AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ 2026: ಕೊಪ್ಪಳ ಟು ಮೈಸೂರು; ಚಿನ್ನದ ಅಂಬಾರಿ ಪಯಣದ ರೋಚಕ ಕಥೆ ಇಲ್ಲಿದೆ

ನಾಡಹಬ್ಬ ಮೈಸೂರು ದಸರಾದ ವಿಶ್ವವಿಖ್ಯಾತ ಚಿನ್ನದ ಅಂಬಾರಿಯ ಮೂಲ ಕೊಪ್ಪಳ ಜಿಲ್ಲೆ. 14ನೇ ಶತಮಾನದಲ್ಲಿ ದೇವಗಿರಿಯಿಂದ ಆರಂಭವಾಗಿ, ವಿಜಯನಗರ ಸಾಮ್ರಾಜ್ಯದ ಮೂಲಕ ಸಾಗಿ, ಕೊನೆಗೆ ಮೈಸೂರು ಒಡೆಯರನ್ನು ತಲುಪಿದ ಈ ಅಂಬಾರಿಯ ಪಯಣ ಐತಿಹಾಸಿಕ. ಗವಿಮಠದ ಶ್ರೀಗಳು ಮೈಸೂರು ದಸರಾ ಉದ್ಘಾಟಿಸಿರುವುದು ಈ ಕೊಪ್ಪಳ ನಂಟಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ದಸರಾ 2026: ಕೊಪ್ಪಳ ಟು ಮೈಸೂರು; ಚಿನ್ನದ ಅಂಬಾರಿ ಪಯಣದ ರೋಚಕ ಕಥೆ ಇಲ್ಲಿದೆ
ಅಂಬಾರಿ
ಶಿವಕುಮಾರ್ ಪತ್ತಾರ್
| Edited By: |

Updated on: Oct 19, 2026 | 3:16 PM

Share

ಮುಖ್ಯಾಂಶಗಳು

  • ನಾಡಿನಾದ್ಯಂತ ನಾಡಹಬ್ಬ ದಸರಾ ಸಂಭ್ರಮ
  • ಚಿನ್ನದ ಅಂಬಾರಿ ಪಯಣದ ರೋಚಕ ಕಥೆ
  • ಶ್ರೀರಂಗನಾಯಕರಿಂದ ಮೈಸೂರು ಒಡೆಯರಿಗೆ ಅಂಬಾರಿ ಹಸ್ತಾಂತರ

ಕೊಪ್ಪಳ, ಅಕ್ಟೋಬರ್​​ 19: ನಾಡಿನಾದ್ಯಂತ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರು ದಸರಾಕ್ಕೆ ವಿಶೇಷ ಸ್ಥಾನಮಾನವಿದೆ. ದಸರಾದ ಪ್ರಮುಖ ಆಕರ್ಷಣೆ ಎಂದರೆ ಚಿನ್ನದ ಅಂಬಾರಿ ಮೆರವಣಿಗೆ. ಈ ಅಂಬಾರಿ ಮತ್ತು ಮೈಸೂರು ದಸರಾಕ್ಕೆ ಮೂಲ ಪ್ರೇರಣೆ ಕೊಪ್ಪಳ ಜಿಲ್ಲೆ ಎಂಬುವುದು ಇತಿಹಾಸಕಾರರು, ವಿದ್ವಾಸಂಕರು ಹೇಳುತ್ತಾರೆ. ಈ ವರ್ಷ ಗವಿಮಠದ ಶ್ರೀಗಳು ಮೈಸೂರು ದಸರಾ ಉದ್ಘಾಟನೆ ಮಾಡಿರುವುದು ಐತಿಹಾಸಿಕ ನಂಟಿಗೆ ಮತ್ತಷ್ಟು ಮಹತ್ವ ಬಂದಿದೆ.

ಇತಿಹಾಸದಲ್ಲಿರುವ ಉಲ್ಲೇಖ ಏನು?

ಮೈಸೂರು ದಸರಾದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಮೆರವಣಿಗೆ ವಿಶ್ವವಿಖ್ಯಾತ. ಇಂತಹ ಮೈಸೂರು ದಸರಾದ ಇತಿಹಾಸ ಆರಂಭವಾಗುವುದು ಕೊಪ್ಪಳ ಜಿಲ್ಲೆಯಿಂದ ಎಂಬುವುದು ಇತಿಹಾಸದಲ್ಲಿ ಕಾಣಬಹುದು. ಚಿನ್ನದ ಅಂಬಾರಿಯ ಮೂಲವು ಮಹಾರಾಷ್ಟ್ರದ ದೇವಗಿರಿ. 14ನೇ ಶತಮಾನದಲ್ಲಿ ದೇವಗಿರಿ ಪತನಾ ನಂತರ ಅಂದು ಬಳ್ಳಾರಿ ಜಿಲ್ಲೆಯ ರಾಮದುರ್ಗಾದಲ್ಲಿ ಆಡಳಿತ ನಡೆಸುತ್ತಿದ್ದ, ಮುಮ್ಮಡಿ ಸಿಂಗನಾಯಕರ ಬಳಿ ಬರುತ್ತದೆ. ಮುಮ್ಮಡಿ ಸಿಂಗನಾಯಕ ನಂತರ ಕಂಪಿಲರಾಯ ಈ ಅಂಬಾರಿಯನ್ನು ಜೋಪಾನವಾಗಿ ಕಾಪಾಡುತ್ತಾರೆ.

ಇದನ್ನೂ ಓದಿ: ಆಯುಧ ಪೂಜೆ ತಯಾರಿ ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಮ್

ಇದೇ ವೇಳೆ ಈಗಿನ ಹೇಮಗುಡ್ಡದಲ್ಲಿಯ ಕೋಟೆಯಲ್ಲಿ ಶ್ರೀದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿ ಅಲ್ಲಿ ಪ್ರತಿ ವರ್ಷ ವಿಜಯದಶಮಿ ಸಂದರ್ಭದಲ್ಲಿ ದಸರಾ ಆಚರಣೆ ಮಾಡಲಾಗುತ್ತಿತ್ತು. 1327ರಲ್ಲಿ ದೆಹಲಿ ಸುಲ್ತಾನರ ದಾಳಿಯ ನಂತರ ಕಂಪಿಲರಾಯನ ಮಗ ಗಂಡುಗಲಿ ಕುಮಾರರಾಮನು ತನ್ನ ಆಸ್ಥಾನದಲ್ಲಿ ಅಂಬಾರಿಯನ್ನು ತನ್ನ ಮಾವಂದಿರಾದ ಹಕ್ಕ ಬುಕ್ಕರಿಗೆ ನೀಡಿದ್ದರು. ಹಕ್ಕ-ಬುಕ್ಕರು 1336ರಲ್ಲಿ ಆನೇಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸುತ್ತಾರೆ, ಆನೇಗೊಂದಿಯ ನಂತರ ವಿಜಯನಗರ ಸಾಮ್ರಾಜ್ಯವು ಹಂಪಿಗೆ ಸ್ಥಳಾಂತರವಾಗುತ್ತದೆ. ಈ ಸಂದರ್ಭದಲ್ಲಿ ಹಂಪಿಯಲ್ಲಿ ಅದ್ದೂರಿಯಾಗಿ ದಸರಾ ಆಚರಿಸಲಾಗುತ್ತಿತ್ತು.

ಶ್ರೀರಂಗನಾಯಕರಿಂದ ಮೈಸೂರು ಒಡೆಯರಿಗೆ ಅಂಬಾರಿ ಹಸ್ತಾಂತರ

ಇದೇ ಕಾರಣಕ್ಕೆ ಹಂಪಿಯಲ್ಲಿ ಮಹಾನವಮಿ ದಿಬ್ಬವನ್ನು ನೋಡಬಹುದಾಗಿದೆ. ತಾಳಿಕೋಟೆ ಕದನದ ನಂತರ ವಿಜಯನಗರ ಪಥನವಾಯಿತು. ಈ ಮಧ್ಯೆ ಹೇಮಗುಡ್ಡದಲ್ಲಿಯ ದಸರಾವನ್ನು ಕನಕಗಿರಿಯ ಗುಜ್ಜಲ ವಂಶಸ್ಥರು ಮುಂದುವರಿಸಿಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಇಲ್ಲಿಯ ಅಂಬಾರಿಯನ್ನು ಪೆನಗುಂಡಿಗೆ ರವಾನಿಸಲಾಗಿತ್ತು. ಪೆನಗುಂಡಿಯ ನಂತರ ಈ ಅಂಬಾರಿಯನ್ನು ಶ್ರೀರಂಗಪಟ್ಟಣದ ಶ್ರೀರಂಗನಾಯಕರಿಗೆ ಹಸ್ತಾಂತರಿಸಲಾಯಿತು. ಶ್ರೀರಂಗಪಟ್ಟಣದ ನಂತರ ಮೈಸೂರು ಒಡೆಯರು ದಸರಾವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಈಗಲೂ ವೈಭವದಿಂದ ನಡೆಯುವ ಮೈಸೂರು ದಸರಾದ ಸಂಭ್ರಮದ ಅಂಬಾರಿಯು ಕೊಪ್ಪಳ ಜಿಲ್ಲೆಯ ಮೂಲ ಎಂಬುವುದು ಈ ಭಾಗದ ಜನರ ಹೆಮ್ಮೆಯಾಗಿದೆ.

LIVE TV

ಹೇಮಗುಡ್ಡದಲ್ಲಿ ಅದ್ಧೂರಿ ದಸರಾ ಹಬ್ಬ

ದಸರಾ ಸಂಭ್ರಮ ಆಚರಣೆ ಆರಂಭಿಸಿದ ಕುಮ್ಮಟದುರ್ಗಾದ ಬಳಿಯ ಹೇಮಗುಡ್ಡದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥರು ಸ್ಥಳೀಯರ ಸಹಾಯದಿಂದ ಅದ್ದೂರಿ ದಸರಾ ಆಚರಣೆ ಮಾಡುತ್ತಿದ್ದಾರೆ. ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಇದೀಗ ದಸರಾ ಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ಇಲ್ಲಿ ಕೂಡ 9 ದಿನಗಳ ಕಾಲ ವಿಶೇಷ ಪೂಜೆ ಮಾಡಲಾಗುತ್ತದೆ. ಜಿಲ್ಲೆಯಾದ್ಯಂತ ಭಕ್ತರು ನಿತ್ಯ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ಬಳಿಯಿರುವ ಕಲ್ಲಿನಲ್ಲಿ ಇತಿಹಾಸವನ್ನು ಕೆತ್ತನೆ ಮಾಡಲಾಗಿದೆ.

ಇದನ್ನೂ ಓದಿ: ದೀಪಾಲಂಕಾರದಿಂದ ಮೈಸೂರು ಝಗಮಗ: ಪ್ರವಾಸೊಗರ ಕಣ್ಣನ ಸೆಳೆಯುತ್ತಿದೆ ಲೈಟಿಂಗ್ಸ್​​

ಒಟ್ಟಿನಲ್ಲಿ ನಾಡಹಬ್ಬ ದಸರಾವನ್ನು ರಾಜರ ಆಡಳಿತದ ಕಾಲದಲ್ಲಿ ಸಾರ್ವಜನಿಕವಾಗಿ ಆಚರಿಸಲು ಮೊದಲು ಆರಂಭ ಮಾಡಿದ ಕೀರ್ತಿ ಕೊಪ್ಪಳ ಜಿಲ್ಲೆಗಿದೆ. ಈ ಭಾರಿಯ ದಸರಾವನ್ನು ಗವಿಮಠ ಶ್ರೀಗಳು ಉದ್ಘಾಟನೆ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ. ಉದ್ಘಾಟನೆ ದಿನದಂದು ಸಚಿವ ಶಿವರಾಜ್ ತಂಗಡಗಿ ದಸರಾಗೆ ಕೊಪ್ಪಳ ಮೂಲ ಎಂದು ಸಾರಿ ಸಾರಿ ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​