ಗಂಡನನ್ನು ಬಿಟ್ಟು ಬಂದವಳಿಗೆ ಮಚ್ಚಿನಿಂದ ಕೊಚ್ಚಿಕೊಂದ ಪ್ರಿಯಕರ..

ಮನೆ ಬಿಟ್ಟು ಹೊಗ್ತೀನಿ ಎಂದು ಕಿರಣ್ ಜೊತೆ ಪ್ರೀತಿ‌ ಜಗಳ ಮಾಡಿಕೊಂಡಿದ್ದಾಳೆ. ಈ ವೇಳೆ ಕೋಪಗೊಂಡ ಕಿರಣ್ ಪ್ರೀತಿಯನ್ನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಜನರ ಸಮ್ಮಖದಲ್ಲೇ ಪ್ರೀತಿಯನ್ನು ಮನೆ ಒಳಗೆ ಎಳೆದುಕೊಂಡು ಬಂದು ಮಚ್ಚಿನಿಂದ ತಲೆ, ಕೈ, ಹೊಟ್ಟೆ ಭಾಗಕ್ಕೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ.

ಗಂಡನನ್ನು ಬಿಟ್ಟು ಬಂದವಳಿಗೆ ಮಚ್ಚಿನಿಂದ ಕೊಚ್ಚಿಕೊಂದ ಪ್ರಿಯಕರ..
ಆರೋಪಿ ಕಿರಣ್ ಮತ್ತು ಮೃತ ಪ್ರೀತಿಕುಮಾರಿ


ಮೈಸೂರು: ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಹೋದ ಮಹಿಳೆ ಮಚ್ಚಿನೇಟಿಗೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೆಳವಾಡಿಯಲ್ಲಿ ನಡೆದಿದೆ. ಪ್ರೀತಿಕುಮಾರಿ(25) ಹತ್ಯೆಯಾದ ಮಹಿಳೆ. ಕ್ಯಾತನಹಳ್ಳಿಯ ಪ್ರೀತಿಕುಮಾರಿಯನ್ನು ಆರೋಪಿ ಕಿರಣ್ ಹತ್ಯೆಗೈದಿದ್ದಾನೆ. ಸದ್ಯ ಆರೋಪಿಯನ್ನು ವಿಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿಯ ಪ್ರೀತಿಕುಮಾರಿಗೆ ಮೂರು ಜನ ಮಕ್ಕಳಿದ್ದಾರೆ. ಈಕೆ ಅಗ್ನಿಸಾಕ್ಷಿಯಾಗಿ ಮದುವೆಯಾಗಿದ್ದ ತನ್ನ ಗಂಡನನ್ನು ಬಿಟ್ಟು ಅತ್ತೆ ಮಗ ಕಿರಣ್ ಜತೆಗೆ ವಾಸವಿದ್ದಳು. ಆದ್ರೆ ಕಿರಣ್ ಕೂಡ ಕಿರುಕುಳ ನೀಡುತ್ತಿದ್ದ. ಹೀಗಾಗಿ ಮನೆ ಬಿಟ್ಟು ಹೊಗ್ತೀನಿ ಎಂದು ಕಿರಣ್ ಜೊತೆ ಪ್ರೀತಿ‌ ಜಗಳ ಮಾಡಿಕೊಂಡಿದ್ದಾಳೆ.

ಈ ವೇಳೆ ಕೋಪಗೊಂಡ ಕಿರಣ್ ಪ್ರೀತಿಯನ್ನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಜನರ ಸಮ್ಮಖದಲ್ಲೇ ಪ್ರೀತಿಯನ್ನು ಮನೆ ಒಳಗೆ ಎಳೆದುಕೊಂಡು ಬಂದು ಮಚ್ಚಿನಿಂದ ತಲೆ, ಕೈ, ಹೊಟ್ಟೆ ಭಾಗಕ್ಕೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಇದಾದ ಬಳಿಕ ಸ್ಥಳೀಯರು ಪರಿಸ್ಥಿತಿ ತಿಳಿಯುತ್ತಿದ್ದಂತೆ ತಕ್ಷಣ ಪ್ರೀತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ಪ್ರೀತಿ ಮೃತಪಟ್ಟಿದ್ದಾರೆ.

ಸದ್ಯ ಇಂತಹ ಭಯಾನಕ ಕೃತ್ಯ ಎಸಗಿದ ಆರೋಪಿಯನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಇರಲು ಬಂದವಳು ಈಗ ಮಚ್ಚಿನೇಟಿಗೆ ಬಲಿಯಾಗಿದ್ದು ಮೂರು ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿವೆ.

ಇದನ್ನೂ ಓದಿ: ಮದ್ವೆಯಾಗಿದ್ರೂ ಪರಪುರುಷನ ಜತೆ ಲವ್ವಿಡವ್ವಿ.. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಪ್ರಿಯಕರನ ಕೈಯಿಂದಲೇ ಕೊಲೆ


Click on your DTH Provider to Add TV9 Kannada