ದೇವರಾಜೇಗೌಡ ಬಂಧನದ ಸುತ್ತ ಹಲವು ಅನುಮಾನ: ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ?

ಏಪ್ರಿಲ್​​​​ 1ರಂದು ದಾಖಲಾಕಿದ್ದ ಎಫ್​ಐಆರ್​​ನಲ್ಲಿ ಈವರೆಗೆ ಸಮಸ್ಯೆಗೆ ಸಿಲುಕದಿದ್ದ ದೇವರಾಜೇಗೌಡರಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಹಳೆಯ ಕೇಸ್​​​ನಲ್ಲಿ ಪೊಲೀಸರು ಅವರನ್ನು ಈಗ ಬಂಧಿಸಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದ ದಿನಾಂಕವನ್ನೂ ಗಮನಿಸಬೇಕು. ವಿವರಗಳಿಗೆ ಮುಂದೆ ಓದಿ.

ದೇವರಾಜೇಗೌಡ ಬಂಧನದ ಸುತ್ತ ಹಲವು ಅನುಮಾನ: ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ?
ದೇವರಾಜೇಗೌಡ ಬಂಧನದ ಸುತ್ತ ಹಲವು ಅನುಮಾನ
Follow us
Ganapathi Sharma
|

Updated on:May 11, 2024 | 11:28 AM

ಬೆಂಗಳೂರು, ಮೇ 11: ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ (Devaraje Gowda) ಬಂಧನ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇವರಾಜೇಗೌಡರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 1ರಂದೇ ಎಫ್​ಐಆರ್​​ ದಾಖಲಾಗಿತ್ತು. ಹಾಗಾದರೆ ಇಷ್ಟು ದಿನ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಎಫ್​ಐಆರ್​​ನಲ್ಲೇನಿದೆ?

ಸಂತ್ರಸ್ತೆಯು ಏಪ್ರಿಲ್ 1ರಂದು ರಾತ್ರಿ 9.30ಕ್ಕೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಸಂತ್ರಸ್ತೆಯು ಹಾಸನದ ತಣ್ಣೀರುಹಳ್ಳಿ, ನಿಲವಾಗಿಲು ರಸ್ತೆಯಲ್ಲಿರುವ 30*40 ಸೈಟ್ ಮಾರಾಟ ಮಾಡುವ ವಿಚಾರವಾಗಿ ಆರೋಪಿಯಾದ ಹೊಳೆನರಸೀಪುರ ತಾಲೋಕ್ ಕಾಮಸಮುದ್ರ ಗ್ರಾಮದ ದೇವರಾಜೇಗೌಡರವರ ಜತೆ ಈಗೆ, 10 ತಿಂಗಳ ಹಿಂದೆ ಪರಿಚಯವಾಗಿ ಅಗಾಗ ಪೋನ್ ಮಾಡುತ್ತಾ ಬಂದಿದ್ದಾರೆ. ಸಂತ್ರಸ್ತೆಯ ಪತಿ ಹೊಳೇನರಸೀಪುರದಲ್ಲಿ ಸೈಟ್ ಹೊಂದಿದ್ದಾರೆ. ಈ ಸೈಟ್​​ಗೆ ನಾನೇ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಂತ್ರಸ್ತೆಗೆ ಹೇಳಿದ್ದ ದೇವರಾಜೇಗೌಡರು, ಎಸಿ ಸಾಹೇಬರು ನನಗೆ ಪರಿಚಯವಿರುತ್ತಾರೆ. ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ. ನೀವು ಒಬ್ಬರೇ ಹಾಸನಕ್ಕೆ ಬನ್ನಿ ಎಂದು ಕರೆಸಿಕೊಂಡು ಇನೋವಾ ಕಾರಿನಲಿ ಹಾಸನದಲ್ಲಿ, ನಾಲೈದು ಕಡೆ ಸುತ್ತಾಡಿಸಿ ನಂತರ ಹಾಸನ, ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕ ಘಟಕದ ಹಿಂದಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪಿರ್ಯಾದಿಯವರ ಮೈಕೈಗೆ ಮುಟ್ಟಿ ದೈಹಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ, ದೇವರಾಜೇಗೌಡರವರು ಸಂತ್ರಸ್ತೆಯನ್ನು ಬಲವಂತದಿಂದ ದೈಹಿಕವಾಗಿ ಬಳಸಿಕೊಂಡಿದ್ದಲ್ಲದೆ ಈಗ್ಗೆ 2 ತಿಂಗಳ ಹಿಂದೆ ವಾಟ್ಸಪ್​​​ನಲ್ಲಿ, ಖಾಸಗಿ ಅಂಗವನ್ನು ತೋರಿಸಿರುತ್ತಾರೆ. ನಾನು ಹೇಳಿದ ಹಾಗೆ ನೀನು ಕೇಳಬೇಕು, ನಾನು ಕರೆದ ಕಡೆ ನೀನು ಬರಬೇಕು, ನಾನು ಹೇಳಿದ ಹಾಗೆ ಮಾಡದಿದ್ದರೆ ನಿನ್ನ ಗಂಡನನ್ನು ಇಲ್ಲದ ಹಾಗೆ ಮಾಡುತ್ತೇನೆಂದು ಹೆದರಿಸಿ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಬಂದು ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿರುತ್ತಾನೆ. ನಂತರ ಫೆಬ್ರವರಿ 2ರಂದು ಸಂತ್ರಸ್ತೆಗೆ ಕರೆ ಮಾಡಿ, ‘ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲವೆಂದರೆ ನಾನು ನಿನಗೆ ಕಳುಹಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆಂದು’ ಗದರಿಸಿದ್ದಾನೆ ಎಂದು ಎಫ್​ಐಆರ್​​ನಲ್ಲಿದೆ.

ಬಲವಾದ ಆರೋಪವಿದ್ದರೂ ಬಂಧಿಸಿಲ್ಲ ಯಾಕೆ?

ದೇವರಾಜೇಗೌಡ ಇಷ್ಟೊಂದು ಬಲವಾದ ಆರೋಪಗಳಿದ್ದರೂ, ಏಪ್ರಿಲ್ 1ರಂದೇ ಎಫ್​ಐಆರ್​​ ದಾಖಲಾಗಿದ್ದರೂ ಮೇ 10ರ ತನಕ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಈಗ ಮೂಡಿದೆ. ಯಾಕೆಂದರೆ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ, ಬ್ಲ್ಯಾಕ್​ಮೇಲ್ ಮಾಡಿದ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪ ಅವರ ಮೇಲಿದೆ.

ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ?

ಏಪ್ರಿಲ್​​​​ 1ರಂದು ದಾಖಲಾಕಿದ್ದ ಎಫ್​ಐಆರ್​​ನಲ್ಲಿ ಈವರೆಗೆ ಸಮಸ್ಯೆಗೆ ಸಿಲುಕದಿದ್ದ ದೇವರಾಜೇಗೌಡರಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಹಳೆಯ ಕೇಸ್​​​ನಲ್ಲಿ ಪೊಲೀಸರು ಅವರನ್ನು ಈಗ ಬಂಧಿಸಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದ ದಿನಾಂಕವನ್ನೂ ಗಮನಿಸಬೇಕು.

ಡಿಕೆಶಿ ವಿರುದ್ಧ ಆರೋಪ ಮಾಡಿದ ನಂತರ ನಿರೀಕ್ಷಾಣಾ ಜಾಮೀನಿಗೆ ಅರ್ಜಿ!

ಮಹಿಳೆ ಮೇಲಿನ ದೌರ್ಜನ್ಯ ಆರೋಪದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ದೇವರಾಜೇಗೌಡ ಮೇ 8ರಂದು ಹಾಸನದ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 15 ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿತ್ತು. ಅಂದರೆ, ಪ್ರಜ್ವಲ್ ವಿಚಾರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ ನಂತರ ದೇವರಾಜೇಗೌಡ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಮತ್ತೊಂದೆಡೆ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರವಾಗಿ ಡಿಕೆ ಶಿವಕುಮಾರ್ ಜತೆಗೆ ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡುವ ವಿಚಾರವಾಗಿ ತಮಗೆ ಹಲವು ಆಫರ್​ಗಳನ್ನೂ ಡಿಕೆ ಶಿವಕುಮಾರ್ ಕಡೆಯಿಂದ ನೀಡಲಾಗಿತ್ತು ಎಂದೂ ಕೆಲವು ದಿನಗಳ ಹಿಂದೆ ಆರೋಸಿದ್ದರು. ಈ ಎಲ್ಲ ಬೆಳವಣಿಗೆಗಳಾದ ಬೆನ್ನಲ್ಲೇ ಅವರಿಗೆ ಬಂಧನದ ಸುಳಿವು ದೊರೆತಿರಬೇಕು. ಹೀಗಾಗಿ ಅವರು ಹಾಸನದಿಂದ ಬೇರೆಡೆಗೆ ಪಲಾಯನಗೈಯಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಹಿರಿಯೂರಿನಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್: ಬಿಜೆಪಿ ಮುಖಂಡ, ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ

ಹೀಗಾಗಿ ದೇವರಾಜೇಗೌಡ ಬಂಧನದ ಒಟ್ಟು ಪ್ರಕರಣದಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿವೆ. ದೇವರಾಜೇಗೌಡ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆದಿತ್ತು ಎನ್ನಲಾದ ಮಾತುಕತೆ ನಿಜ ಇರಬಹುದೇ? ಅದು ವಿಫಲವಾದ ನಂತರ ಡಿಸಿಎಂ ವಿರುದ್ಧ ದೇವರಾಜೇಗೌಡ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದರೇ? ಇದೇ ಕಾರಣಕ್ಕೆ ಅವರ ಬಂಧನವಾಯಿತೇ ಎಂಬ ಪ್ರಶ್ನೆಗಳು ಸದ್ಯ ಬಲವಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sat, 11 May 24

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು