KRS ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಸಾವು, ರಜೆ ಮೋಜು-ಮಸ್ತಿಗೆ ಬಂದವರು ದುರಂತ ಅಂತ್ಯ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕೆಆರ್​ಎಸ್​ ಹಿನ್ನೀರಿನಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಭಾನುವಾರದ ರಜೆ ಮೋಜು ಮಸ್ತಿಗೆ ಬಂದು ದುರಂತ ಅಂತ್ಯಕಂಡಿದ್ದಾರೆ.

KRS ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಸಾವು, ರಜೆ ಮೋಜು-ಮಸ್ತಿಗೆ ಬಂದವರು ದುರಂತ ಅಂತ್ಯ
ಕೆಆರ್​ಎಸ್ ಹಿನ್ನೀರು
Follow us
| Edited By: ರಮೇಶ್ ಬಿ. ಜವಳಗೇರಾ

Updated on:Nov 19, 2023 | 2:55 PM

ಮಂಡ್ಯ, (ನವೆಂಬರ್ 19): ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕೆಆರ್​ಎಸ್​ ಹಿನ್ನೀರಿನಲ್ಲಿ (KRS Back Water) ಮುಳುಗಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಹರೀಶ್, ನಂಜುಂಡ ಹಾಗೂ ಜ್ಯೋತಿ ಮೃತ ದುರ್ದೈವಿಗಳು. ಮೂವರು ಮೈಸೂರಿನ ಕಾರುಣ್ಯ ಟ್ರಸ್ಟ್ ಸಿಬ್ಬಂದಿಗಳು ಎಂದು ತಿಳಿದುಬಂದಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ 25 ಮಂದಿ ಸಿಬ್ಬಂದಿ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕೆಆರ್​ಎಸ್​ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿ ಮೃತಪಟ್ಟಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಮೂವರ ಪೈಕಿ ಇಬ್ಬರು ಮೃತದೇಹ ಹೊರಗೆ ತೆಗೆದಿದ್ದು, ಮತ್ತೊಬ್ಬನ ಮೃದದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಇವರು ಮೈಸೂರಿನಿಂದ ಪ್ರವಾಸಕ್ಕೆ ಬಂದಿದ್ದರು. ಎನ್‌ಜಿಒ ಕಡೆಯಿಂದ 20ಕ್ಕೂ ಹೆಚ್ಚು ಜನರು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕೆಲವರು ಹಿನ್ನೀರಿನಲ್ಲಿ ನೀರಿಗೆ ಇಳಿದಿದ್ದಾರೆ. ಕೆಲವರು ಈಜುತ್ತಿದ್ದರು. ಆಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:40 pm, Sun, 19 November 23

ತಾಜಾ ಸುದ್ದಿ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?