ಮೊದಲು ಮತದಾನ, ಆಮೇಲಷ್ಟೇ ತಾಳಿ ಕಟ್ಟೋದು ಅಂದ ಮದುಮಗ!
ಮಂಡ್ಯ: ಉಪಚುನಾವಣೆಯ ಮತದಾನದ ಹಿನ್ನೆಲೆ ಮದುಮಗನೊಬ್ಬ ಮದುವೆಗೆ ಮೊದಲು ಮತ ಚಲಾಯಿಸಿ ನಂತರ ವಿವಾಹ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಕೆ ಆರ್ ಪೇಟೆ ತಾಲ್ಲೂಕು ಚೌಡೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮದುಮಗ ಮುತ್ತುರಾಜ್ ಮತ ಚಲಾಯಿಸಿದ್ದಾರೆ. ಮುತ್ತುರಾಜ್ಗೆ ಹೊಸಹಳ್ಳಿಯಲ್ಲಿ ಮದುವೆ ನಿಗಧಿಯಾಗಿತ್ತು. ಮದುವೆಗೆ ಹೊರಡುವ ಮುನ್ನ ಮದುಮಗನ ವೇಶಭೂಷಣದಲ್ಲೇ ಮತ ಹಾಕಿ ನಂತರ ಮಂಟಪಕ್ಕೆ ಹೋಗಿ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಜೀವನ ದೊಡ್ಡ ಕಾರ್ಯಕ್ರಮದಲ್ಲೂ ಈ ದೇಶದ ಪ್ರಜೆಯಾಗಿ ನಿಭಾಯಿಸಬೇಕಾದ ಕರ್ತವ್ಯವನ್ನು ನಿಭಾಯಿಸಿ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ.
ಮಂಡ್ಯ: ಉಪಚುನಾವಣೆಯ ಮತದಾನದ ಹಿನ್ನೆಲೆ ಮದುಮಗನೊಬ್ಬ ಮದುವೆಗೆ ಮೊದಲು ಮತ ಚಲಾಯಿಸಿ ನಂತರ ವಿವಾಹ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಕೆ ಆರ್ ಪೇಟೆ ತಾಲ್ಲೂಕು ಚೌಡೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮದುಮಗ ಮುತ್ತುರಾಜ್ ಮತ ಚಲಾಯಿಸಿದ್ದಾರೆ. ಮುತ್ತುರಾಜ್ಗೆ ಹೊಸಹಳ್ಳಿಯಲ್ಲಿ ಮದುವೆ ನಿಗಧಿಯಾಗಿತ್ತು.
ಮದುವೆಗೆ ಹೊರಡುವ ಮುನ್ನ ಮದುಮಗನ ವೇಶಭೂಷಣದಲ್ಲೇ ಮತ ಹಾಕಿ ನಂತರ ಮಂಟಪಕ್ಕೆ ಹೋಗಿ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಜೀವನ ದೊಡ್ಡ ಕಾರ್ಯಕ್ರಮದಲ್ಲೂ ಈ ದೇಶದ ಪ್ರಜೆಯಾಗಿ ನಿಭಾಯಿಸಬೇಕಾದ ಕರ್ತವ್ಯವನ್ನು ನಿಭಾಯಿಸಿ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ.
Published On - 2:45 pm, Thu, 5 December 19