ಇದು ಥೈಲ್ಯಾಂಡ್ ಟು ಕೊಪ್ಪಳ ಗಾಂಜಾ ಸ್ಟೋರಿ: ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದವರ ಬಂಧನ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪೊಲೀಸರು ಭಾರಿ ಪ್ರಮಾಣದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಥೈಲ್ಯಾಂಡ್​ನಿಂದ ತಂದು ಮಾರಾಟ ಮಾಡುತ್ತಿದ್ದ 8 ಜನರನ್ನು ಬಂಧಿಸಿದ್ದು, 1806 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ 18 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ.

ಇದು ಥೈಲ್ಯಾಂಡ್ ಟು ಕೊಪ್ಪಳ ಗಾಂಜಾ ಸ್ಟೋರಿ: ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದವರ ಬಂಧನ
ವಶಕ್ಕೆ ಪಡೆದ ಗಾಂಜಾ
Edited By:

Updated on: May 28, 2025 | 8:28 PM

ಕೊಪ್ಪಳ, ಮೇ 28: ಥೈಲ್ಯಾಂಡ್​ನಿಂದ (Thailand) ಅಕ್ರಮವಾಗಿ ಗಾಂಜಾ (ganja) ತಂದು ಮಾರಾಟ ಮಾಡುತ್ತಿದ್ದ 8 ಜನರನ್ನು  ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ಪೊಲೀಸರಿಂದ ಸೌಜೇಶ್, ಸಲೀಂ, ಬಿ.ದುರ್ಗಾ, ಬಾದ್​ ಷಾ, ಮದನ್, ಸೂರ್ಯ ಪ್ರತಾಪ್ ರೆಡ್ಡಿ, ಅಮೀದ್ ಮತ್ತು ಮಣಿಕಂಠ ಅನ್ನು ಬಂಧಿಸಿದ್ದು, ಇದರಲ್ಲಿ ಮೂವರು ಕೇರಳದವರು. 18 ಲಕ್ಷ ಮೌಲ್ಯದ 1806 ಗ್ರಾಂ ಹೈಡ್ರೋ ಗಾಂಜಾ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಿಷ್ಟು

ಈ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಾರ್ಟಿಗಾಗಿ ಥೈಲ್ಯಾಂಡ್​​ನಿಂದ ಗಂಗಾವತಿಗೆ ಸಲೀಂ ಎರಡು ಕಾರ್​ಗಳಲ್ಲಿ ಅಕ್ರಮವಾಗಿ ಗಾಂಜಾ ತಂದಿದ್ದ. ಗಂಗಾವತಿ ನಗರದ ಸರ್ಕಾರಿ ಐಟಿಐ ಕಾಲೇಜ್ ಬಳಿ ಹೈಡ್ರೋ ಗಾಂಜಾ ಪತ್ತೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 3 ಕೋಟಿ ರೂ. ಮೌಲ್ಯದ ಡ್ರಗ್ಸ್​, ಗಾಂಜಾ ಜಪ್ತಿ

ಇದನ್ನೂ ಓದಿ
ಬೀದರ್​ನ ಐತಿಹಾಸಿಕ ಭಾತಂಬ್ರಾ ಕೋಟೆ ಜೀರ್ಣೋದ್ಧಾರ: ಶ್ಲಾಘನೆ
ಬರದ ನಾಡು ಬೀದರ್​ನಲ್ಲಿ ಶ್ರೀಗಂಧದ ಘಮ: ಹೇರಳವಾಗಿ ಬೆಳೆದು ನಿಂತ ಮರಗಳು
ಈರುಳ್ಳಿ ಬೀಜ ಮಾರಾಟ ಮಾಡಿ ಕೋಟ್ಯಂತರ ರೂ ಆದಾಯ ಗಳಿಸಿದ ಬೀದರ್​ನ ರೈತ
ನಾನಾ ಕಾರಣಗಳಿಂದ ರಜೆಗೆ ಬಂದಿದ್ದ ಕರ್ನಾಟಕದ ಯೋಧರು ದೇಶ ಸೇವೆಗೆ ವಾಪಸ್

ಎಂಟು ಜನರ ಪೈಕಿ ಸೌಜೇಶ್, ಸಲೀಂ ಹಾಗೂ ಬಾದ್ ಷಾ ಕೇರಳದ ಮೂಲದವರು. ಮದನ್ ಬಿಇ ಓದಿದ್ದು, ದುರ್ಗಾ ಪ್ರಸಾದ್ ಬಿಕಾಂ‌ ಓದಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣಕ್ಕೂ ಗಾಂಜಾ ಪ್ರಕರಣಕ್ಕೂ ಲಿಂಕ್ ಇಲ್ಲ. ಗಂಗಾವತಿಗೆ ಏಕೆ ಬಂದರೂ, ಇಲ್ಲಿಂದ ಎಲ್ಲಿ ಹೋಗುತ್ತಿದ್ದರು ಎಂಬ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಾರೆ.

ಬೀದರ್​ನಲ್ಲಿ 183 ಕೆಜೆ 285 ಗ್ರಾಂನಷ್ಟು ಗಾಂಜಾ ನಾಶ

ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರು ಗ್ರಾಮದಲ್ಲಿ 183 ಕೆಜಿ 285 ಗ್ರಾಂ ತೂಕದ ಅಕ್ರಮ ಗಾಂಜಾ ಜಪ್ತಿ ಮಾಡಲಾಗಿದೆ. ಸುಮಾರು 53 ಲಕ್ಷ 30 ಸಾವಿರ 329 ರೂಪಾಯಿ ಮೌಲ್ಯದ ಗಾಂಜಾವನ್ನು ನಾಶ ಮಾಡಲಾಗಿದೆ.

ಇದನ್ನೂ ಓದಿ: ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ ನಾಲ್ವರ ಬಂಧನ

ವಿವಿಧ ಪೊಲೀಸ್​ ಠಾಣೆಯ ಎನ್​​ಡಿಪಿಎಸ್​ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದ್ದ ಗಾಂಜಾವನ್ನು ಇನ್ವೆರೋ ಬಯೋಟೆಕ್​ ಜೈವಿಕ ತ್ಯಾಜ್ಯ ವಿಲೇವಾರಿ ಕುಲುಮೆಗೆ ಹಾಕಿ ಜಿಲ್ಲಾ ಡ್ರಗ್ಸ್​ ಡಿಸ್ಫೋಸಲ್​ ಕಮಿಟಿ ನಾಶ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us