ಗಂಗಾವತಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕುಸಿದು ಬಿದ್ದು ಯುವಕ ಸಾವು, ಡಿಜೆ ಸೌಂಡ್​ಗೆ ಹೃದಯಾಘಾತವಾಯ್ತೆ?

21ನೇ ದಿನದಂದ ಗಣೇಶ ವಿರ್ಜಸನೆ ಮೆರವಣಿಗೆ ವೇಳೆ ಡಾನ್ಸ್ ಮಾಡುತ್ತಿದ್ದ ಯುವಕನೋರ್ವ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಡಿಜೆ ಸೌಂಡ್​ನಿಂದ ಯುವಕನಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ದುರ್ಘಟನೆ ನಡೆಯುತ್ತಿದ್ದಂತೆಯೇ ಯುವಕರು ಸ್ವಯಂಪ್ರೇರಿತವಾಗಿ ಡಿಜೆಯನ್ನು ಅರ್ಧಕ್ಕೆ ಬಂದ್ ಮಾಡಿದ್ದಾರೆ.

ಗಂಗಾವತಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕುಸಿದು ಬಿದ್ದು ಯುವಕ ಸಾವು, ಡಿಜೆ ಸೌಂಡ್​ಗೆ ಹೃದಯಾಘಾತವಾಯ್ತೆ?
ಸುದೀಪ್ ಸಜ್ಜನ್, ಮೃತ ಯುವಕ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2023 | 1:05 PM

ಕೊಪ್ಪಳ, (ಅಕ್ಟೋಬರ್ 10): ಗಣೇಶ ವಿಸರ್ಜನೆ ಮೆರವಣಿಗೆ (ganesha procession) ವೇಳೆ ಡಾನ್ಸ್​ ಮಾಡುತ್ತಿದ್ದ ಯುವಕ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಸುದೀಪ್ ಸಜ್ಜನ್ (30) ಮೃತ ಯುವಕ. ಪ್ರಶಾಂತ ನಗರದ 21 ದಿನದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ದುರ್ಘಟನೆ ನಡೆದಿದೆ. ಮೆರವಣಿಯಲ್ಲಿ ಬೆಳ್ಳಂಬೆಳಗ್ಗೆ ಯುವಕರು ಡಿಜೆ ಸೌಂಡ್​ಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಈ ವೇಳೆ ಸುದೀಪ್ ಸಜ್ಜನ್​ಗೆ ಹೃದಯಾಘಾತವಾಗಿದೆ (heart attack) ಎಂದು ಹೇಳಲಾಗುತ್ತಿದೆ.

ಡಿಜೆ ವೇಳೆ ಡಿಜೆ ಸೌಂಡ್‍ಗೆ ಸುದೀಪ್ ಸಜ್ಜನ್ ಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಘಟನೆ ನಡೆಯುತ್ತಿದ್ದಂತೆಯೇ ಯುವಕರು ಸ್ವಯಂಪ್ರೇರಿತವಾಗಿ ಡಿಜೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನು ಗಂಗಾವತಿ ನಗರ ಠಾಣೆಯ ಪೊಲೀಸರು, ಡಿಜೆಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಯಚೂರು: ಡಿಜೆ ಸೌಂಡಿಗೆ 19 ದಿನದ ಹಸುಗೂಸು ಸಾವನ್ನಪ್ಪಿತೇ? ವೈದ್ಯರು ಹೇಳುವುದೇನು? ಇಲ್ಲಿದೆ ವಿವರ

ಮೊನ್ನೆ ರಾಯಚೂರಿನಲ್ಲಿ ಡಿಜೆ ಸೌಂಡ್​ಗೆ ಮಲಗಿದ್ದಲ್ಲೇ 19 ದಿನದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿತ್ತು. ರಾಯಚೂರಿನ ಮಡ್ಡಿಪೇಟೆಯಲ್ಲಿ ಸೆಪ್ಟೆಂಬರ್ 27ರಂದು ಸುರೇಶ್ ಬಾಬು, ಸುಮತಿ ದಂಪತಿಯ ಹೆಣ್ಣು ಮಗು ಮೃತಪಟ್ಟಿತ್ತು, ಅತಿಯಾದ ಡಿಜೆ ಸೌಂಡ್​ನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದರು.

ಈ ಕುರಿತಾಗಿ ಟಿವಿ9ಗೆ ಇಎನ್​ಟಿ ತಜ್ಞ ವೈದ್ಯ ಡಾ.ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಅತಿಯಾದ ಡಿಜೆ ಸೌಂಡ್​ನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೃದಯದ ಬಡಿತ ಏರುಪೇರಾಗುತ್ತೆ, ಖಿನ್ನತೆಯಂತಹ ಸಮಸ್ಯೆ ಆಗಬಹುದು. ಮಗು ಮಲಗಿದ್ದ ವೇಳೆ ಸಡನ್​ ಆಗಿ ಅತಿಯಾದ ಶಬ್ದ ಕೇಳಿಬಂದರೆ ಆಘಾತವಾಗಬಹುದು ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ