AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಸಿಡಿಪಿಓ, ಎಸ್ಓಪಿ, ಡಿಡಿ ಹೆಸರು ಬರೆದಿಟ್ಟು ವಿಷ ಸೇವಿಸಿದ ಅಂಗನವಾಡಿ ಕಾರ್ಯಕರ್ತೆ!

ಗೌರವದಧನ ಸಭೆ, ವೃತ್ತ ಸಭೆಯಲ್ಲಿ ನನಗೆ ಅವಮಾನ ಮಾಡಿದ್ದಾರೆ. ನನಗೆ ಇವರು ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ನಾನು ಮನನೊಂದ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿದ್ದೇನೆ ಅಂತ ಅಧಿಕಾರಿಗಳ ವಿರುದ್ಧ ಡೆತ್ ನೋಟ್​ ಬರೆದಿಟ್ಟಿದ್ಧಾರೆ.

ಮೈಸೂರು ಸಿಡಿಪಿಓ, ಎಸ್ಓಪಿ, ಡಿಡಿ ಹೆಸರು ಬರೆದಿಟ್ಟು ವಿಷ ಸೇವಿಸಿದ ಅಂಗನವಾಡಿ ಕಾರ್ಯಕರ್ತೆ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 17, 2022 | 1:16 PM

Share

ಮೈಸೂರು: ಜಿಲ್ಲೆ ಸಿಡಿಪಿಓ, ಎಸ್ಓಪಿ, ಡಿಡಿ ಹೆಸರು ಬರೆದಿಟ್ಟು ಅಂಗನವಾಡಿ ಕಾರ್ಯಕರ್ತೆ ವಿಷ ಸೇವಿಸಿದ ಘಟನೆ ಮೈಸೂರು (Mysuru) ತಾಲೂಕಿನ ದೊಡ್ಡ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮತಿ ಎಂಬ ಮಹಿಳೆ ವಿಷ ಸೇವಿಸಿದ ಅಂಗನವಾಡಿ ಕಾರ್ಯಕರ್ತೆ. ಸಿಡಿಪಿಓ ಮಂಜುಳಾ ಪಾಟೀಲ್, ಎಸ್ಓಪಿ ಪಾರ್ವತಿ ನಾಯ್ಕ್, ಡಿಡಿ ಬಸವರಾಜು ವಿರುದ್ಧ ಆರೋಪ ಮಾಡಿರುವ ಸುಮತಿ, ನನಗೆ ತೊಂದರೆ ಮಾಡಿಸುತ್ತಿದ್ದಾರೆ. ನನ್ನ ಮೇಲೆ ಇವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದರಿಂದ ನಮ್ಮ ಮನೆಯಲ್ಲಿ ಅಶಾಂತಿ ಉಂಟಾಗಿದೆ ಅಂತ ಹೇಳಿದ್ದಾರೆ.

ಗೌರವದಧನ ಸಭೆ, ವೃತ್ತ ಸಭೆಯಲ್ಲಿ ನನಗೆ ಅವಮಾನ ಮಾಡಿದ್ದಾರೆ. ನನಗೆ ಇವರು ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ನಾನು ಮನನೊಂದ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿದ್ದೇನೆ ಅಂತ ಅಧಿಕಾರಿಗಳ ವಿರುದ್ಧ ಡೆತ್ ನೋಟ್​ ಬರೆದಿಟ್ಟು ಸುಮತಿ ವಿಷ ಸೇವಿಸಿದ್ದಾರೆ. ಸದ್ಯ ಕೆಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಂಪತಿ ಆತ್ಮಹತ್ಯೆ: ಮೈಸೂರು: ಹೂಟಗಳ್ಳಿ ಬಡಾವಣೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮೇಶ್, ಲತಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಕ್ಕಳಾಗದ ಕಾರಣ ಮನನೊಂದಿದ್ದ ಉಮೇಶ್ ದಂಪತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಮೇಶ್ ಮತ್ತು ಲತಾ 3 ವರ್ಷದ ಹಿಂದೆ ಮದುವೆಯಾಗಿದ್ದರು. ಉಮೇಶ್ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಮಕ್ಕಳಗಾದ ಕಾರಣ ಇಬ್ಬರು ನೊಂದಿದ್ದರು. ಪ್ರತಿದಿನ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತಂತೆ.

ಪೊಲೀಸ್ ವ್ಯಾನ್ ಹಾಗೂ ಸ್ಕೂಟರ್ ನಡುವೆ ಅಪಘಾತ: ಮೈಸೂರು ಹುಣಸೂರು ರಸ್ತೆ ಜಲದರ್ಶಿನಿ ಬಳಿ ಪೊಲೀಸ್ ವ್ಯಾನ್ ಹಾಗೂ ಸ್ಕೂಟರ್ ನಡುವೆ ಅಪಘಾತ ನಡೆದಿದೆ. ಸ್ಕೂಟರ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಡಿದ ಮತ್ತಿನಲ್ಲಿ ಪೊಲೀಸ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ದ್ವಿಚಕ್ರ ವಾಹನ ಸವಾರ ಪೊಲೀಸ್ ವಾಹನದ ಕೆಳಗೆ ಸಿಲುಕಿದ್ದ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ

ಹಾದಿಯೇ ತೋರಿದ ಹಾದಿ; ‘ರೌಡಿ ಥರಾ ಕೈಗೊಂದು ಕಡಗ ಹಾಕಿಕೊ, ಬೆಂಗಳೂರಲ್ಲಿ ಯಾರೂ ನಿನ್ನ ತಂಟೆಗೆ ಬರಲ್ಲ!’

ಕೋಲಾರ: ಕಟಾವಿಗೆ ಬಂದ 700ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣುಗಳನ್ನ ನಾಶಪಡಿಸಿದ ದುಷ್ಕರ್ಮಿಗಳು

Published On - 1:11 pm, Thu, 17 February 22

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು