆ ಆಲೂಗಡ್ಡೆಯನ್ನು ತೋಟಗಾರಿಕೆ ಇಲಾಖೆ ವತಿಯಿಂದಲೆ ವಿತರಣೆ ಮಾಡಬೇಕು ಎಂದು ರೈತ ಮುಖಂಡರಾದ ನಾರಾಯಣಗೌಡ ಒತ್ತಾಯ ಮಾಡಿದ್ದಾರೆ.

ಒಟ್ಟಿನಲ್ಲಿ ಬಿತ್ತನೆ ಆಲೂಗಡ್ಡೆ ವಿಚಾರದಲ್ಲಿ ಕೋಲಾರದ ರೈತರು ಪದೇ ಪದೇ ಮೋಸಕ್ಕೆ ಗುರಿಯಾಗುತ್ತಿದ್ದಾರೆ. ಪರಿಣಾಮ ಎಚ್ಛೇತ್ತ ಜಿಲ್ಲಾಡಳಿತ ಹಾಗೂ ತೋಟಗಾರಿಕಾ ಇಲಾಖೆ ಮಧ್ಯಪ್ರವೇಶಿಸಿ ಬಿತ್ತನೆ ಆಲೂಗಡ್ಡೆಗೆ ಅಧಿಕೃತ ಪರವಾನಿಗೆ ಹಾಗೂ ಉದ್ಬವವಾಗಿರುವ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಇದರ ಫಲಿತಾಂಶ ಏನಾಗುತ್ತದೆ ಎನ್ನುವುದನ್ನು ಮಾತ್ರ ಕಾದು ನೋಡಬೇಕಿದೆ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ: ರೈತರ ಅನುಕೂಲಕ್ಕಾಗಿ ಕೃಷಿಯನ್ನು ಆಧುನೀಕರಣಗೊಳಿಸಬೇಕು: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ವರದಿ ಪ್ರಕಟ; ರಾಜ್ಯದಲ್ಲಿ 9ನೇ ಸ್ಥಾನಕ್ಕಿಳಿದ ರಾಯಚೂರು ಜಿಲ್ಲೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್