AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್ ಬುಕ್ ಯೂಸ್ ಮಾಡೋ ಮಹಿಳೆಯರೇ ಹುಷಾರ್; ನಿಮಗೂ ಪರಿಚಯ ಮಾಡಿಕೊಂಡು ಚಿನ್ನಾಭರಣ ದೋಚಬಹುದು ಎಚ್ಚರ

ಆತ ಬಿಕಾಂ ಫೇಲ್, ಮಾಡುವುದಕ್ಕೆ ಉದ್ಯೋಗವಿಲ್ಲ. ಪರಿಣಾಮ ಆತ ಮಾಡುತ್ತಿದ್ದದ್ದು ಮಾತ್ರ ಖತರ್ನಾಕ್ ಕೆಲಸ. ಹೌದು, ಫೇಸ್ ಬುಕ್​ನಲ್ಲಿ ಮಹಿಳೆಯರನ್ನ ಪರಿಚಯ ಮಾಡಿಕೊಂಡು ಬಣ್ಣ ಬಣ್ಣದ ಮಾತುಗಳನ್ನು ಆಡಿ, ತನ್ನ ಬುಟ್ಟಿಗೆ ಬೀಳಿಸಿಕೊಳ್ಳುವುದೇ ಅವನ ಕಾಯಕ. ಬಳಿಕ ತನಗೆ ಕಷ್ಟ ಎಂದು ಹೇಳಿ, ಮಹಿಳೆಯರಿಂದ ಚಿನ್ನಾಭರಣ ಪಡೆದು ಪಂಗನಾಮ ಹಾಕುತ್ತಿದ್ದ. ಕೊನೆಗೂ ಆ ಖತರ್ನಾಕ್ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಫೇಸ್ ಬುಕ್ ಯೂಸ್ ಮಾಡೋ ಮಹಿಳೆಯರೇ ಹುಷಾರ್; ನಿಮಗೂ ಪರಿಚಯ ಮಾಡಿಕೊಂಡು ಚಿನ್ನಾಭರಣ ದೋಚಬಹುದು ಎಚ್ಚರ
ಬಂಧಿತ ಆರೋಪಿ
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 17, 2023 | 7:19 PM

ಮಂಡ್ಯ, ಡಿ.17: ಫೇಸ್ ಬುಕ್(Facebook)​ನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಸಮಸ್ಯೆಯ ಹೇಳಿ ಹಣ ದೋಚುತ್ತಿದ್ದ ಆಸಾಮಿಯನ್ನ ಮಂಡ್ಯ(Mandya) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಂಜನ್ ಗೌಡ ಬಂಧಿತ ಆರೋಪಿ. ನೋಡುವುದಕ್ಕೆ ಅಂದವಾಗಿ ಕಂಡರು ಇತ ಮಾಡುತ್ತಿದ್ದದ್ದು ಮಾತ್ರ ಖತರ್ನಾಕ್ ಕೆಲಸ. ಈತನ ಬಣ್ಣದ ಮಾತಿಗೆ ಅದೆಷ್ಟೋ ಮಹಿಳೆಯರು(Womans) ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಎಲ್ಲಿ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತೆ ಎಂದು ಎಷ್ಟೋ ಜನ ಮಹಿಳೆಯರು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಆದರೆ, ಇತ್ತೀಚೆಗೆ ಈತನಿಂದ ಮೋಸಹೋದ ಮಹಿಳೆಯೊಬ್ಬಳು, ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿ ರಂಜನ್​ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಇದೇ ರೀತಿ ಹತ್ತಾರು ಮಹಿಳೆಯರಿಗೆ ಮೋಸ ಮಾಡಿರುವುದು ಕೂಡ ಗೊತ್ತಾಗಿದೆ. ಬಳಿಕ ಆರೋಪಿಯಿಂದ 182 ಗ್ರಾಂ ಚಿನ್ನಾಭರಣವನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ಫೇಸ್ ಬುಕ್​ನಲ್ಲಿ ಮಹಿಳೆಯರು, ವಿಧವೆಯರನ್ನ ಪರಿಚಯ ಮಾಡಿಕೊಂಡು ಮೋಸ

ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ನಿವಾಸಿಯಾದ ಆರೋಪಿ ರಂಜನ್ ಗೌಡ, ಬಿಕಾಂ ಫೇಲ್​ ಆಗಿದ್ದ. ಯಾವುದೇ ಕೆಲಸ ಮಾಡದೇ ಫೇಸ್ ಬುಕ್ ನೋಡುತ್ತಾ. ಅಲ್ಲಿ ಮಹಿಳೆಯರು ಹಾಗೂ ವಿಧವೆಯರನ್ನ ಪರಿಚಯ ಮಾಡಿಕೊಂಡು, ನಂತರ ಅವರ ಬಳಿ ಬಣ್ಣದ ಮಾತುಗಳನ್ನಾಡಿ, ಇವನ ಬುಟ್ಟಿಗೆ ಬೀಳುತ್ತಿದ್ದಂತೆ ತನಗೆ ಕಷ್ಟವಿದೆ. ಸ್ವಲ್ಪ ಹಣಕೊಡಿ ಎಂದು ಕೇಳುತ್ತಿದ್ದ. ಹಣವಿಲ್ಲ ಅಂದಾಗ ನಿಮ್ಮ ಚಿನ್ನಾಭರಣ ಕೊಡಿ, ಅಡವಿಟ್ಟು ಆನಂತರ ಬಿಡಿಸಿಕೊಡುತ್ತೇನೆ ಎಂದು ಹೇಳುತ್ತಿದ್ದ. ಈತನ ಮಾತನ್ನ ಕೇಳಿ ಅದೆಷ್ಟೋ ಮಹಿಳೆಯರು ಚಿನ್ನಾಭರಣ ಕೊಡುತ್ತಿದ್ದರು. ಚಿನ್ನಾಭರಣ ಕೊಡುತ್ತಿದ್ದಂತೆ ನಂತರ ಮೊಬೈಲ್ ಸ್ವೀಚ್ ಆಫ್ ಮಾಡಿ, ಮಹಿಳೆಯರಿಗೆ ಕೈಗೆ ಸಿಗದೇ ಪರಾರಿಯಾಗುತ್ತಿದ್ದ.

ಇದನ್ನೂ ಓದಿ:ಮಹಿಳೆಯಿಂದ ಮೋಸ; ಫೇಸ್​ಬುಕ್​​ನಲ್ಲಿ ಲೈವ್​ ಬಂದು ವಿಷ ಕುಡಿದ ಕಾಮಿಡಿಯನ್

ಇದೇ ರೀತಿ ಸಾಕಷ್ಟು ಮಹಿಳೆಯರಿಗೆ ಆರೋಪಿ ರಂಜನ್ ಗೌಡ ಮೋಸ ಮಾಡಿದ್ದಾನೆ. ಎಷ್ಟೋ ಹೆಣ್ಣುಮಕ್ಕಳು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ದೂರು ಕೊಟ್ಟರೇ ತನ್ನ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತದೆ ಎಂದು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಮಂಡ್ಯ, ತುಮಕೂರು, ಬೆಂಗಳೂರು ಮೂಲದ ಸಾಕಷ್ಟು ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ. ಇನ್ನು ಇತ ಈ ಹಿಂದೆ ಕೂಡ ಇದೇ ರೀತಿ ಮೋಸ ಮಾಡಿ ಜೈಲು ಪಾಲಾಗಿದ್ದು, ಜೈಲಿನಿಂದ ಬಂದ ಮೇಲೂ ತನ್ನ ಚಾಳಿಯನ್ನ ಮುಂದುವರೆಸಿದ್ದ. ಇನ್ನು ಮಹಿಳೆಯರಿಂದ ಪಡೆದ ಚಿನ್ನಾಭರಣಗಳನ್ನ ಕೆಲವು ಕಡೆ ಅಡವಿಟ್ಟರೇ, ಮತ್ತಷ್ಟು ಚಿನ್ನಾಭರಣವನ್ನ ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ. ಒಟ್ಟಾರೆ ಫೇಸ್ ಬುಕ್ ಮೂಲಕ ಮಹಿಳೆಯರನ್ನ ಪರಿಚಯ ಮಾಡಿಕೊಂಡು ಮೋಸ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಇನ್ನಾದರೂ ಫೇಸ್ ಬುಕ್ ಬಳಕೆ ಮಾಡುವ ಮಹಿಳೆಯರು ಎಚ್ಚರವಹಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್