AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಬುಡಕಟ್ಟು ಭಾಷೆಗಳ ರಾಷ್ಟ್ರೀಯ ಸಮಾವೇಶ: ಬುಡಕಟ್ಟು ಭಾಷೆಗಳಿಗೆ ತಂತ್ರಜ್ಞಾನದ ಸ್ಪರ್ಶ

ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ಭಾಷೆ ಮತ್ತು ವಸ್ತುಸಂಗ್ರಹಾಲಯಗಳ ಸಮಾವೇಶದಲ್ಲಿ ಅಳಿವಿನಂಚಿನಲ್ಲಿರುವ ಭಾಷೆಗಳ ಸಂರಕ್ಷಣೆ, ಡಿಜಿಟಲೀಕರಣ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಕುರಿತು ಚರ್ಚಿಸಲಾಯಿತು. 'ಆದಿ ವಾಣಿ' ಅಪ್ಲಿಕೇಶನ್, ಚಾಟ್‌ಬಾಟ್ ಪರಿಚಯಿಸಿ, ಕರ್ನಾಟಕಕ್ಕೆ ಬುಡಕಟ್ಟು ಪ್ರೈಮರ್‌ಗಳನ್ನು ಬಿಡುಗಡೆ ಮಾಡಲಾಯಿತು. ಭಾಷಾ ಪುನರುಜ್ಜೀವನಕ್ಕೆ ತಂತ್ರಜ್ಞಾನ ಹಾಗೂ ಸಮುದಾಯದ ಮಾಲೀಕತ್ವದ ಮಹತ್ವ ಒತ್ತಿಹೇಳಲಾಯಿತು.

ಮೈಸೂರಿನಲ್ಲಿ ಬುಡಕಟ್ಟು ಭಾಷೆಗಳ ರಾಷ್ಟ್ರೀಯ ಸಮಾವೇಶ: ಬುಡಕಟ್ಟು ಭಾಷೆಗಳಿಗೆ ತಂತ್ರಜ್ಞಾನದ ಸ್ಪರ್ಶ
ಬುಡಕಟ್ಟು ಭಾಷೆ, ಮೈಸೂರು ಸಮಾವೇಶ
ಅಕ್ಷಯ್​ ಪಲ್ಲಮಜಲು​​
|

Updated on: Aug 26, 2026 | 4:37 PM

Share

ಮೈಸೂರು, ಆ.26: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವತಿಯಿಂದ ಮೈಸೂರಿನಲ್ಲಿ ಮೂರು ದಿನಗಳ ಕಾಲ(24,25,26) ‘ಬುಡಕಟ್ಟು ಭಾಷೆಗಳು ಮತ್ತು ವಸ್ತುಸಂಗ್ರಹಾಲಯಗಳ ರಾಷ್ಟ್ರೀಯ ಸಮಾವೇಶ’ವನ್ನು (National Conclave on Tribal Languages & Museums) ಆಯೋಜಿಸಲಾಗಿದೆ. ಅಳಿವಿನಂಚಿನಲ್ಲಿರುವ ಬುಡಕಟ್ಟು ಭಾಷೆಗಳ ದಾಖಲೀಕರಣ, ಸಂರಕ್ಷಣೆ ಹಾಗೂ ಪುನರುಜ್ಜೀವನದ ಕುರಿತು ರಾಷ್ಟ್ರೀಯ ಮಟ್ಟದ ಸಂವಾದಕ್ಕೆ ಈ ಸಮಾವೇಶ ವೇದಿಕೆಯಾಗಿದ್ದು, ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವ ದುರ್ಗಾದಾಸ್ ಉಯ್ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ದೇಶಾದ್ಯಂತ ಇರುವ ಬುಡಕಟ್ಟು ವಸ್ತುಸಂಗ್ರಹಾಲಯಗಳು ಹಾಗೂ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಬಲಪಡಿಸುವುದು ಈ ಸಮಾವೇಶದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ವಿಕಸಿತ ಭಾರತ 2047’ ದೃಷ್ಟಿಕೋನದಡಿ ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯನ್ನು ಮರುಸ್ಥಾಪಿಸುವುದು ಹಾಗೂ ಎಲ್ಲ ಸಮುದಾಯಗಳನ್ನೂ ಒಳಗೊಂಡ ಸಮಗ್ರ ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ.

ಇಲ್ಲಿದೆ ನೋಡಿ ಪೋಸ್ಟ್:

ಇನ್ನು ಸಮಾವೇಶದಲ್ಲಿ ಬುಡಕಟ್ಟು ಭಾಷೆಗಳಲ್ಲಿ ಕರ್ನಾಟಕದ ‘ಪ್ರೈಮರ್‌’ಗಳನ್ನು (ಪ್ರಾಥಮಿಕ ಪಠ್ಯಪುಸ್ತಕಗಳು) ಬಿಡುಗಡೆ ಮಾಡಲಾಗುತ್ತಿದೆ.ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜತೆಗೆ ಬುಡಕಟ್ಟು ಭಾಷೆಗಳ ಕುರಿತಾದ ಮಾಹಿತಿಯನ್ನು ಸುಲಭವಾಗಿ ಪಡೆಯಲು ವಿಶೇಷ ‘ಚಾಟ್‌ಬಾಟ್’ ಅನ್ನು ಪರಿಚಯಿಸಲಾಗಿದೆ. ಬುಡಕಟ್ಟು ಭಾಷೆಗಳ ಡಿಜಿಟಲ್ ವೇದಿಕೆಯಾದ ‘ಆದಿ ವಾಣಿ’ (Adi Vaani) ಆ್ಯಪ್‌ನ ಹೊಸ ಐಒಎಸ್ (iOS) ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಹೊಸದಾಗಿ 5 ಭಾಷೆಗಳು ಹಾಗೂ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಸಮಾವೇಶದಲ್ಲಿ ಎರಡು ರೀತಿಯ ಚರ್ಚೆಗಳು ನಡೆದವು.

ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆಯಲ್ಲಿ ನಾಳೆ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಸಮುದಾಯ-ಚಾಲಿತ ಭಾಷಾ ಪುನರುಜ್ಜೀವನ:

ಬುಡಕಟ್ಟು ಭಾಷೆಗಳನ್ನು ಜೀವಂತವಾಗಿರಿಸಲು ಕೇವಲ ದಾಖಲೀಕರಣವಷ್ಟೇ ಸಾಲದು. ಸಮುದಾಯದ ಮಟ್ಟದಿಂದಲೇ ನಿಯಮಿತ ಭಾಷಾ ಸಮೀಕ್ಷೆಗಳು ನಡೆಯಬೇಕು ಹಾಗೂ ದಾಖಲಾದ ಮಾಹಿತಿಯು ಸಾರ್ವಜನಿಕರಿಗೆ ಸಿಗುವಂತೆ ಹಂಚಿಕೆಯ ಸಂಪನ್ಮೂಲ ವೇದಿಕೆ ನಿರ್ಮಾಣವಾಗಬೇಕು. ಹೊರಗಿನ ಸಂಸ್ಥೆಗಳ ಬದಲು ಸ್ವತಃ ಆಯಾ ಸಮುದಾಯಗಳೇ ತಮ್ಮ ಭಾಷೆಗೆ ಲಿಪಿಗಳನ್ನು ರೂಪಿಸಿಕೊಳ್ಳಬೇಕು ಮತ್ತು ದಾಖಲಾದ ವಿಷಯದ ಮೇಲೆ ಸಮುದಾಯಕ್ಕೆ ಹಕ್ಕುಸ್ವಾಮ್ಯ ಇರಬೇಕು ಎಂದು ಭಾಷಣಕಾರರು ಪ್ರತಿಪಾದಿಸಿದರು.

ಸಮುದಾಯ-ನಿಯಂತ್ರಿತ ಡಿಜಿಟಲೀಕರಣ ಹಾಗೂ ಎಐ (AI):

ತಂತ್ರಜ್ಞಾನವು ಭಾಷೆಯನ್ನು ಸಂರಕ್ಷಿಸಬಹುದಾದರೂ, ಅದರ ನಿಜವಾದ ಪಾಲಕರು ಸಮುದಾಯದ ಜನರೇ ಆಗಿರುತ್ತಾರೆ. ದುರ್ಬಲ ಭಾಷಾ ಸಮುದಾಯಗಳಿಗೆ ನಿಯಂತ್ರಿತ ಪ್ರವೇಶ ಮತ್ತು ಸಮುದಾಯವೇ ಸಂಪೂರ್ಣ ಮಾಲೀಕತ್ವ ಹೊಂದುವಂತಹ ಡೇಟಾಸೆಟ್‌ಗಳು/ಎಐ ಮಾದರಿಗಳನ್ನು ರೂಪಿಸುವ ಅಗತ್ಯವಿದೆ. ‘ಫೇರ್ ಆಂಡ್ ಕೇರ್’ (FAIR & CARE) ತತ್ವಗಳನ್ನು ಒಟ್ಟುಗೂಡಿಸಿ ಸಮುದಾಯಗಳ ಜೊತೆಗೂಡಿ ‘ಆದಿ ವಾಣಿ’ಯಂತಹ ತಂತ್ರಜ್ಞಾನಗಳನ್ನು ನಿರ್ಮಿಸಲು ಕರೆ ನೀಡಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us