AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ಭಯದಲ್ಲೇ ಪಾಠ ಕಲಿಯಬೇಕಾದ ದುಃಸ್ಥಿತಿಯಲ್ಲಿ ನೂರಾರು ಬಡ ಮಕ್ಕಳು, ಎಲ್ಲಿ?

ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಪರಿಶಿಷ್ಟ ಮಕ್ಕಳು ಪಾಠ ಕಲಿಯುವ ಕೋಲಾರ ಶಾಲೆಯ ಪರಿಸ್ಥಿತಿ ಹೀಗಿದೆ. ಹಾಗಾದ್ರೆ ಸರ್ಕಾರಗಳು ಶಿಕ್ಷಣಕ್ಕಾಗಿ, ಅದರಲ್ಲೂ ಬಡವರ ಕಲ್ಯಾಣಕ್ಕಾಗಿ ಅಂತ ಹೇಳಿ ಖರ್ಚು ಮಾಡುತ್ತಿರುವ ಕೋಟ್ಯಾಂತರ ರೂಪಾಯಿ ಹಣ ಎಲ್ಲಿ ಹೋಗ್ತಾ ಇದೆ ಅನ್ನೋದೆ ದೊಡ್ಡ ಪ್ರಶ್ನೆ.

ಜೀವ ಭಯದಲ್ಲೇ ಪಾಠ ಕಲಿಯಬೇಕಾದ ದುಃಸ್ಥಿತಿಯಲ್ಲಿ ನೂರಾರು ಬಡ ಮಕ್ಕಳು, ಎಲ್ಲಿ?
ಜೀವ ಭಯದಲ್ಲೇ ಪಾಠ ಕಲಿಯಬೇಕಾದ ದುಃಸ್ಥಿತಿಯಲ್ಲಿ ನೂರಾರು ಬಡ ಮಕ್ಕಳು,
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Dec 04, 2023 | 1:56 PM

ಅದು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಶಾಲೆ, ಸರ್ಕಾರಿ ಶಾಲೆಯ ಕಟ್ಟಡ ಮುರಿದು ಬಿದ್ದು ನಾಲ್ಕು ವರ್ಷ ಕಳೆದಿದೆ, ಲೋಕೋಪಯೋಗಿ ಇಲಾಖೆ ಕ್ವಾರ್ಟರ್ಸ್​​​​​ ಟ್ರಸ್​​ನ ಒಂದು ಮನೆಯಲ್ಲಿ ಸರ್ಕಾರಿ ಶಾಲೆಯನ್ನು ನಡೆಸಲಾಗುತ್ತಿದೆ, ಉಸಿರುಗಟ್ಟಿದ ವಾತಾವರಣದಲ್ಲಿ ನಿತ್ಯ ಪಾಠ (education) ಕಲಿಯುತ್ತಿರುವ 33 ಸರ್ಕಾರಿ ಶಾಲೆಯ ಮಕ್ಕಳ ದುಸ್ಥಿತಿ ಹೇಗಿದೆ ಇಲ್ಲಿದೆ ಒಂದು ವರದಿ. ಯಾವ ದಿಕ್ಕಿನಿಂದಲೂ ಶಾಲೆಯಂತೆ ( school) ಗೋಚರವಾಗದೇ ಇರುವ ಸರ್ಕಾರಿ ಶಾಲೆ, ಲೋಕೋಪಯೋಗಿ ಇಲಾಖೆಯ ವಸತಿ ನಿಲಯದ ಮನೆಯಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಶಾಲೆ, ಒಳಗೆ ಕೂರಲು ಸ್ಥಳವಿಲ್ಲದೆ ಮಕ್ಕಳು ಒಳಗೆ ಕೂತು ತಮ್ಮ ಬ್ಯಾಗ್​ಗಳನ್ನು ಹೊರಗಿಟ್ಟಿರುವ ಮಕ್ಕಳು, ಇಂಥಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ನಗರದ (kolar city) ಗಂಗಮ್ಮನಪಾಳ್ಯ ಸರ್ಕಾರಿ ಶಾಲೆಯಲ್ಲಿ.

ಹೌದು ಕೋಲಾರ ನಗರದ ಹೃದಯಭಾಗದಲ್ಲಿರುವ ಗಂಗಮ್ಮನ ಪಾಳ್ಯದ ಪ್ರಾಥಮಿಕ ಶಾಲೆಯಲ್ಲಿ 33 ಜನ ಮಕ್ಕಳಿದ್ದಾರೆ. ಶಾಲೆಗಿದ್ದ ಕಟ್ಟಡ ರಸ್ತೆ ಅಗಲೀಕರಣದ ವೇಳೆ ಕಟ್ಟಡದ ಕಾಂಪೌಂಡ್​ ತೆರವು ಮಾಡಲಾಯಿತು, ನಂತರ ಕಟ್ಟಡವೂ ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು, ಪರಿಣಾಮ ಬೇರೆ ದಾರಿ ಇಲ್ಲದೆ ಜಿಲ್ಲಾಧಿಕಾರಿಗಳ ಮೌಕಿಕ ಆದೇಶದ ಮೇರೆಗೆ ಅಲ್ಲೇ ಪಕ್ಕದಲ್ಲೇ ಇದ್ದ ಪಿಡಬ್ಯುಡಿ ಇಲಾಖೆಯ ಕ್ವಾರ್ಟರ್ಸ್​​​​​​ನಲ್ಲಿ ಖಾಲಿ ಇದ್ದ ಒಂದು ಮನೆಯಲ್ಲಿ ತಾತ್ಕಾಲಿಕವಾಗಿ ಶಾಲೆಯನ್ನು ಸ್ಥಳಾಂತರ ಮಾಡಲಾಗಿದೆ.

ಆದರೆ ನಾಲ್ಕು ವರ್ಷಗಳಿಂದ ಈಗಲೂ ಅದೇ ಕೊಠಡಿಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಮೊದಲು 70 ಜನರಿದ್ದ ಮಕ್ಕಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಿಂದ ಸರಿಯಾದ ವ್ಯವಸ್ಥೆಗಳಿಲ್ಲದ ಕಾರಣ ಅರ್ಧಕ್ಕರ್ಧ ಮಕ್ಕಳು ಶಾಲೆ ಬಿಟ್ಟು ಹೋಗಿದ್ದಾರೆ. ಇನ್ನು ಈಗಿರುವ ಮಕ್ಕಳೂ ಕೂಡಾ ಪಿಡಬ್ಯುಡಿ ಕ್ವಾರ್ಟರ್ಸ್​​​​​ ನ ಒಂದು ಮನೆಯಲ್ಲಿ ಶಾಲೆ ನಡೆಸಲಾಗುತ್ತಿದೆ.

ಇಬ್ಬರು ಶಿಕ್ಷಕರು, 33 ಜನ ಮಕ್ಕಳು, ಇಬ್ಬರು ಬಿಸಿಯೂಟದ ಸಿಬ್ಬಂದಿ, ಮಕ್ಕಳಿಗೆ ಬಿಸಿಯೂಟವನ್ನೂ ಇಲ್ಲೇ ಮಾಡಬೇಕು,ಇಷ್ಟೆಲ್ಲವೂ ಒಂದೇ ಒಂದು ಮನೆಯಲ್ಲಿ ನಡೆಯುತ್ತದೆ ಅಂದ್ರೆ ಅಲ್ಲಿನ ಪರಿಸ್ಥಿತಿ ಹೇಗಿರಬೇಡ ಹೇಳಿ? ನಿಜಕ್ಕೂ ಅಲ್ಲಿ ಮಕ್ಕಳಿಗೂ ಶಿಕ್ಷಕರಿಗೂ ಅಕ್ಷರಶ: ಉಸಿರುಗಟ್ಟಿದ ವಾತಾವರಣವಿದೆ. ಪಾಪ ಮಕ್ಕಳು ಬೇರೆ ದಾರಿ ಇಲ್ಲದೆ ಪಾಠ ಕಲಿಯುವ ಸ್ಥಿತಿ ಇದೆ.

Also Read: ಬರ ಸಂಕಷ್ಟದಲ್ಲೂ ರೈತನ ಸಾಮಾಜಿಕ ಕಳಕಳಿ: ಅಂಗನವಾಡಿ, ರಸ್ತೆ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಬಡ ರೈತ!

ಇನ್ನು ಸದ್ಯ ನಡೆಯುತ್ತಿರುವ ಲೋಕೋಪಯೋಗಿ ಇಲಾಖೆಯ ಮನೆಯಲ್ಲಿ ನಡೆಯುತ್ತಿರುವ ಶಾಲೆ ಒಂದು ಸಂಸಾರ ವಾಸ ಮಾಡಬಹುದು. ಆದರೆ ಬರೊಬ್ಬರಿ 40 ಜನ ಹೇಗೆ ಅಲ್ಲಿ ದಿನಪೂರ್ತಿ ಕಳೆಯಲು ಸಾಧ್ಯ ಅನ್ನೋದು ಈ ಕಟ್ಟಡಕ್ಕೆ ಮಕ್ಕಳನ್ನು ಕಳಿಸಿದ ಅಧಿಕಾರಿಗಳೇ ಹೇಳಬೇಕು. ನಾಲ್ಕು ಜನರ ಒಂದು ಕುಟುಂಬ ವಾಸ ಮಾಡಲು ಒಂದು ಡಬ್ಬಲ್ ಬೆಡ್​ ರೂಂ ಮನೆ ಬೇಕು. ಅಂಥಾ ಪರಿಸ್ಥಿತಿಯಲ್ಲಿ ಪಾಪ ಇಷ್ಟೊಂದು ಮಕ್ಕಳು ಮತ್ತು ಶಿಕ್ಷಕರು, ಸಿಬ್ಬಂದಿ ಹೇಗಿರಲು ಸಾಧ್ಯ ಅನ್ನೋದನ್ನು ಊಹೆ ಮಾಡಿಕೊಳ್ಳೋದು ಕಷ್ಟ. ಅದಕ್ಕಾಗಿಯೇ ಮಕ್ಕಳು ಒಳಗೆ ಕುಳಿತುಕೊಂಡರೆ ತಮ್ಮ ಬ್ಯಾಗ್​ಗಳನ್ನು ಮನೆಯ ಹೊರಗಡೆ ಜೋಡಿಸಿರುತ್ತಾರೆ. ಇನ್ನು ಈ ಮನೆಯಲ್ಲಿ ಇದ್ದ ಒಂದು ಅಡುಗೆಮನೆ ಮತ್ತು ಶೌಚಾಲಯವನ್ನು ಬಿಸಿಯೂಟ ಸಿಬ್ಬಂದಿಗಳು ಬಳಸಿಕೊಂಡಿದ್ದಾರೆ.

ಹಾಗಾಗಿ ಮಕ್ಕಳು ಶಾಲೆಗೆ ಬಂದಮೇಲೆ ಶೌಚಾಲಯ ಅನ್ನೋದನ್ನ ಮರೆತುಬಿಡಬೇಕು. ಇಷ್ಟೊಂದು ಸಮಸ್ಯೆಗಳ ನಡುವೆ ಕೊನೆ ಪಕ್ಷ ಆ ಮನೆಯಾದ್ರು ಸರಿಯಾಗಿ ಇದ್ಯಾ ಅಂದ್ರೆ ಅದು ಇಲ್ಲಾ, ಆ ಮನೆಯ ಮೇಲ್ಚಾವಣಿ ಕೂಡಾ ಕುಸಿದು ಬೀಳುವ ಸ್ಥಿತಿ ಇದ್ದು ಮಕ್ಕಳು ಜೀವ ಭಯದಲ್ಲೇ ಪಾಠ ಕಲಿಯುವ ಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಪಾಪಾ ಬಡಮಕ್ಕಳು ಇಂಥ ಶಾಲೆಗೆ ಬರೋದಾದ್ರು ಹೇಗೆ ಅಂಥ ಕೇಳಿದ್ರೆ ನಮ್ಮ ಗುರುಗಳು ಪಾಠ ಚೆನ್ನಾಗಿ ಹೇಳಿಕೊಡ್ತಾರೆ ಅಂಥ ಶಾಲೆಗ ಬರ್ತೀವಿ, ನಮಗೆ ಶಾಲೆಗೆ ಬರೋದಕ್ಕೆ ಬೇಜಾರಾಗುತ್ತೆ ಸರ್ ಅನ್ನೋದು ಮಕ್ಕಳ ಮಾತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Mon, 4 December 23