AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಸ್ ಸಿಲಿಂಡರ್ ಬಳಸುವ ಮುನ್ನ ಈ ಎಚ್ಚರಿಕೆಗಳನ್ನು ಮರೆಯಬೇಡಿ: ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ

ಬೊಮ್ಮಸಂದ್ರ ಗ್ಯಾಸ್ ಸಿಲಿಂಡರ್ ಸ್ಫೋಟದ ಬೆನ್ನಲ್ಲೇ ಎಲ್‌ಪಿಜಿ ಬಳಕೆಯ ಸುರಕ್ಷತೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಸಿಲಿಂಡರ್ ಸ್ವೀಕರಿಸುವುದರಿಂದ ಹಿಡಿದು ಒಂದು ವೇಳೆ ಗ್ಯಾಸ್ ಸೋರಿಕೆ ಆದರೆ, ಆ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಕುರಿತು ತಜ್ಞರು ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ.

ಗ್ಯಾಸ್ ಸಿಲಿಂಡರ್ ಬಳಸುವ ಮುನ್ನ ಈ ಎಚ್ಚರಿಕೆಗಳನ್ನು ಮರೆಯಬೇಡಿ: ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
| Edited By: |

Updated on:Jul 23, 2026 | 2:38 PM

Share

ಮುಖ್ಯಾಂಶಗಳು

  • ಸಿಲಿಂಡರ್ ಸ್ವೀಕರಿಸುವ ಮುನ್ನ ಕಡ್ಡಾಯ ಪರಿಶೀಲನೆ ಮಾಡಿ
  • ಗ್ಯಾಸ್ ಸೋರಿಕೆ ಅನುಮಾನ ಬಂದರೆ ವಿದ್ಯುತ್ ಸ್ವಿಚ್ ಮುಟ್ಟಬೇಡಿ
  • ಸಿಲಿಂಡರ್ ಸುರಕ್ಷತೆಗೆ ಸರಳ ಕ್ರಮಗಳೇ ಜೀವ ರಕ್ಷಕ

ಬೆಂಗಳೂರು, ಜುಲೈ 23: ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 8ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿರುವ ಘಟನೆ ಮತ್ತೊಮ್ಮೆ ಗ್ಯಾಸ್ ಸುರಕ್ಷತೆಯ ಮಹತ್ವವನ್ನು ನೆನಪಿಸಿದೆ. ಮನೆಗಳಲ್ಲಿ ಎಲ್‌ಪಿಜಿ ಹಾಗೂ ಇತರ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವಾಗ ಕೆಲ ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಅಪಘಾತದ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಸುರಕ್ಷತಾ ತಜ್ಞರು ಸಲಹೆ ನೀಡಿದ್ದಾರೆ.

ಗ್ಯಾಸ್ ಸಿಲಿಂಡರ್ ಮನೆಗೆ ಬಂದ ತಕ್ಷಣ ಏನು ಪರಿಶೀಲಿಸಬೇಕು?

  • ಸಿಲಿಂಡರ್ ಮೇಲಿನ ಕಂಪನಿಯ ಸೀಲ್ ಮತ್ತು ಸೇಫ್ಟಿ ಕ್ಯಾಪ್ ಸರಿಯಾಗಿದೆಯೇ ಎಂದು ಪರಿಶೀಲಿಸಿ.
  • ಸಿಲಿಂಡರ್ ಮೇಲೆ ನಮೂದಿಸಿರುವ ಟೆಸ್ಟ್ ದಿನಾಂಕ ಹಾಗೂ ‘Due for Test’ ಮಾಹಿತಿಯನ್ನು ಗಮನಿಸಿ.
  • ವಿತರಕರು ಮನೆ ಬಾಗಿಲಿನಲ್ಲೇ ಮಾಡುವ Pre-Delivery Inspection (PDI) ನಡೆಸುವಂತೆ ಒತ್ತಾಯಿಸಿ.

ಸಿಲಿಂಡರ್ ಲೀಕ್ ಇದೆಯೇ? ಹೀಗೆ ಪರೀಕ್ಷಿಸಿ

  • ರೆಗ್ಯುಲೇಟರ್ ಅಳವಡಿಸುವ ಭಾಗದಲ್ಲಿ ಸೋಪು ಮಿಶ್ರಿತ ನೀರು ಹಾಕಿ (ಉದಾಹರಣೆಗೆ; ವಾಹನಗಳ ಟೈರ್ ಪಂಚರ್ ಪರಿಶೀಲಿಸುವಂತೆ).
  • ಗುಳ್ಳೆಗಳು (Bubbles) ಕಾಣಿಸಿಕೊಂಡರೆ ಗ್ಯಾಸ್ ಸೋರಿಕೆ ಇರುವ ಸಾಧ್ಯತೆ ಇದೆ.
  • ಇಂತಹ ಸಿಲಿಂಡರ್‌ಗಳನ್ನು ಸ್ವೀಕರಿಸದೆ ತಕ್ಷಣ ವಿತರಕರಿಗೆ ಹಿಂತಿರುಗಿಸಿ.
  • ಅಧಿಕೃತ ಗ್ಯಾಸ್ ಏಜೆನ್ಸಿಗಳಿಂದ ಮಾತ್ರ ಸಿಲಿಂಡರ್ ಪಡೆಯಿರಿ.
  • ಸಿಲಿಂಡರ್ ಇಡುವಾಗ ನೆಟ್ಟಗೆ (Upright) ಸಮತಟ್ಟಾದ ಮತ್ತು ಗಾಳಿ ಸಂಚಾರ ಇರುವ ಸ್ಥಳದಲ್ಲಿ ಇಡಿ.
  • ISI/BIS ಪ್ರಮಾಣಿತ ರೆಗ್ಯುಲೇಟರ್ ಹಾಗೂ ಹೋಸ್ ಮಾತ್ರ ಬಳಸಿ.
  • ಸಾಮಾನ್ಯ ರಬ್ಬರ್ ಹೋಸ್ ಅನ್ನು ಪ್ರತಿ ಎರಡು ವರ್ಷಕ್ಕೊಮ್ಮೆ, ಸುರಕ್ಷಾ (Suraksha) ಹೋಸ್ ಅನ್ನು ಐದು ವರ್ಷಕ್ಕೊಮ್ಮೆ ಬದಲಾಯಿಸಿ.
  • ಸಿಲಿಂಡರ್ ಅನ್ನು ವಿದ್ಯುತ್ ತಂತಿ, ಹೀಟರ್ ಅಥವಾ ಹೆಚ್ಚು ಉಷ್ಣ ಇರುವ ಸ್ಥಳದ ಬಳಿ ಇಡಬೇಡಿ.
  • ಹೆಚ್ಚುವರಿ (Spare) ಸಿಲಿಂಡರ್‌ಗಳನ್ನು ಅಡುಗೆ ಕೋಣೆಯಲ್ಲೇ ಸಂಗ್ರಹಿಸಿಡುವುದನ್ನು ತಪ್ಪಿಸಿ.

ಗ್ಯಾಸ್ ಸೋರಿಕೆ ಅನುಮಾನ ಬಂದರೆ ಏನು ಮಾಡಬೇಕು?

  • ತಕ್ಷಣ ಗಾಬರಿಯಾಗಿ ಏನೋ ಮಾಡಲು ಹೋಗಬೇಡಿ.
  • ಗ್ಯಾಸ್ ಸ್ಟೌವ್, ದೀಪ, ಅಗರಬತ್ತಿ ಸೇರಿದಂತೆ ಎಲ್ಲ ಬೆಂಕಿಯ ಮೂಲಗಳನ್ನು ತಕ್ಷಣ ನಂದಿಸಿ.
  • ಯಾವುದೇ ಕಾರಣಕ್ಕೂ ವಿದ್ಯುತ್ ಸ್ವಿಚ್, ಡೋರ್‌ಬೆಲ್, ಟಾರ್ಚ್ ಅಥವಾ ಮೊಬೈಲ್ ಫೋನ್ ಬಳಸಬೇಡಿ, ಏಕೆಂದರೆ ಸಣ್ಣ ಸ್ಪಾರ್ಕ್ ಕೂಡ ಅಪಾಯಕ್ಕೆ ಕಾರಣವಾಗಬಹುದು.
  • ಮನೆಯ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.
  • ಸಾಧ್ಯವಾದರೆ ಸಿಲಿಂಡರ್ ಅನ್ನು ಸುರಕ್ಷಿತವಾಗಿ ಹೊರಗಿನ ತೆರೆದ ಸ್ಥಳಕ್ಕೆ ಸ್ಥಳಾಂತರಿಸಿ.
  • ಗ್ಯಾಸ್ ವಾಸನೆ ಹೆಚ್ಚಾಗುತ್ತಿದ್ದರೆ ಅಥವಾ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಸ್ಥಳ ಖಾಲಿ ಮಾಡಿ ಅಗ್ನಿಶಾಮಕ ದಳ ಅಥವಾ ಪೊಲೀಸರಿಗೆ ಮಾಹಿತಿ ನೀಡಿ.

ಮನೆಯಲ್ಲೇ ಗ್ಯಾಸ್ ಲೀಕ್ ಡಿಟೆಕ್ಟರ್ ಅಳವಡಿಸಬಹುದು

  • ಮಾರುಕಟ್ಟೆಯಲ್ಲಿ ₹1,000 ರಿಂದ ₹2,500ರೊಳಗೆ ಗ್ಯಾಸ್ ಲೀಕ್ ಡಿಟೆಕ್ಟರ್ಗಳು ಲಭ್ಯವಿದ್ದು, ಸೋರಿಕೆ ಕಂಡುಬಂದ ಕೂಡಲೇ ಅಲಾರಂ ನೀಡುತ್ತವೆ.
  • ಜೊತೆಗೆ ಸಣ್ಣ ಗಾತ್ರದ ಫೈರ್ ಎಕ್ಸ್‌ಟಿಂಗ್ವಿಷರ್ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆರಂಭಿಕ ಹಂತದಲ್ಲೇ ಬೆಂಕಿ ನಿಯಂತ್ರಿಸಲು ಸಹಕಾರಿಯಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು?

  • ಗ್ಯಾಸ್ ಸೋರಿಕೆ ಕಂಡುಬಂದರೆ ಮೊದಲು ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಿರಿ.
  • ತುರ್ತು ಕರೆಗಳನ್ನು ಮನೆಯ ಹೊರಹೋಗಿಯೇ ಮಾಡಿ.
  • ಗ್ಯಾಸ್ ಕಂಪನಿಯ 24×7 ತುರ್ತು ಸಹಾಯವಾಣಿ ಸಂಖ್ಯೆ 1906 ಅಥವಾ ಅಗ್ನಿಶಾಮಕ ದಳವನ್ನು ತಕ್ಷಣ ಸಂಪರ್ಕಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Thu, 23 July 26

Follow Us
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ