AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲದ ಚಿಕ್ಕಗೋಪುರ ನಾಮ ವಿವಾದ ಇತ್ಯರ್ಥ

ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಚಿಕ್ಕಗೋಪುರದ ಮೇಲೆ ಪರಕಾಲ ಮಠದ ಪ್ರಭಾವದಿಂದ ಹಾಕಲಾಗಿದ್ದ ವಡಗಲೆ ನಾಮವನ್ನು ಗರುವಾರ ಸಂಜೆ ತೆರವುಗೊಳಿಸಲಾಗಿದೆ. ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ಆದೇಶದಂತೆ ತೆಂಗಲೆ ನಾಮ ಅಳವಡಿಸಲಾಗಿದೆ.

ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲದ ಚಿಕ್ಕಗೋಪುರ ನಾಮ ವಿವಾದ ಇತ್ಯರ್ಥ
ನಾಮ ಅಳವಡಿಕೆ
ಪ್ರಶಾಂತ್​ ಬಿ.
| Edited By: |

Updated on: Jan 26, 2024 | 2:01 PM

Share

ಮಂಡ್ಯ, ಜನವರಿ 26: ಪಾಂಡವಪುರ (Pandavapur) ತಾಲೂಕಿನ ಮೇಲುಕೋಟೆ (Melakote) ಶ್ರೀ ಯೋಗಾನರಸಿಂಹಸ್ವಾಮಿ (Yoganarasimhaswamy) ದೇವಾಲಯದ ಚಿಕ್ಕಗೋಪುರಕ್ಕೆ ಗುರುವಾರ ಸಂಜೆ ತೆಂಗಲೆನಾಮ ಹಾಕಲಾಗಿದೆ. ಇದರಿಂದ 52 ವರ್ಷಗಳ ವಿವಾದ ತಾರ್ಕಿಕ ಅಂತ್ಯ ಕಂಡಿದೆ.

ಯೋಗಾನರಸಿಂಹಸ್ವಾಮಿ ದೇಗುಲದ ಚಿಕ್ಕಗೋಪುರದ ಜೀರ್ಣೋದ್ಧಾರದ ವೇಳೆ ತಹಶೀಲ್ದಾರ್ ಆದೇಶದಂತೆ ತೆಂಗಲೆನಾಮ ತೆಗೆದು ವಡಗಲೆ ನಾಮ ಹಾಕಲಾಗಿತ್ತು. ಚಿಕ್ಕಗೋಪುರಕ್ಕೆ ವಡಗಲೆ ನಾಮ ಹಾಕಿದ ವಿವಾದದ ಪ್ರಕರಣ 1973ರಲ್ಲಿ ಕೋರ್ಟ ಮೆಟ್ಟಿಲೇರಿತು. ಪಾಂಡವಪುರ ಕಿರಿಯ ಸಿವಿಲ್ ನ್ಯಾಯಾಲಯ 2001ರಲ್ಲಿ ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲ ತೆಂಗಲೆ ಸಂಪ್ರದಾಯಕ್ಕೆ ಸೇರಿದ್ದು ಎಂದು ತೀರ್ಪು ನೀಡಿತು. ಆದರೆ ಚಿಕ್ಕಗೋಪುರದ ವಡಕಲೆ ನಾಮ ತೆರವಿಗೆ ಆದೇಶ ನೀಡಿರಲಿಲ್ಲ.

ಹೀಗಾಗಿ 2002ರಲ್ಲಿ ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಜೆಎಂಎಫ್​ಸಿ ನ್ಯಾಯಾಲಯವು 22 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿ ಹಾಗೂ ದಾಖಲೆಗಳ ಪರಿಶೀಲನೆಯ ನಂತರ 29 ಪುಟಗಳ ತೀರ್ಪು ನೀಡಿ ವಡಗಲೆ ನಾಮ ತೆಗೆದು ಚಿಕ್ಕಗೋಪುರಕ್ಕೆ ತೆಂಗಲೆ ನಾಮ ಅಳವಡಿಸುವಂತೆ ಆದೇಶ ನೀಡಿದೆ.

ಜೆಎಂಎಫ್​ ಸಿವಿಲ್​ ನ್ಯಾಯಾಲಯದ ಆದೇಶದಂತೆ ಧಾರ್ಮಿಕದತ್ತಿ ಆಯುಕ್ತರು ಗುರುವಾರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪಾರುಪತ್ತೇಗಾರ ಶ್ರೀಧರ್, ಅಧ್ಯಾಪಕರಾದ ಶ್ರೀರಂಗಂಶಲ್ವನಾರಾಯಣನ್, ವಿದ್ವಾನ್ ಆನಂದಾಳ್ವಾನ್ ಸಮಕ್ಷಮದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯದ ಒಳಭಾಗದ ಚಿಕ್ಕಗೋಪುರದ ಮೇಲಿದ್ದ ವಡಗಲೆ ನಾಮವನ್ನು ತೆಗೆದು ತೆಂಗಲೆ ನಾಮವನ್ನು ಅಳವಡಿಸಿದ್ದಾರೆ.

ಇದನ್ನೂ ಓದಿ: ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ 14 ಎಕರೆ ಭೂಮಿ ಅಕ್ರಮವಾಗಿ ಪರಭಾರೆ ಆರೋಪ

ವಿವಾದವೇನು

ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಾಲಯ ನಾಮದ ವಿವಾದಕ್ಕೆ ಮೈಸೂರಿನ ಮಹಾರಾಜ ಶ್ರೀಕೃಷ್ಣರಾಜ ಒಡೆಯರರು ತೆರೆ ಎಳೆದಿದ್ದರು. 5-9-1814ರಲ್ಲಿ ಹುಜೂರ್ ಹೊರಡಿಸಿ ದೇವಾಲಯ ತೆಂಗಲೆ ಸಂಪ್ರದಾಯವಾಗಿದ್ದು ದೇವರಿಗೆ ಮತ್ತು ಗೋಪುರಕ್ಕೆ ತೆಂಗಲೆ ನಾಮ ಹಾಕಬೇಕು ಎಂದು ಆದೇಶ ಹೊರಡಿಸಿದ್ದರು.

ಆದರೆ 1972ರಲ್ಲಿ ಕಲ್ಕತ್ತ ವಿಷ್ಣುದೇವಾಲಯಗಳ ಜೀರ್ಣೋದ್ಧಾರ ಟ್ಟಸ್ ಯೋಗನರಸಿಂಹನ ಬೆಟ್ಟದ ಜೀರ್ಣೋದ್ಧಾರ ಮಾಡುವ ವೇಳೆ ಪರಕಾಲಮಠದ ಪ್ರಭಾವದಿಂದ ಪಾಂಡವಪುರ ತಹಶೀಲ್ದಾರ್ 30-12-72 ರಂದು ಗೋಪುರಗಳಿಗೆ ವಡಗಲೆ ನಾಮಹಾಕಿಸಿದ್ದರು. ಇದನ್ನು ಪ್ರಶ್ನಿಸಿದ್ದ ತೆಂಗಲೆ ಸಂಪ್ರದಾಯದ ಆರ್.ಕೃಷ್ಣಯ್ಯಂಗಾರ್, ಅಳಹಿಯಮನವಾಳನ್, ಹಾಗೂ ಅಧ್ಯಾಪಕರು ನಿಯಮಬಾಹಿರವಾದ ತಹಶೀಲ್ದಾರ್ ಆದೇಶ ರದ್ದು ಮಾಡಿ ತೆಂಗಲೆ ನಾಮ ಅಳವಡಿಸಬೇಕು ಎಂದು 1973ರಲ್ಲಿ ಹೈಕೋರ್ಟ ಮೊರೆ ಹೋಗಿದ್ದರು. ಹೈಕೋರ್ಟ ಸಿವಿಲ್ ಕೋರ್ಟ್ ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಆದೇಶನೀಡಿತ್ತು.

ಅರ್ಜಿದಾರರು 1973ರಲ್ಲಿ ಹೈಕೋರ್ಟ್ ಆದೇಶದಂತೆ ಪಾಂಡವಪುರ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಮೊರೆ ಹೋದರೆ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯ ಸಮಗ್ರವಾಗಿ ವಿಚಾರಣೆ ನಡೆಸಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದ ಯೋಗನರಸಿಂಹಸ್ವಾಮಿ ದೇವಾಲಯಗಳು ತೆಗಲೆ ಸಂಪ್ರದಾಯಕ್ಕೆ ಸೇರಿವೆ ಎಂದು 2001ರಲ್ಲಿ ತೀರ್ಪು ನೀಡಿತು. ಆದರೆ ಯೋಗನರಸಿಂಹಸ್ವಾಮಿ ಬೆಟ್ಟದ ಚಿಕ್ಕ ಗೋಪುರದಲ್ಲಿದ್ದ ವಡಗಲೆ ನಾಮ ತೆಗೆಯಲು ಅವಕಾಶ ನೀಡಲಿಲ್ಲ.

ಕಿರಿಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಅರ್ಜಿದಾರರು 2002ರಲ್ಲಿ ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಜೆಎಂಎಪ್ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಿದ್ದರು. ಹಿರಿಯ ಶ್ರೇಣಿಯ ನ್ಯಾಯಾಲಯ 22 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿ ಚಿಕ್ಕಗೋಪುರದ ಮೇಲೆ ಅಳವಡಿಸಿದ್ದ ವಡಗಲೆನಾಮ ತೆಗೆದು ಹಳೆಯ ಸಂಪ್ರದಾಯದ ತೆಂಗಲೆ ನಾಮ ಹಾಕಬೇಕು ಆದೇಶ ನೀಡಿದೆ. ಇದರಿಂದಾಗಿ 5 ದಶಕಗಳ ಚಿಕ್ಕಗೋಪುರದ ನಾಮದ ವಿವಾದ ತಾರ್ಕಿಕ ಅಂತ್ಯ ಕಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್