Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದ ಕೋರ್ಟ್, ಏನಿದು ಕೇಸ್?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂ ಹಂಚಿಕೆ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಚೆಕ್​ ಬೌನ್ಸ್​ ಪ್ರಕರಣದಲ್ಲಿ ಆರೋಪಿಯಾಗಿದ್ದು. ಇದೀಗ ಅವರ ಮೇಲಿನ ಆರೋಪ ಸಾಬೀತಾಗಿದೆ. ಹೀಗಾಗಿ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ, ಏನಿದು ಪ್ರಕರಣ? ಇದಕ್ಕೆ ಸ್ನೇಹಮಯಿ ಕೃಷ್ಣ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದ ಕೋರ್ಟ್, ಏನಿದು ಕೇಸ್?
Snehamayi Krishna
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on:Jan 30, 2025 | 11:05 PM

ಬೆಂಗಳೂರು, (ಜನವರಿ 30): ಚೆಕ್​ ಬೌನ್ಸ್​ ಪ್ರಕರಣದಲ್ಲಿ ಮುಡಾ ಹಗರಣದ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಶಿಕ್ಷೆಗೆ ಗುರಿಯಾಗಿದ್ದಾರೆ. ಕುಮಾ‌ರ್ ಎಂಬುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಇಂದು(ಜನವರಿ 30) ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಆರೋಪ ಸಾಬೀತಾಗಿದ್ದರಿಂದ ಕೋರ್ಟ್​ ಶಿಕ್ಷೆ ವಿಧಿಸಿದೆ. ಆದ್ರೆ, ಶಿಕ್ಷೆಯ ಪ್ರಮಾಣ ಮಾತ್ರ ಪ್ರಕಟಿಸಿಲ್ಲ.

ಪತ್ರಿಕೆ ನಡೆಸಲು ಹಾಗೂ ಗೃಹೋಪಯೋಗಕ್ಕಾಗಿ ಕುಮಾ‌ರ್ ಎಂಬುವವರಿಂದ ಕೃಷ್ಣ ಅವರು 2015ರಲ್ಲಿ 1.75 ಲಕ್ಷ ರೂ ಸಾಲ ಪಡೆದಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಕೋಅಪರೇಟಿವ್ ಬ್ಯಾಂಕ್ ಚೆಕ್ ನೀಡಿದ್ದರು. ಈ ಚೆಕ್​ಅನ್ನು ಕುಮಾರ್ ಅವರು ಬ್ಯಾಂಕ್​ಗೆ ಹಾಕಿದಾಗ ಬೌನ್ಸ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರ್ ಅವರು ಸ್ನೇಹಮಯಿ ಕೃಷ್ಣ ಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು, ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದೆ. ಆದ್ರೆ, ಶಿಕ್ಷೆ ಪ್ರಮಾಣ ಎಷ್ಟು? ಏನು ಎನ್ನುವುದು ಮಾತ್ರ ಪ್ರಕಟಿಸಿಲ್ಲ.

ಇನ್ನು ಕೋರ್ಟ್​ ಶಿಕ್ಷೆ ವಿಧಿಸಿರುವ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ನನಗೆ ಕುಮಾರ್ ಸಾಲವನ್ನೇ ನೀಡಿರಲಿಲ್ಲ. ನನಗೆ ಸಮಸ್ಯೆ ಇದ್ದ ಕಾರಣ ಸಾಲ ಕೇಳಿದ್ದೆ. ಸಾಲ ಕೊಡುವುದಾಗಿ ಹೇಳಿ ದಿನಾಂಕ‌ ನಮೂದಿಸದ ಚೆಕ್ ಪಡೆದಿದ್ದ. ನಂತರ ಸಾಲವನ್ನು ಕೊಡದೆ ಚೆಕ್‌ನ್ನು ಬ್ಯಾಂಕ್‌ಗೆ ಪ್ರೆಸೆಂಟ್ ಮಾಡಿದ್ದ. ನಂತರ ಚೆಕ್ ಬೌನ್ಸ್ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. ಈ ಸಂಬಂಧ ನನ್ನ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದೇ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ಮೂರನೇ ಹೆಚ್ಚುವರಿ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅಕ್ಟೋಬರ್‌ 1ರಂದು ಮಂಗಳವಾರ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಿತ್ತು. ಎನ್.ಕುಮಾರ್‌ ಎಂಬುವವರು 2015ರಲ್ಲಿ ರಲ್ಲಿ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದು ಅದು ಎವಿಡೆನ್ಸ್‌ ಹಂತದಲ್ಲಿದ್ದು,ಅಕ್ಟೋಬರ್‌ 1ರಂದು ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರು ಹಾಜರಾದ ಕಾರಣ ನ್ಯಾಯಾಲಯವು ಜಾಮೀನು ರಹಿತ ಬಂಧನ ಆದೇಶ ಹೊರಡಿಸಿತ್ತು. ಇದೀಗ ಆರೋಪ ಸಾಬೀತಾಗಿದ್ದರಿಂದ ಕೋರ್ಟ್​ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:55 pm, Thu, 30 January 25

ಅಪ್ಪ ಇದ್ದಿದ್ರೆ ಹೆಮ್ಮೆಪಡುತ್ತಿದ್ರು: ಕಾಶಿನಾಥ್ ಮಗನಿಗೆ ಉಪೇಂದ್ರ ಹೊಗಳಿಕೆ
ಅಪ್ಪ ಇದ್ದಿದ್ರೆ ಹೆಮ್ಮೆಪಡುತ್ತಿದ್ರು: ಕಾಶಿನಾಥ್ ಮಗನಿಗೆ ಉಪೇಂದ್ರ ಹೊಗಳಿಕೆ
ಸರ್ಕಾರ ಜಾತ್ಯಾತೀತ ಧೋರಣೆ ಹೇಗೆ ನಿಭಾಯಿಸುತ್ತದೆ ನೋಡೋಣ: ಸಿಟಿ ರವಿ
ಸರ್ಕಾರ ಜಾತ್ಯಾತೀತ ಧೋರಣೆ ಹೇಗೆ ನಿಭಾಯಿಸುತ್ತದೆ ನೋಡೋಣ: ಸಿಟಿ ರವಿ
ಶರದ್ ಪವಾರ್​​ಗೆ ಕುರ್ಚಿ ಹಾಕಿ, ನೀರು ನೀಡಿದ ಪ್ರಧಾನಿ ಮೋದಿ; ವಿಡಿಯೋ ವೈರಲ್
ಶರದ್ ಪವಾರ್​​ಗೆ ಕುರ್ಚಿ ಹಾಕಿ, ನೀರು ನೀಡಿದ ಪ್ರಧಾನಿ ಮೋದಿ; ವಿಡಿಯೋ ವೈರಲ್
ದರೋಡೆಗೆ ಹೋದಾಗ ಮಾಲೀಕ ಎದ್ದಿದ್ದನ್ನು ನೋಡಿ ಟೆರೇಸ್​ನಿಂದ ಬಿದ್ದ ಕಳ್ಳ
ದರೋಡೆಗೆ ಹೋದಾಗ ಮಾಲೀಕ ಎದ್ದಿದ್ದನ್ನು ನೋಡಿ ಟೆರೇಸ್​ನಿಂದ ಬಿದ್ದ ಕಳ್ಳ
ಸಜ್ಜನರಾಗಿ ಬದುಕುವಂತೆ ರೌಡಿಗಳಿಗೆ ಪೊಲೀಸ್ ಅಧಿಕಾರಿ ಎಚ್ಚರಿಕೆ
ಸಜ್ಜನರಾಗಿ ಬದುಕುವಂತೆ ರೌಡಿಗಳಿಗೆ ಪೊಲೀಸ್ ಅಧಿಕಾರಿ ಎಚ್ಚರಿಕೆ
ಟೋಲ್ ಪಾವತಿಸಲು ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ
ಟೋಲ್ ಪಾವತಿಸಲು ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ
ಮರಾಠಿಯಲ್ಲಿ ಟಿಕೆಟ್ ಕೇಳುತ್ತಿದ್ದ ಮಹಿಳೆಗೆ ಕನ್ನಡದಲ್ಲಿ ಅಂದಿದ್ದಕ್ಕೆ ಏಟು!
ಮರಾಠಿಯಲ್ಲಿ ಟಿಕೆಟ್ ಕೇಳುತ್ತಿದ್ದ ಮಹಿಳೆಗೆ ಕನ್ನಡದಲ್ಲಿ ಅಂದಿದ್ದಕ್ಕೆ ಏಟು!
ಗಂಗೆ ನೀರು ಕಲುಷಿತವೇ? ವಿಜ್ಞಾನಿ ಡಾ. ಅಜಯ್ ಸೋಂಕರ್ ಹೇಳಿದ್ದೇನು?
ಗಂಗೆ ನೀರು ಕಲುಷಿತವೇ? ವಿಜ್ಞಾನಿ ಡಾ. ಅಜಯ್ ಸೋಂಕರ್ ಹೇಳಿದ್ದೇನು?
ಸರ್ಕಾರದ ಧೋರಣೆಯಿಂದ ಬ್ರ್ಯಾಂಡ್ ಬೆಂಗಳೂರು ಇಮೇಜಿಗೆ ಧಕ್ಕೆ: ವಿಜಯೇಂದ್ರ
ಸರ್ಕಾರದ ಧೋರಣೆಯಿಂದ ಬ್ರ್ಯಾಂಡ್ ಬೆಂಗಳೂರು ಇಮೇಜಿಗೆ ಧಕ್ಕೆ: ವಿಜಯೇಂದ್ರ
ಬಿಡುಗಡೆ ಆಗಲಿಲ್ಲ ‘ಎದ್ದೇಳು ಮಂಜುನಾಥ 2’, ಚಿತ್ರಮಂದಿರಗಳಿಗೆ ಎಷ್ಟು ನಷ್ಟ?
ಬಿಡುಗಡೆ ಆಗಲಿಲ್ಲ ‘ಎದ್ದೇಳು ಮಂಜುನಾಥ 2’, ಚಿತ್ರಮಂದಿರಗಳಿಗೆ ಎಷ್ಟು ನಷ್ಟ?