AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಎಕರೆ ಭೂಮಿಯಿಂದ ಲಕ್ಷಾಂತರ ರೂ. ಲಾಭ; ವಿಕಲಚೇತನ ಕೃಷಿಕನ ಸಾಧನೆ!

ಕೊಪ್ಪಳದ ಹಿರೇಅರಳಿಹಳ್ಳಿ ಗ್ರಾಮದ ರೈತರೊಬ್ಬರು ಒಂದು ಕಾಲು ಕಳೆದುಕೊಂಡರೂ ಕೃಷಿಯಲ್ಲಿ ಲಕ್ಷಾಂತರ ರೂ. ಗಳಿಸಿದ್ದಾರೆ. 12 ಎಕರೆಯಲ್ಲಿ ಟೊಮೇಟೊ ಸೇರಿ ತರಕಾರಿ ಹಾಗೂ ಬೀಜೋತ್ಪಾದನೆ ಮಾಡಿ, 9 ಲಕ್ಷ ರೂ. ಆದಾಯ ಗಳಿಸಿದ್ದಾರೆ. ತಮ್ಮ ದೈಹಿಕ ಅಸಮರ್ಥತೆಯನ್ನು ಮೀರಿ ನಿಂತು ಸಾಧನೆ ಮಾಡಿದ್ದಾರೆ.

12 ಎಕರೆ ಭೂಮಿಯಿಂದ ಲಕ್ಷಾಂತರ ರೂ. ಲಾಭ; ವಿಕಲಚೇತನ ಕೃಷಿಕನ ಸಾಧನೆ!
12 ಎಕರೆ ಭೂಮಿಯಲ್ಲಿ ಲಕ್ಷಾಂತರ ಲಾಭ; ವಿಕಲಚೇತನ ಕೃಷಿಕನ ಸಾಧನೆ!
ಶಿವಕುಮಾರ್ ಪತ್ತಾರ್
| Edited By: |

Updated on: Dec 24, 2025 | 11:24 AM

Share

ಕೊಪ್ಪಳ, ಡಿಸೆಂಬರ್ 24: ಇಂದಿನ ಕಾಲದಲ್ಲಿ ಕೈಕಾಲು ನೆಟ್ಟಗಿದ್ದರೂ ಕೆಲವರು ದುಡಿದು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಹೀಗಿರುವಾಗ ಕೊಪ್ಪಳದ (Koppal) ಓರ್ವ ಕೃಷಿಕ ಒಂದು ಕಾಲು ಕಳೆದುಕೊಂಡಿದ್ದರೂ ಕುಗ್ಗದೆ, 12 ಎಕರೆ ಭೂಮಿಯನ್ನು ಉತ್ತಿ ಬಿತ್ತಿ ಲಕ್ಷಾಂತರ ರೂ. ಗಳಿಸಿದ್ದಾರೆ. ಟೊಮೇಟೊ, ಬದನೆ ಸೇರಿ ಹಲವು ತರಕಾರಿಗಳ ಜೊತೆಗೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಅವರು, ಯುವ ಕೃಷಿಕರಿಗೆ ಸ್ಫೂರ್ತಿಯಾಗಿದ್ದಾರೆ.

ಕೃತಕ ಕಾಲು ಅಳವಡಿಸಿಕೊಂಡೇ ಕೃಷಿ ಚಟುವಟಿಕೆ

ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದ ರಾಮಣ್ಣ ಸಂಕಷ್ಟವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡ ಅಪರೂಪದ ಕೃಷಿಕ. 12 ವರ್ಷಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ, ಬದುಕಿನ ಓಟದಲ್ಲಿ ಹಿಂದೆ ಬೀಳದೆ ಸಾಧನೆಗೈದಿದ್ದಾರೆ. ಸ್ಥಳೀಯವಾಗಿ ಸಿಗುವ ಕೃತಕ ಕಾಲು ಅಳವಡಿಸಿಕೊಂಡು, ತಮ್ಮ ಜಮೀನಿನಲ್ಲಿ ಯಂತ್ರೋಪಕರಣಗಳ ನೆರವಿನಿಂದ ಕೃಷಿ ಮಾಡುತ್ತಿರುವ ರಾಮಣ್ಣ, ದೈಹಿಕ ಅಸಮರ್ಥತೆಯನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಕೇವಲ ಟೊಮೇಟೋ ಬೀಜೋತ್ಪಾದನೆಯಿಂದ 9 ಲಕ್ಷ ರೂಪಾಯಿ ಆದಾಯ

ಟೊಮೇಟೊ, ಬದನೆ, ಮೆಣಸಿನಕಾಯಿ, ಸೌತೆ ಸೇರಿದಂತೆ ತರಕಾರಿ ಬೆಳೆಗಳ ಜೊತೆಗೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಅವರು, ಇದೇ ವರ್ಷದಲ್ಲಿ ಕೇವಲ ಟೊಮೇಟೊ ಬೀಜೋತ್ಪಾದನೆಯಿಂದ ಸುಮಾರು 9 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಬೆಳಗಿನ ಜಾವದಿಂದಲೇ ಹೊಲಕ್ಕೆ ಕಾಲಿಡುವ ರಾಮಣ್ಣ, ಡಿಸೇಲ್ ಎಂಜಿನ್‌ಗೆ ಜೋಡಿಸಿದ ಯಂತ್ರಗಳ ಮೂಲಕ ಅಂತರಬೇಸಾಯ, ಕಳೆ ನಿಯಂತ್ರಣ, ನೀರು ಹರಿಸುವುದು, ಔಷಧ ಸಿಂಪಡಣೆ ಸೇರಿದಂತೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಸ್ವತಃ ನಿರ್ವಹಿಸುತ್ತಾರೆ.

ವ್ಯಂಗ್ಯವಾಡಿದವರ ಮುಂದೆಯೇ ಸಾಧಿಸಿ ತೋರಿಸಿದ ರಾಮಣ್ಣ

ಭೂಮಿತಾಯಿ ಮೇಲೆ ನಂಬಿಕೆ ಇದ್ದರೆ ಆಕೆ ನಮ್ಮ ಕೈಹಿಡಿಯುತ್ತದೆ ಎನ್ನುವ ಅವರು, ಕೃಷಿಯಲ್ಲಿಯೇ ಸಂತಸ ಕಾಣುತ್ತಾರೆ. ಕಾಲು ಕಳೆದುಕೊಂಡ ಬಳಿಕವೂ ದುಡಿಮೆಯಿಂದ ಹಿಂದೆ ಸರಿಯದ ರಾಮಣ್ಣರನ್ನು ಕೆಲವರು ವ್ಯಂಗ್ಯವಾಡಿ ನಗಿದ ಘಟನೆಗಳೂ ಇವೆ. ಆದರೆ ಅದೇ ವ್ಯಂಗ್ಯ ಇಂದು ಅವರಿಗೆ ಪ್ರೇರಣೆಯಾಗಿದೆ. ಪತ್ನಿಯ ಸಂಪೂರ್ಣ ಸಹಕಾರ ಹಾಗೂ ತಮ್ಮ ಅಚಲ ಪರಿಶ್ರಮದಿಂದ ರಾಮಣ್ಣ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದು, ಸಮಾಜವೂ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್
ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್
ಚಿತ್ರಮಂದಿರಗಳಲ್ಲಿ 'ಕರಾವಳಿ' ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಖುಷ್
ಚಿತ್ರಮಂದಿರಗಳಲ್ಲಿ 'ಕರಾವಳಿ' ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಖುಷ್
ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026 ಮಂಡನೆ
ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026 ಮಂಡನೆ
ಡಿಕೆಶಿ ಸಚಿವ ಸಂಪುಟದಲ್ಲಿ 12ರಿಂದ 15  ಹೊಸ ಮುಖಗಳಿಗೆ ಮಣೆ?
ಡಿಕೆಶಿ ಸಚಿವ ಸಂಪುಟದಲ್ಲಿ 12ರಿಂದ 15  ಹೊಸ ಮುಖಗಳಿಗೆ ಮಣೆ?
ಬಾಯ್ಲರ್ ಟ್ಯಾಂಕ್ ಮಗುಚಿ ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಬಂದ್
ಬಾಯ್ಲರ್ ಟ್ಯಾಂಕ್ ಮಗುಚಿ ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಬಂದ್
ಭವ್ಯಾ ಗೌಡಗೆ ತಂಗಿ ಎಂದು ಕರೆದು ಕಾಲೆಳೆದ ಹುಲಿ ಕಾರ್ತಿಕ್
ಭವ್ಯಾ ಗೌಡಗೆ ತಂಗಿ ಎಂದು ಕರೆದು ಕಾಲೆಳೆದ ಹುಲಿ ಕಾರ್ತಿಕ್
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!
ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!
ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ!
ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ!
ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ