AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ಸ್ಕೂಟಿ ನಂಬರ್ ಬಾಂಬ್ ಸಿಡಿಸಿದ ಮುಬಾರಕ್

ಕೋಲಾರ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಎಂ ಮುಬಾರಕ್ ವಿರುದ್ದ ಕೋಲಾರ ಕಾಂಗ್ರೆಸ್ ಶಾಸಕ​ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದರು. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಬಾರಕ್, ‘ಸ್ಕೂಟಿ ನಂಬರ್​ಗಳ ಬಗ್ಗೆ ನಾನು ಹೇಳುತ್ತೇನೆ. ಮುಳಬಾಗಿಲು ಬೀದಿ ಬೀದಿಗಳಲ್ಲಿ ಇದರ ಬಗ್ಗೆ ಜನರು ಮಾತನಾಡುತ್ತಾರೆ ಎನ್ನುವ ಮೂಲಕ ಹೊಸ ಬಾಂಬ್​ ಸಿಡಿಸಿದ್ದಾರೆ.

ಕೈ ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ಸ್ಕೂಟಿ ನಂಬರ್ ಬಾಂಬ್ ಸಿಡಿಸಿದ ಮುಬಾರಕ್
ಮುಬಾರಕ್, ಕೈ ಶಾಸಕ ಕೊತ್ತೂರು ಮಂಜುನಾಥ್
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Sep 03, 2024 | 6:16 PM

Share

ಕೋಲಾರ, ಸೆ.03: ಕೊತ್ತೂರು ಮಂಜುನಾಥ್(Kothur Manjunath) 2013 ರಿಂದ 2018 ರವರೆಗೂ ಮುಳಬಾಗಿಲು ಕ್ಷೇತ್ರದಲ್ಲಿ ಶಾಸಕರಾಗಿದ್ದ ವೇಳೆ ಅಸಹಜ ಸಾವುಗಳ ಬಗ್ಗೆ ತನಿಖೆ ಆಗಬೇಕು, ಸಾವುಗಳ ಬಗ್ಗೆ ಮರು ತನಿಖೆಗೆ ಅಗತ್ಯಬಿದ್ದರೆ ದೂರು ನೀಡುತ್ತೇನೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ಕೋಲಾರ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಎಂ ಮುಬಾರಕ್ ಗಂಭೀರ ಆರೋಪ ಮಾಡಿದ್ದಾರೆ.

ಸ್ಕೂಟಿ ನಂಬರ್ ಬಾಂಬ್ ಸಿಡಿಸಿದ ಮುಬಾರಕ್

ಮುಬಾರಕ್ ಒಬ್ಬ ತಾಲಿಬಾನ್ ಏಜೆಂಟ್, 50 ಕುಟುಂಬ ಹಾಳು ಮಾಡಿರುವ ವ್ಯಕ್ತಿ ಎಂದು ಮಂಜುನಾಥ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಬಾರಕ್, ‘ಸ್ಕೂಟಿ ನಂಬರ್​ಗಳ ಬಗ್ಗೆಯೂ ನಾನೂ ಹೇಳುತ್ತೇನೆ. ಮುಳಬಾಗಿಲು ಬೀದಿ ಬೀದಿಗಳಲ್ಲಿ ಇದರ ಬಗ್ಗೆ ಜನರು ಮಾತನಾಡುತ್ತಾರೆ. ಕೆಳ ಮಟ್ಟದಲ್ಲಿ ಇಳಿದು ಮಾತನಾಡಿದರೆ ಮುಂದಿನ ದಿನಗಳಲ್ಲಿ ಸ್ಕೂಟಿ ನಂಬರ್ ಸಹಿತ ಹೇಳುವೆ ಎಂದರು.

ಇದನ್ನೂ ಓದಿ:ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ಗೆ ಸಾರ್ವಜನಿಕ ವರ್ತನೆ ಗೊತ್ತಿಲ್ಲ, ನಾಲಗೆ ಮೇಲೆ ಹಿಡಿತವಿಲ್ಲ!

ಇದೇ ವೇಳೆ ‘ನನ್ನ ಮೇಲೆ 420 ಕೇಸ್ ಇದ್ದು, 13 ತಿಂಗಳ‌ ಹಿಂದೆ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ನಾನು ಮುಕ್ತವಾಗಿದ್ದಾನೆ, ಎಲ್ಲೂ ಸಹ ಹೋಗಿ ತಡೆಯಾಜ್ಞೆ ತೆಗೆದುಕೊಂಡು ಬಂದಿಲ್ಲ. ಕೋಲಾರದ ಕೊತ್ತೂರು ಮಂಜುನಾಥ್ ಅವರೇ ನಿಮ್ಮ ಮೇಲೆ ಎಷ್ಟು 420 ಪ್ರಕರಣವಿದೆ. ನಕಲಿ ಜಾತಿ ಸರ್ಟಿಫಿಕೇಟ್ ಸಲ್ಲಿಸಿರುವ ಬಗ್ಗೆ ಸರ್ಕಾರಿ ಅಧಿಕಾರಿಗಳು 420 ಪ್ರಕರಣ ನಿಮ್ಮ ಮೇಲೆ ಮಾಡಿದ್ದು ಸೇರಿ ನನಗಿಂತ ಹೆಚ್ಚು ಪ್ರಕರಣಗಳು ನಿಮ್ಮ ಮೇಲೆ ದಾಖಲಾಗಿದೆ. ನೀವು ಯಾಕೆ‌ ಹೋಗಿ ತಡೆಯಾಜ್ಞೆ ತೆಗೆದುಕೊಂಡಿದ್ದಾರಾ?.

ನಾನು ಕಿತ್ತು ಹೋಗಿರುವವನೇ ಹೌದು, 420 ಪ್ರಕರಣ ಇದೆ. ನಾನು ಚಿಕ್ಕವನು ನಿಮ್ಮಗಿಂತ, ನೀವು ಎರಡು ಬಾರಿ ಶಾಸಕರಾಗಿ ನಕಲಿ‌ ಜಾತಿ ಸರ್ಟಿಫಿಕೇಟ್ ಸಲ್ಲಿಸಿ ಸಾವಿರಾರು ಜನರಿಗೆ ಅನ್ಯಾಯ ಮಾಡಿದ್ದೀರಿ. ದೇಶದ ಸರ್ವೋಚ್ಚ ನ್ಯಾಯಾಲಯ ನಿಮ್ಮನ್ನು 420 ಎಂದು ಸಾಬೀತು ಪಡಿಸಿರುವುದು. ಸುಮ್ಮನೆ ಓಡಾಡಿಕೊಂಡು‌ ಇರದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಮಾತುಗಳು ಆಡುವಾಗ ಗೌರವಯುತವಾಗಿ‌ ಮಾತನಾಡಬೇಕು. ನನ್ನ ತಾಲಿಬಾನ್ ಏಜೆಂಟ್ ಎಂಬ‌ ಹೇಳಿಕೆಗೆ ಮಾನನಷ್ಟ ಪ್ರಕರಣ ದಾಖಲಾಗಿದೆ. ಅದಕ್ಕೆ ಅವರು ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Tue, 3 September 24