AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣದಿಂದ ಹಿಂದೆಸರಿಯದಿದ್ರೆ ಕ್ರಮ, ಶರತ್ ಬಚ್ಚೇಗೌಡಗೆ ಅಶೋಕ್ ವಾರ್ನಿಂಗ್

ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಶರತ್ ಬಚ್ಚೇಗೌಡಗೆ ನಾಮಪತ್ರ ವಾಪಸ್​ ಪಡೆಯೋವರೆಗೂ ಗಡುವು ನೀಡುವುತ್ತೇನೆ. ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯದ ಬಳಿಕ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ. ಸೋಮವಾರ ಹೊಸಕೋಟೆ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಶರತ್ ಬಚ್ಚೇಗೌಡರನ್ನ ಕರೆದು 4 ಬಾರಿ ಮಾತಾಡಿದ್ದೇನೆ. ಸಿಎಂ ಯಡಿಯೂರಪ್ಪನವರೂ ಶರತ್ ಬಚ್ಚೇಗೌಡ ಜತೆ ಮಾತನಾಡಿದ್ದಾರೆ. ಇನ್ನು, ಪಕ್ಷದ ಸಂಸದ ಬಿ.ಎನ್​.ಬಚ್ಚೇಗೌಡ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಚಿವ […]

ಕಣದಿಂದ ಹಿಂದೆಸರಿಯದಿದ್ರೆ ಕ್ರಮ, ಶರತ್ ಬಚ್ಚೇಗೌಡಗೆ ಅಶೋಕ್ ವಾರ್ನಿಂಗ್
Follow us
ಸಾಧು ಶ್ರೀನಾಥ್​
|

Updated on: Nov 16, 2019 | 6:55 PM

ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಶರತ್ ಬಚ್ಚೇಗೌಡಗೆ ನಾಮಪತ್ರ ವಾಪಸ್​ ಪಡೆಯೋವರೆಗೂ ಗಡುವು ನೀಡುವುತ್ತೇನೆ. ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯದ ಬಳಿಕ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ. ಸೋಮವಾರ ಹೊಸಕೋಟೆ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಶರತ್ ಬಚ್ಚೇಗೌಡರನ್ನ ಕರೆದು 4 ಬಾರಿ ಮಾತಾಡಿದ್ದೇನೆ. ಸಿಎಂ ಯಡಿಯೂರಪ್ಪನವರೂ ಶರತ್ ಬಚ್ಚೇಗೌಡ ಜತೆ ಮಾತನಾಡಿದ್ದಾರೆ. ಇನ್ನು, ಪಕ್ಷದ ಸಂಸದ ಬಿ.ಎನ್​.ಬಚ್ಚೇಗೌಡ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಚಿವ ಅಶೋಕ್​ ಅಸಮಾಧಾನ ವ್ಯಕ್ತಪಡಿಸಿದರು.

ಹೊಸಕೋಟೆ ಬಿಟ್ಟರೆ ನಮಗೆ ಬೇರೆ ಎಲ್ಲೂ ತೊಂದರೆ ಇಲ್ಲ. ಯಶವಂತಪುರ, ಕೆ.ಆರ್​. ಪುರಂನಲ್ಲಿ ಹೆಚ್ಚು ಅಂತರದ ಗೆಲುವು ಸಾಧಿಸುತ್ತೇವೆ. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಅಶೋಕ್​ ವಿಶ್ವಾಸ ವ್ಯಕ್ತಪಡಿಸಿದರು.