AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಜೊತೆ ಲವ್ವಿಡವ್ವಿ: ಗೆಳೆಯನನ್ನ ಕೊಂದು ನಡು ರಸ್ತೆಯಲ್ಲೇ ಕೇಕೆ ಹಾಕಿ ಪೊಲೀಸರಿಗೆ ಶರಣಾದ

ಇವರಿಬ್ಬರು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು, ಒಂದೇ ಏರಿಯಾದಲ್ಲಿ ಕೂಡಿ ಬೆಳೆದವರು. ಆದರೆ ಅವರಿಬ್ಬರ ಮದ್ಯೆ ಕೆಲ ದಿನಗಳಿಂದ ಹಗೆತನ ಬೆಳೆದಿತ್ತು. ಇದಕ್ಕೆ ಕಾರಣ ಅಕ್ರಮ ಸಂಬಂಧ. ಈ ವಿಚಾರವಾಗಿ ಹಲವು ಬಾರಿ ವಾರ್ನಿಂಗ್ ಕೂಡ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲೂ ರಾಜಿ ಸಂಧಾನ ಮಾಡಲಾಗಿತ್ತು. ಆದರೂ, ತನ್ನ ಹಳೇ ಚಾಳಿ ಮುಂದುವರೆಸಿದವ ಬೀದಿ ಹೆಣವಾಗಿದ್ದಾನೆ. ಕೊಚ್ಚಿ ಕೊಲೆ ಮಾಡಿದವನು ಕೇಕೆ ಹಾಕುತ್ತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಒಂದೇ ತಟ್ಟೆಯಲ್ಲಿ ಊಂಡವರ ನಡುವೆ ವೈಮನಸ್ಸು ಏಕೆ? ಇಲ್ಲಿದೆ ವಿವರ

ಪತ್ನಿ ಜೊತೆ ಲವ್ವಿಡವ್ವಿ: ಗೆಳೆಯನನ್ನ ಕೊಂದು ನಡು ರಸ್ತೆಯಲ್ಲೇ ಕೇಕೆ ಹಾಕಿ ಪೊಲೀಸರಿಗೆ ಶರಣಾದ
ಕೊಲೆಯಾದ ನಾಗರಾಜ್, ಆರೋಪಿಗಳು ಸಿದ್ದರಾಮೇಶ, ಹನುಮಂತಪ್ಪ (ಎಡದಿಂದ ಬೆಲಕ್ಕೆ
ಶಿವಕುಮಾರ್ ಪತ್ತಾರ್
| Edited By: |

Updated on: Jun 29, 2025 | 4:11 PM

Share

ಕೊಪ್ಪಳ‌, ಜೂನ್​ 29: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ವೆಂಕಟಗಿರಿ ಗ್ರಾಮದ ಹೊರವಲಯದಲ್ಲಿ ನಾಗರಾಜ್​ ಎಂಬುವರ ಕೊಲೆಯಾಗಿತ್ತು. ಹನುಮಂತಪ್ಪ ಎಂಬವನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಕೊಲೆ ಮಾಡಿದ ನಂತರ ಹನುಮಂತಪ್ಪ ಕೇಕೆ ಹಾಕುತ್ತಾ ಬಂದು ಕನಕಗಿರಿ ಪೊಲೀಸ್ ಠಾಣೆ ಪೊಲೀಸರ ಎದುರು ಶರಣಾಗಿದ್ದಾನೆ.

ಹತ್ಯೆಯಾದ ನಾಗರಾಜ್ ಹಾಗೂ ಕೊಲೆ ಮಾಡಿದ ಆರೋಪಿ ಹನುಮಂತಪ್ಪ ಗಂಗಾವತಿ ತಾಲೂಕಿನ ವೀಠಲಾಪುರ ಗ್ರಾಮದ ನಿವಾಸಿಗಳು. ಇಬ್ಬರೂ ಅಕ್ಕ-ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಸ್ನೇಹಿತರಾಗಿದ್ದರು, ಒಂದೇ ತಟ್ಟೆಯಲ್ಲಿ ಊಟ ಮಾಡಿ ಬೆಳೆದವರು. ಏಳು ವರ್ಷಗಳ ಹಿಂದೆ ಆರೋಪಿ ಹನುಮಂತಪ್ಪನ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳ ಕಾಲ ದಂಪತಿ ಚೆನ್ನಾಗಿಯೇ ಇದ್ದರು. ಆದರೆ, ಒಂದು ದಿನ ಆರೋಪಿ ಹನುಮಂತಪ್ಪ ಕುರಿ ಮೇಯಿಸಲು ಹೋದಾಗ ತನ್ನ ಹೆಂಡತಿ ನಾಗರಾಜ್ ಜೊತೆ ಇದ್ದಿದ್ದನ್ನು ಕಂಡಿದ್ದಾನೆ. ಅಲ್ಲಿಂದ ಸ್ನೇಹಿತರ ನಡುವೆ ಹಗೆತನ ಬೆಳೆದಿತ್ತು.

ಶನಿವಾರ (ಜೂ.29) ರಂದು ನಾಗರಾಜ್ ಗಂಗಾವತಿಗೆ ಹೋಗುತ್ತಿದ್ದಾನು. ಈ ವಿಚಾರ ತಿಳಿದ ಹನುಮಂತಪ್ಪ ಮತ್ತು ಈತನ ಸಹೋದರ ಸಿದ್ದರಾಮೇಶ, ನಾಗರಾಜ್​​ನ ಬೈಕ್​ಗೆ ಅಡ್ಡ ಹಾಕಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಹನುಮಂತಪ್ಪ ಕನಕಗಿರಿ ಠಾಣೆಗೆ ಬಂದು ಶರಣಾಗಿದ್ದಾನೆ. ರವಿವಾರ (ಜೂ.29) ಇನ್ನೋರ್ವ ಆರೋಪಿ ಸಿದ್ದರಾಮೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ
Image
ಪತಿಯನ್ನೇ ಕೊಂದ ಪತ್ನಿ: ಕೊಲೆ ಸುಳಿವು ಕೊಟ್ಟ ಖಾರದಪುಡಿ
Image
ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಕಸದ ಲಾರಿಯಲ್ಲಿಟ್ಟು ಪರಾರಿ
Image
ಗೆಳತಿಯ ಕೊಂದು, ವಿಡಿಯೋವನ್ನು ಆನ್​ಲೈನ್​ನಲ್ಲಿ ಪೋಸ್ಟ್​ ಮಾಡಿ, ಆತ್ಮಹತ್ಯೆ
Image
ಮದುವೆಯಾಗಿ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದಿದ್ದ ಮಹಿಳೆ

ನನ್ನ ಮಗನನ್ನು ಆರು ಜನ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತ ನಾಗರಾಜ್ ತಾಯಿ ಆರೋಪಿಸಿದ್ದಾರೆ. ಯಾವದೇ ಅಕ್ರಮ ಸಂಭಂದ ಇಲ್ಲ, ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.

ನಾಗರಾಜ್​ ಕಳೆದ ಕೆಲವು ವರ್ಷಗಳಿಂದ ಹನುಮಂತಪ್ಪನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ತನ್ನ ಪತ್ನಿಯ ಸಹವಾಸ ಬಿಡುವಂತೆ ಹನುಮಂತಪ್ಪ ಹಲವು ಬಾರಿ ನಾಗರಾಜ್​ಗೆ ವಾರ್ನಿಂಗ್ ಕೂಡ ಮಾಡಿದ್ದನಂತೆ. ಮಾತು ಕೇಳದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲೂ ರಾಜಿ ಸಂಧಾನ ಮಾಡಲಾಗಿತ್ತು. ಆದರೂ ಕೂಡ ತನ್ನ ಪತ್ನಿಯ ಸಹವಾಸ ಬಿಡದ ಹಿನ್ನೆಲೆಯಲ್ಲಿ ಶನಿವಾರ ಸಂಜೆ 4 ಗಂಟೆಗೆ ನಾಗರಾಜ್ ಗಂಗಾವತಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಹೋದ ಹನುಮಂತಪ್ಪ ಬೈಕ್​ಗೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ.

ನಾಗರಾಜ್​ ಸ್ಥಳದಲ್ಲಿ ಬೈಕ್ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನು ಹತ್ತಿದ ಹನುಮಂತಪ್ಪ ಹಾಗೂ ಆತನ ಸಹೋದರ ಸಿದ್ದರಾಮೇಶ ಹಿಂಬಾಲಿಸಿಕೊಂಡು ಹೋಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ….ಅದೇನು ಕಿಲಾಡಿತನ: ಬುರ್ಖಾ ಮಹಿಳೆಯರ ಕರಾಮತ್ತು ಸಿಸಿಟಿವಿಯಲ್ಲಿ 

ನಾಗರಾಜ್​, ನನ್ನ ಸೊಸೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು ನಿಜ. ಕೆಲವು ಬಾರಿ ಸಿಕ್ಕಿಹಾಕಿಕೊಂಡಿದ್ದರು. ಹೀಗಾಗಿ ಸಿಟ್ಟಿತ್ತು ಎಂದು ಆರೋಪಿ ಹನುಮಂತಪ್ಪ ತಂದೆ ಹೇಳಿದ್ದಾರೆ. ತನ್ನ ಹೆಂಡತಿ ಇದ್ದರೂ, ಪಕ್ಕದ ಮನೆಯವರ ಹೆಂಡತಿ ಮೇಲೆ ಕಣ್ಣ ಹಾಕಿದವ ಬರ್ಬರವಾಗಿ ಕೊಲೆಯಾಗಿದ್ದಾನೆ. ಸದ್ಯ ನಾಗರಾಜ್​ನನ್ನು ಕೊಲೆ ಮಾಡಿದ ಅಣ್ಣ-ತಮ್ಮಂದಿರು ಪೊಲೀಸರ ಅತಿಥಿಯಾಗಿದ್ದಾರೆ. ಈ ಭೀಕರ ಕೊಲೆಯಿಂದ ಇಡೀ ವಿಠಲಾಪೂರ ಗ್ರಾಮವೇ ಸ್ತಬ್ಧವಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ