ದಸರಾ ಸಮಯದಲ್ಲೇ ಮೈಸೂರಿನಲ್ಲಿ ವಿವಾದ ಎಬ್ಬಿಸಿದ ದೇವಸ್ಥಾನದ ಮೇಲಿನ ಶಿಲುಬೆ, ಮಸೀದಿ ಚಿತ್ರಗಳು!
ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ವಿವಿಧ ಕ್ರೀಡೆಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂಭ್ರಮದ ದಸರಾ ಮಧ್ಯೆ ಮೈಸೂರಿನಲ್ಲಿ ಹಿಂದೂ ದೇವಸ್ಥಾನ ಗೋಡೆ ಮೇಲಿನ ಶಿಲುಬೆ, ಮಸೀದಿ ಚಿತ್ರಗಳು ವಿವಾದ ಎಬ್ಬಿಸಿದೆ. ಕೆಂಪು ಬಣ್ಣದಲ್ಲಿ ಶಿಲುಬೆ, ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಬಿಡಿಸಲಾಗಿದ್ದು, ಇದೀಗ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು
- ದೇಗುಲದ ಆವರಣದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರಗಳು ಪತ್ತೆ
- ಮೈಸೂರು ಜಿಲ್ಲೆಯ ಕೆ.ಆರ್.ನಗರದ ಎಡತೊರೆ ಗ್ರಾಮದಲ್ಲಿರುವ ಅರ್ಕೇಶ್ವರ ದೇಗುಲದಲ್ಲಿ ಘಟನೆ
- ಕೆಂಪು ಬಣ್ಣದಲ್ಲಿ ಶಿಲುಬೆ, ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಬಿಡಿಸಿದ ಇಬ್ಬರ ಮೇಲೆ ಎಫ್ಐಆರ್ ದಾಖಲು
ಮೈಸೂರು, (ಅಕ್ಟೋಬರ್ 18): ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ದೇವಸ್ಥಾನ ಆವರಣದ ಗೋಡೆ ಮೇಲಿನ ಶಿಲುಬೆ, ಮಸೀದಿ ಚಿತ್ರಗಳು ಪತ್ತೆಯಾಗಿವೆ. ಹೌದು.. ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ದೇಗುಲ ಆವರಣದ ಗೋಡೆ ಕೆಂಪು ಬಣ್ಣದಲ್ಲಿ ಶಿಲುಬೆ, ಹಸಿರು ಬಣ್ಣದಲ್ಲಿ ಮಸೀದಿ ಚಿತ್ರಗಳನ್ನು ಬಿಡಿಸಲಾಗಿದ್ದು, ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರು ದಸರಾ ಸಂಭ್ರಮದ ಮಧ್ಯೆ ವಿವಾದ ಸೃಷ್ಟಿಸಿಯಾಗಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ, ಈ ಸಂಬಂಧ ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ದ ದೂರು ದಾಖಲಿಸಿದೆ.
ದೇಗುಲ ಗೋಡೆ ಮೇಲೆ ಶಿಲುಬೆ,ಮಸೀದಿ ಚಿತ್ರ
ಕೆ.ಆರ್.ನಗರದ ಅರ್ಕೇಶ್ವರ ದೇವಾಲಯದ ಆವರಣದ ಗೋಡೆಯ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ, ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಬಿಡಿಸಲಾಗಿದ್ದು, ಇದನ್ನು ಕಂಡ ಸ್ಥಳೀಯ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರ ಬರೆಯಲು ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದು,ಕೆಆರ್ ನಗರ ತಾಲೂಕಿನ ಪ್ರಖ್ಯಾತ ಅರ್ಕೇಶ್ವರ ದೇವಸ್ಥಾನದ ನವೀಕರಣ ನಡೆಯುತ್ತಿದ್ದು, ಅಚಾನಕ್ಕಾಗಿ ಮಸೀದಿ ಚಿತ್ರವನ್ನು ದೇವಸ್ಥಾನದ ಮೇಲೆ ಬಿಡಿಸಲಾಗಿದೆ. ಕೂಡಲೇ ತೆಗೆಯುತ್ತಿರೋ, ನಾನೇ ಬಂದು ತೆಗೆಸಬೇಕೋ? ಎಂದಿದ್ದಾರೆ. ಅಲ್ಲದೇ ಮುಸಲ್ಮಾನರನ್ನು ದೂಷಿಸಬೇಡಿ, ಇದಕ್ಕೆ ಬೆರಕೆ ಹಿಂದೂಗಳೇ ಕಾರಣ ಎಂದು ಸಮಾಜಿಕ ತಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಡಿತರ ಚೀಟಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇ-ಕೆವೈಸಿ ಕೊನೆ ದಿನಾಂಕ ಮತ್ತೆ ವಿಸ್ತರಣೆ
ಇಬ್ಬರ ವಿರುದ್ಧ ಎಫ್ಐಆರ್ ದಾಖಲು
ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆ ಆರ್ ನಗರ ತಾಲೂಕು ಎಡತೊರೆ ಗ್ರಾಮದಲ್ಲಿರುವ ದೇವಾಲಯ ತಹಶೀಲ್ದಾರ್ ಸುರೇಂದ್ರ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ದೇವಾಲಯ ಗೋಡೆ ಮೇಲೆ ಶಿಲುಬೆ,ಮಸೀದಿ ಚಿತ್ರ ಬಿಡಿಸಿರುವುದು ಕಂಡುಬಂದಿದೆ. ಹೀಗಾಗಿ ತಹಶೀಲ್ದಾರ್ ಸುರೇಂದ್ರ ಮೂರ್ತಿ ಅವರು ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ದ ದೂರು ದಾಖಲಿಸಿದ್ದು, ಈ ಸಂಬಂಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ತಾಲೂಕು ಆಡಳಿತ ಚಿತ್ರ ಬಿಡಿಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ಆದ್ರೆ, ಈ ರೀತಿಯ ಚಿತ್ರಗಳನ್ನು ಬಿಡಿಸಲು ಯಾರು ಹೇಳಿದ್ದು? ಯಾಕಾಗಿ ಈ ರೀತಿಯ ಚಿತ್ರಗಳನ್ನು ಬಿಡಿಸಲಾಗಿದೆ? ಎನ್ನುವುದು ಮಿಲಿನ್ ಡಾಲರ್ ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




