AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಹಿಟ್ಲರ್ ತರಹ ವರ್ತಿಸುತ್ತಿದ್ದಾರೆ, ಆರ್ಮಿಯನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ -ವಿ.ಎಸ್.ಉಗ್ರಪ್ಪ

ಮೋದಿ ವೈಯಕ್ತಿಕ ಬದುಕಿನ ಬಗ್ಗೆ ಟೀಕೆ‌ ಮಾಡಿದ ಉಗ್ರಪ್ಪ, ಮೋದಿ ರಾಮಾಯಣ ಓದಿಲ್ಲ ಸಂವಿಧಾನವನ್ನೂ ಓದಿಲ್ಲ. ರಾಮಾಯಣ ಓದಿದ್ರೆ ಅವರ ಶ್ರೀಮತಿ ಹಾಗೆ ಇಡ್ತಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ.

ಪ್ರಧಾನಿ ಮೋದಿ ಹಿಟ್ಲರ್ ತರಹ ವರ್ತಿಸುತ್ತಿದ್ದಾರೆ, ಆರ್ಮಿಯನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ -ವಿ.ಎಸ್.ಉಗ್ರಪ್ಪ
ವಿ ಎಸ್​ ಉಗ್ರಪ್ಪ
TV9 Web
| Updated By: ಆಯೇಷಾ ಬಾನು|

Updated on:Jun 19, 2022 | 5:07 PM

Share

ಕೊಪ್ಪಳ: ದೇಶದ ರಕ್ಷಣೆಯಲ್ಲಿ ಮೋದಿ(Narendra Modi) ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆಯಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕೊಪ್ಪಳ ನಗರದಲ್ಲಿ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ(VS Ugrappa) ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜಾರಿ ನಿರ್ದೇಶನಾಲಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಪತ್ರಿಕೆ. ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ನ ಮುಖವಾಣಿ. ಮೋದಿ ಯಾವ ಆಶ್ವಾಸನೆ ಈಡೇರಿಸಿದ್ದಾರೆ ಅನ್ನೋದನ್ನ ಹೇಳಬೇಕು. ರಫೇಲ್ ಖರೀದಿಯಲ್ಲಿ ಎಷ್ಟು ಭ್ರಷ್ಟಾಚಾರ ಆಗಿದೆ ಅನ್ನೋದು ಗೊತ್ತಿದೆ. 38 ಸಾವಿರ ಕೋಟಿ ಕಿಕ್ಬ್ಯಾಕ್ ಹೋಗಿದೆ ಎಂದು ವಿ.ಎಸ್.ಉಗ್ರಪ್ಪ ಆಕ್ರೋಶ ಹೊರ ಹಾಕಿದ್ರು.

ಮೋದಿ ರಾಜ್ಯಕ್ಕೆ ಭೇಟಿ ನೀಡ್ತಿದ್ದಾರೆ. ಮಿಸ್ಟರ್ ಮೋದಿ ಯಾವ ಆಶ್ವಾಸನೆ ಈಡೇರಿಸಿದ್ದಾರೆ ಅನ್ನೋದನ್ನ ಹೇಳಬೇಕು. 15 ಲಕ್ಷ ಕೊಡ್ತೀವಿ ಅನ್ನೋ ಭರವಸೆ ಕೊಟ್ಟಿದ್ರೀ, ಅದನ್ನು ಈಡೇರಿಸಿದ್ದೀರಾ? ಭ್ರಷ್ಟಾಚಾರ ನಿರ್ಮೂಲನೆ ಆಗಿದೆಯಾ? ನಮ್ಮ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ರಿ‌. ಇದೀಗ ನಿಮ್ಮ ಸರ್ಕಾರ 40 ಪರ್ಸೆಂಟ್ ಸರ್ಕಾರ. ಯಡಿಯೂರಪ್ಪ ಹಾಗೂ ಅವರ ಮಗ ದುಬೈಗೆ ಯಾಕೆ ಹೋಗ್ತಾರೆ ಅನ್ನೋದನ್ನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ತನಿಖೆ ಆದ್ರೆ ಯಡಿಯೂರಪ್ಪ ಹಾಗೂ ಮಗ ಜೈಲಿಗೆ ಹೋಗ್ತಾನೆ ಎಂದಿದ್ದಾರೆ‌. ಇದಕ್ಕೆ ಮೋದಿ ಆ್ಯಕ್ಷನ್ ಏನು ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ. ಮೋದಿ ಮೋದಿ ಎಂದು ಹೇಳೋ ಯುವಕರು ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ ಆರ್​ಎಸ್​ಎಸ್ ‘ಅಗ್ನಿಪಥ್’; 4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸ್ತೀರಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ -ಹೆಚ್ಡಿಕೆ ಗರಂ

ಮಿಸ್ಟರ್ ಮೋದಿ 16 ಕೋಟಿ ಉದ್ಯೋಗ ಎಲ್ಲಿ? ಮೋದಿ ವೈಯಕ್ತಿಕ ಬದುಕಿನ ಬಗ್ಗೆ ಟೀಕೆ‌ ಮಾಡಿದ ಉಗ್ರಪ್ಪ, ಮೋದಿ ರಾಮಾಯಣ ಓದಿಲ್ಲ ಸಂವಿಧಾನವನ್ನೂ ಓದಿಲ್ಲ. ರಾಮಾಯಣ ಓದಿದ್ರೆ ಅವರ ಶ್ರೀಮತಿ ಹಾಗೆ ಇಡ್ತಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ. 950 ಕೋಟಿ ರಾಷ್ಟ್ರೀಯ ನಾಯಕರಿಗೆ ಹೋಯ್ತಾ? ಮಿಸ್ಟರ್ ಮೋದಿ 16 ಕೋಟಿ ಉದ್ಯೋಗ ಎಲ್ಲಿ. ದೇಶದಲ್ಲಿ 13 ಕೋಟಿ ಉದ್ಯೋಗ ನಷ್ಟವಾಗಿದೆ ಎಂದ ಮೋದಿ‌ ದೇಶದಲ್ಲಿ ಭಾರತದ ಸೇನೆಗೆ ಅದರದ್ದೇ ಆದ ಘನತೆ ಇದೆ. ಕೇಂದ್ರ ಸರ್ಕಾರ 5 ವರ್ಷದಲ್ಲಿ 4,44,813 ಹುದ್ದೆ ಭರ್ತಿ ಮಾಡಿದೆ. ಆದರೆ ಸರ್ಕಾರ ಹೇಳೋದು 40 ಲಕ್ಷ ಉದ್ಯೋಗ ಭರ್ತಿ ಅಂತ. ಮೋದಿ ಸರ್ಕಾರ ಮಿಸ್ ಲೀಡ್ ಮಾಡ್ತಿದೆ. ರೈತರ ಅಭಿವೃದ್ಧಿ ಬಗ್ಗೆ ಮೋದಿ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಗ್ನಿಪಥ್ ಯೋಜನೆಯಿಂದ ಯುವಕರು ಡಿಗ್ರಿ ಮಾಡಲು ಆಗಲ್ಲ. ಯುವಕರು 4 ವರ್ಷ ಸೇನೆಗೆ ಹೋದರೆ ಕಾಲೇಜು ಸೇರಲು ಆಗಲ್ಲ. ಕೇಂದ್ರದ ತುಘಲಕ್ ದರ್ಬಾರ್ ಯುವಕರಿಗೆ ಅರ್ಥ ಆಗುತ್ತಿಲ್ಲ. ಅಗ್ನಿಪಥ್ ಯೋಜನೆಯಲ್ಲಿ RSSನವರನ್ನು ಮುಂದುವರಿಸ್ತೀರಾ? ಪ್ರಧಾನಿ ಮೋದಿ ಹಿಟ್ಲರ್ ತರಹ ವರ್ತಿಸುತ್ತಿದ್ದಾರೆ. ಆರ್ಮಿಯನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ದೇಶದ ಯುವಕರು, ಸೇನೆ ಜೊತೆ ಚೆಲ್ಲಾಟ ಆಡಬೇಡಿ ಎಂದರು. ಇದನ್ನೂ ಓದಿ: International Yoga Day 2022: ಯೋಗದಿಂದ ಮಧುಮೇಹ, ರಕ್ತದೊತ್ತಡವನ್ನು ನಿಯಂತ್ರಿಸಬಹುದು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:07 pm, Sun, 19 June 22