AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆ ಬಟ್ಟೆಯಲ್ಲೇ ಹೊಸ ಸೂರು ಕಟ್ಟಿಕೊಂಡ ಅಲೆಮಾರಿಗಳು!

ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು. ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್​ಡೌನ್​ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್​ಡೌನ್​ನಿಂದ ಅಲ್ಲೇ […]

ಹಳೆ ಬಟ್ಟೆಯಲ್ಲೇ ಹೊಸ ಸೂರು ಕಟ್ಟಿಕೊಂಡ ಅಲೆಮಾರಿಗಳು!
ಆಯೇಷಾ ಬಾನು
ಆಯೇಷಾ ಬಾನು|

Updated on:Jun 11, 2020 | 4:09 PM

Share

ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು.

ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್​ಡೌನ್​ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್​ಡೌನ್​ನಿಂದ ಅಲ್ಲೇ ಉಳಿಯುವಂತಾಯ್ತು. ಇನ್ನು ಜೀವನೋಪಾಯದ ದಾರಿಯೇ ಮುಚ್ಚಿಹೋದ ಮೇಲೆ ಮುಂದೇನು ಎಂಬ ಯೋಚನೆ ಇವರಿಗೂ ಕಾಡಿತ್ತು.

ಅಲೆಮಾರಿಗಳ ನೆರವಿಗೆ ಬಂದ ಸ್ಥಳೀಯರು, ಸಂಘ ಸಂಸ್ಥೆಗಳು ಲಾಕ್​ಡೌನ್​ನಿಂದ ಎದುರಾದ ಸಮಸ್ಯೆಯಿಂದ ಅಲೆಮಾರಿಗಳು ಕೊಂಚ ವಿಚಲಿತರಾದರೂ ಧೃತಿಗೆಡದೆ ಇದ್ದುದ್ದರಲ್ಲಿ ಬದುಕು ಸಾಗಿಸೋಣ ಎಂಬ ನಿರ್ಧಾರಕ್ಕೆ ಮುಂದಾದರು. ತಲಗುಂದ ಗ್ರಾಮದವರ ನೆರವಿನಿಂದ ತಮ್ಮ ಬಳಿ ಇದ್ದ ಹಳೇ ಬಟ್ಟೆಗಳಿಂದಲೇ ಸುಂದರ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡರು. ಜೊತೆಗೆ ಕಳೆದ 2 ತಿಂಗಳಿಂದ ಕೆಲವು ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಹೊಟ್ಟೆ ತುಂಬಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೆ ಬರೀ ಅಷ್ಟಕ್ಕೇ ಸೀಮಿತವಾಗದೆ ಸ್ವಾವಲಂಬಿಗಳಾದ ಇವರು ಅವಕಾಶ ಸಿಕ್ಕಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಕೂಡ ಮಾಡುತ್ತಿದ್ದಾರೆ .

ಒಟ್ನಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿ ತಮ್ಮ ತಮ್ಮ ಊರುಗಳತ್ತ ಮುಖಮಾಡಿ ಹೊರಟ ಕೂಲಿ ಕಾರ್ಮಿಕರಿಗೆ ಮತ್ತು ಇತರರಿಗೆ ಈ ಅಲೆಮಾರಿಗಳು ಒಂದು ರೀತಿಯ ಸ್ಫೂರ್ತಿಯಾಗಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಎಂಬ ಡಾ.ವಿಷ್ಣುವರ್ಧನ್​ ಅವರ ಸಿನಿಮಾದ ಹಾಡಿನ ಸಾಲುಗಳಂತೆ ಹಳೆ ಬಟ್ಟೆಯಿಂದ ಮಾಡಿದ ಸೂರು ಸಾಕು ಹಾಯಾಗಿರೋಕೆ ಎಂದು ಈ ಅಲೆಮಾರಿಗಳು ಎಲ್ಲರಿಗೆ ತೋರಿಸಿಕೊಟ್ಟಿದ್ದಾರೆ.

Published On - 11:29 am, Thu, 11 June 20

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ