ಕೋಲಾರ: ವಂಚನೆ ಪ್ರಕರಣದಲ್ಲಿ ಬಿಟಿಎಂ ಲೇಔಟ್ ಮಾಜಿ ಕಾರ್ಪೊರೇಟರ್ ಬಂಧನ
ಒಂದು ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ದೇವದಾಸ್, ಹಣ ಪಡೆದ ಬಳಿಕ ಯಾವುದೇ ಜಮೀನು ಕೊಡಿಸಿರಲಿಲ್ಲ. ಹೀಗಾಗಿ ಶಾಸಕ ಮಹಮದ್ ನವಾಜ್ ಬಾಷ ದೂರು ನೀಡಿದ್ದರು. ಆದ್ದರಿಂದ ಇಂದು ಬೆಳಗ್ಗೆ ಮದನಪಲ್ಲಿ ಪೊಲೀಸರು ದೇವದಾಸ್ ಅವರನ್ನು ಬಂಧಿಸಿದ್ದಾರೆ.
ಕೋಲಾರ: ವಂಚನೆ ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಬಿಟಿಎಂ ಲೇಔಟ್(BTM Layout) ಮಾಜಿ ಕಾರ್ಪೊರೇಟರ್ ಅನ್ನು ಬಂಧಿಸಲಾಗಿದೆ. ಮದನಪಲ್ಲಿ ಪೊಲೀಸರು(Karnataka police) ಮಾಜಿ ಕಾರ್ಪೊರೇಟರ್ ದೇವದಾಸ್ ಅವನ್ನು ಬಂಧಿಸಲಾಗಿದೆ(Arrest). ಸರ್ಕಾರಿ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ಮದನಪಲ್ಲಿ ಶಾಸಕ ಮಹಮದ್ ನವಾಜ್ ಬಾಷರಿಂದ ಹಣ ಪಡೆದಿದ್ದ ದೇವದಾಸ್ ಅವರ ವಿರುದ್ಧ ಕೇಸ್ ದಾಖಲಾಗಿದ್ದು, ಇಂದು (ಫೆಬ್ರವರಿ 14) ಪೊಲೀಸರು ಬಂಧಿಸಿದ್ದಾರೆ.
ಒಂದು ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ದೇವದಾಸ್, ಹಣ ಪಡೆದ ಬಳಿಕ ಯಾವುದೇ ಜಮೀನು ಕೊಡಿಸಿರಲಿಲ್ಲ. ಹೀಗಾಗಿ ಶಾಸಕ ಮಹಮದ್ ನವಾಜ್ ಬಾಷ ದೂರು ನೀಡಿದ್ದರು. ಆದ್ದರಿಂದ ಇಂದು ಬೆಳಗ್ಗೆ ಮದನಪಲ್ಲಿ ಪೊಲೀಸರು ದೇವದಾಸ್ ಅವರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ದೇವದಾಸ್ ಕಾರ್ ಸೀಜ್ ಮಾಡಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಸದ್ಯ ದೇವದಾಸ್ ಅವರನ್ನು ಇರಿಸಲಾಗಿದೆ.
ಬೆಂಗಳೂರು: ದೇವಣ್ಣನಪಾಳ್ಯದಲ್ಲಿ ಹಣಕಾಸು ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಬೆಂಗಳೂರು ನಗರದ ದೇವಣ್ಣನಪಾಳ್ಯದಲ್ಲಿ ಸ್ನೇಹಿತರ ನಡುವೆ ಹಣಕಾಸು ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ. ಬೈಕ್‌ನಿಂದ ಗುದ್ದಿ ಹತ್ಯೆಗೆ ಯತ್ನಿಸಲಾಗಿತ್ತು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಮೇಲೆ ಸಂತೋಷ್ ಹಲ್ಲೆ ನಡೆಸಿದ್ದರು. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಂಜುನಾಥ್ (28)ಮೃತ ದುರ್ದೈವಿ.
ಸಂತೋಷ(30)ಬೈಕ್ ನಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿದ್ದ. ಫೆ.11ನೇ ತಾರೀಖಿನಂದು ಈ ಘಟನೆ ನಡೆದಿತ್ತು. ನಿಮಾನ್ಸ್ ಆಸ್ಪತ್ರೆಯಲ್ಲಿ 3 ದಿನಗಳಿಂದ ಮಂಜುನಾಥ್ಗೆ ಚಿಕಿತ್ಸೆ ನಡೆದಿತ್ತು. ತಲೆಗೆ ಗಂಭೀರ ಗಾಯವಾದ ಹಿನ್ನೆಲೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹಸು ಸಾಕಿಕೊಂಡು ಹಾಲಿನ ವ್ಯಾಪಾರ ಮಂಜುನಾಥ್ ಮಾಡುತ್ತಿದ್ದ. ಕೋಳಿ ಅಂಗಡಿ ಇಟ್ಟುಕೊಂಡು ಆರೋಪಿ ಸಂತೋಷ್ವ್ಯಾಪಾರ ಮಾಡುತ್ತಿದ್ದ. 25 ಸಾವಿರ ಹಣವನ್ನು ಬಡ್ಡಿ ಕೊಡುವುದಾಗಿ ಹಣ ಪಡೆದಿದ್ದ ಅರೋಪಿ ಸಂತೋಷ
6 ತಿಂಗಳಿಂದ ಬಡ್ಡಿಯೂ ಇಲ್ಲ ಹಣವೂ ಕೊಟ್ಟಿರಲಿಲ್ಲ. ಇದೇ ವಿಚಾರದಲ್ಲಿ ಗಲಾಟೆ ನಡುವೆ ತನ್ನ ಬೈಕ್ ನಿಂದ ಡಿಕ್ಕಿ ಹೊಡೆದು ಬಳಿಕ ಹಲ್ಲೆ ನಡೆಸಿದ್ದಾನೆ.
ಇಬ್ಬರೂ ಕೂಡ ಒಂದೇ ಗ್ರಾಮದ ದೇವಣ್ಣನಪಾಳ್ಯ ಗ್ರಾಮದವರು. ಹಲ್ಲೆ ನಡೆದ ದಿನವೇ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮಂಜುನಾಥ್ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ.
ಇದನ್ನೂ ಓದಿ: ಕಮಲ್ ಪಂತ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ವಕೀಲ ಜಗದೀಶ್ ಅರೆಸ್ಟ್! 14 ದಿನಗಳ ಕಾಲ ನ್ಯಾಯಾಂಗ ಬಂಧನ
Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ
Published On - 11:54 am, Mon, 14 February 22