AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ದೂರು ಮಸೀದಿಯೇ ಅಕ್ರಮ ನಿರ್ಮಾಣ? ಜಿಲ್ಲಾಧಿಕಾರಿ, ಪ್ರಧಾನಿ ಮೋದಿ ವರೆಗೂ ಹೋಗಿತ್ತು ದೂರು!

ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟಕ್ಕೆ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಲ್ಲು ತೂರಾಟ ಮಾಡಲಾಗಿದೆ ಎಂಬ ಮಸೀದಿ ಅಕ್ರಮವಾಗಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ಮಸೀದಿಯ ಅಕ್ರಮ ನಿರ್ಮಾಣ ಕುರಿತು ಜಿಲ್ಲಾಡಳಿಕ್ಕೆ ದೂರು ನೀಡಿದ್ದರು. ಮಸೀದಿ ಇದೆ ಎಂಬ ಕಾರಣಕ್ಕೆ ಹಲವು ನಿರ್ಬಂಧಗಳನ್ನು ಹಾಕಿ ಸಮಸ್ಯೆ ಮಾಡುತ್ತಿದ್ದಾರೆ ಎಂದೂ ಸ್ಥಳೀಯರು ಆರೋಪಿಸಿದ್ದಾರೆ.

ಮದ್ದೂರು ಮಸೀದಿಯೇ ಅಕ್ರಮ ನಿರ್ಮಾಣ? ಜಿಲ್ಲಾಧಿಕಾರಿ, ಪ್ರಧಾನಿ ಮೋದಿ ವರೆಗೂ ಹೋಗಿತ್ತು ದೂರು!
ಮಸೀದಿ ಅಕ್ರಮ ನಿರ್ಮಾಣದ ಬಗ್ಗೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಬರೆದಿದ್ದ ಪತ್ರ
ದಿಲೀಪ್​, ಚೌಡಹಳ್ಳಿ
| Edited By: |

Updated on: Sep 10, 2025 | 11:23 AM

Share

ಮಂಡ್ಯ, ಸೆಪ್ಟೆಂಬರ್ 10: ಮಂಡ್ಯ (Mandya) ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಇದೀಗ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿತ್ತು ಎಂಬ ಆರೋಪದ ಕಾರಣ, ಪ್ರಕರಣ ರಾಜಕೀಯವಾಗಿಯೂ ಬಹಳಷ್ಟು ಸದ್ದು ಮಾಡುತ್ತಿದೆ. ಇದೀಗ, ಮದ್ದೂರಿನ ಚನ್ನೆಗೌಡ ಬಡಾವಣೆ ಬಳಿ ಇರುವ ಆ ಮಸೀದಿಯೇ ಅಕ್ರಮ ನಿರ್ಮಾಣ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಮಸೀದಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೂ ಪತ್ರ ಬರೆದು ದೂರು ನೀಡಿದ್ದರು ಎಂಬುದು ತಿಳಿದುಬಂದಿದೆ.

ಮಸೀದಿ ಎದುರು ದೇವರ ಉತ್ಸವ, ಮೆರವಣಿಗೆಗಳಿಗೆ ನಿರ್ಬಂಧ

ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಮುಂದೆ ದೇವರ ಉತ್ಸವ, ಮೆರವಣಿಗೆಗಳು ಹಾದುಹೋಗಬಾರದೆಂಬ ನಿರ್ಬಂಧ ಹೇರಲಾಗಿದೆ. ಸತ್ತ ಹಿಂದೂಗಳ ಶವದ ಮುಂದೆ ತಮಟೆಯನ್ನೂ ಇಲ್ಲಿ ಬಾರಿಸದಂತೆ ನಿರ್ಬಂಧ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಸೀದಿಯಲ್ಲಿ ದೇಶದ್ರೋಹ ಚಟುವಟಿಕೆ: ಸ್ಥಳೀಯರ ಆರೋಪ

ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದ್ದು, ದೇಶದ್ರೋಹ ಚಟುವಟಿಕೆಗಳು ಕೂಡ ನಡೆಯುತ್ತಿವೆ. ಅಪರಿಚಿತ ವ್ಯಕ್ತಿಗಳು ರಾತ್ರಿ ಸಮಯ ಓಡಾಡುತ್ತಿದ್ದಾರೆ. ಅಕ್ರಮ ಹಣಕಾಸು ವಹಿವಾಟು ಕೂಡ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಸ್ಥಳೀಯರು ಉಲ್ಲೇಖಿಸಿದ್ದರು ಎನ್ನಲಾಗಿದೆ.

ಈ ಮಸೀದಿ 2025 ರ ಜೂನ್ ತಿಂಗಳಲ್ಲಿ ಉದ್ಘಾಟನೆಯಾಗಿತ್ತು. ಮಸೀದಿ ನಿರ್ಮಾಣ ಸಂದರ್ಭದಲ್ಲೇ, ಅಕ್ರಮವಾಗಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆಡಳಿತವನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಆದಾಗ್ಯೂ, ಮಸೀದಿ ನಿರ್ಮಾಣವಾಗಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಇದನ್ನೂ ಓದಿ: ಮಂಡ್ಯ: ಮದ್ದೂರು ಕಲ್ಲು ತೂರಾಟದ ಕಿಂಗ್​ಪಿನ್ ಯಾರು? ಕೊನೆಗೂ ಮಾಹಿತಿ ಬಹಿರಂಗ

ಮಂಡ್ಯದ ಮದ್ದೂರಿನ ಚನ್ನೆಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ ಕಲ್ಲು ತೂರಾಟ ನಡೆದಿತ್ತು. ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಲಾಗಿತ್ತು. ಮಸೀದಿಯಿಂದಲೇ ಕಲ್ಲು ತೂರಾಟ ನಡೆದಿದೆ ಎಂದು ಹಿಂದೂಗಳು ಆರೋಪಿಸಿದ್ದರು. ಘಟನೆ ಖಂಡಿಸಿ ಸೋಮವಾರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಸದ್ಯ, ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಪ್ರತಿಪಕ್ಷ ಬಿಜೆಪಿ ನಿಯೋಗ ಇಂದು ಮದ್ದೂರಿಗೆ ಭೇಟಿ ನೀಡುತ್ತಿದೆ. ಮತ್ತೊಂದೆಡೆ, ಪ್ರತಿಪಕ್ಷಗಳು ಘಟನೆಯನ್ನು ಕೋಮು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದಿಲೀಪ್​, ಚೌಡಹಳ್ಳಿ
ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ