AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬಿಎಫ್​​ಸಿಗೆ ಹೊಸ ಸದಸ್ಯರ ಆಯ್ಕೆ, ಪ್ರೀತಿ ಜಿಂಟಾ, ಸುನಿಲ್ ಶೆಟ್ಟಿ ಜೊತೆ ಕನ್ನಡದ ಕಲಾವಿದರಿಗೂ ಸ್ಥಾನ

CBFC Members: ಖ್ಯಾತ ನಟ ಸುನಿಲ್ ಶೆಟ್ಟಿ, ನಟಿ ಪ್ರೀತಿ ಜಿಂಟಾ, ನಟ ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಖ್ಯಾತ ನಿರ್ದೇಶಕ ಪ್ರಿಯದರ್ಶನ್, ಪ್ರೊಸೆನ್ಜಿತ್ ಚಟರ್ಜಿ ಸೇರಿದಂತೆ 18 ಸದಸ್ಯರೊಂದಿಗೆ ಕೇಂದ್ರ ಸರ್ಕಾರವು ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಒಬ್ಬ ಜನಪ್ರಿಯ ಕಲಾವಿದರಿಗೂ ಸಹ ಸ್ಥಾನ ನೀಡಲಾಗಿದೆ. ಯಾರು ಆ ಕಲಾವಿದ?

ಸಿಬಿಎಫ್​​ಸಿಗೆ ಹೊಸ ಸದಸ್ಯರ ಆಯ್ಕೆ, ಪ್ರೀತಿ ಜಿಂಟಾ, ಸುನಿಲ್ ಶೆಟ್ಟಿ ಜೊತೆ ಕನ್ನಡದ ಕಲಾವಿದರಿಗೂ ಸ್ಥಾನ
Cbfc
ಮಂಜುನಾಥ ಸಿ.
|

Updated on: Sep 16, 2026 | 10:32 PM

Share

ಕೇಂದ್ರ ಸರ್ಕಾರವು ಸಿಬಿಎಫ್​​ಸಿ ಅಥವಾ ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಇಂದು (ಸೆಪ್ಟೆಂಬರ್ 16) ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಈ ತಕ್ಷಣದಿಂದ ಜಾರಿಗೆ ಬರುವಂತೆ 18 ಸದಸ್ಯರ ಹೊಸ ತಂಡವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹೊಸ ಪಟ್ಟಿಯಲ್ಲಿ ವಿವಿಧ ಚಿತ್ರರಂಗದ ಗಣ್ಯರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಅದರಲ್ಲೂ ಬಾಲಿವುಡ್​​ಗೆ ಸಂಬಂಧಿಸಿದವರ ಸಂಖ್ಯೆ ಹೆಚ್ಚಾಗಿದೆ. ಪಟ್ಟಿಯಲ್ಲಿ ಒಬ್ಬ ಕರ್ನಾಟಕದ ಕಲಾವಿದರಿಗೂ ಅವಕಾಶ ನೀಡಲಾಗಿದೆ.

ಖ್ಯಾತ ನಟ ಸುನಿಲ್ ಶೆಟ್ಟಿ, ನಟಿ ಪ್ರೀತಿ ಜಿಂಟಾ, ನಟ ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಖ್ಯಾತ ನಿರ್ದೇಶಕ ಪ್ರಿಯದರ್ಶನ್, ಪ್ರೊಸೆನ್ಜಿತ್ ಚಟರ್ಜಿ ಸೇರಿದಂತೆ 18 ಸದಸ್ಯರೊಂದಿಗೆ ಕೇಂದ್ರ ಸರ್ಕಾರವು ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಈ ಹೊಸ ಸದಸ್ಯರ ಅಧಿಕಾರ ಅವಧಿಯು ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ. ಎರಡರಲ್ಲಿ ಯಾವುದು ಮೊದಲು ಘಟಿಸುತ್ತದೆಯೋ ಅದನ್ನು ಮಾನ್ಯ ಮಾಡಲಾಗುತ್ತದೆ.

ಈ ಪಟ್ಟಿಯಲ್ಲಿ ಬೆಂಗಳೂರಿನ ಹೆಮ್ಮೆಯ ಸಂಗೀತ ಕಲಾವಿದ ರಿಕ್ಕಿ ಕೇಜ್ ಅವರ ಹೆಸರು ಇದೆ. ಮೂರು ಗ್ರ್ಯಾಮಿ ಪ್ರಶಸ್ತಿಗಳು ಸೇರಿದಂತೆ ಹಲವು ಅಂತರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ರಿಕ್ಕಿ ಕೇಜ್ ಅವರು ಸಿಬಿಎಫ್​​ಸಿ ಸದಸ್ಯರಾಗಿದ್ದಾರೆ. ಇವರ ಜೊತೆಗೆ ನಿರ್ದೇಶಕಿ ಪಲ್ಲವಿ ಜೋಶಿ, ನಟಿ ರೂಪಾಲಿ ಗಂಗೂಲಿ, ಚಲನಚಿತ್ರ ನಿರ್ದೇಶಕ ನೀಲಾ ಮಾಧಬ್ ಪಾಂಡಾ, ನಟಿ ನಿಶಿಂಧಾ ವಾಡ್, ಗಾಯಕ ಹಂಸರಾಜ್ ಹಂಸ ಮತ್ತು ನಿರ್ದೇಶಕ ವಾಮನ್ ಕೇಂದ್ರೆ, ವಿನೋದ್ ಅನುಪಮ್, ಅಭಿಷೇಕ್ ಜೈನ್, ಸುಪ್ರಿಯಾ ಯರ್ಲಗಡ್ಡ, ಯತೀಂದ್ರ ಮಿಶ್ರಾ ಮತ್ತು ರಮೇಶ್ ಪಟಾಂಜೆ ಕೂಡ ಸೇರಿದ್ದಾರೆ.

ಇದನ್ನೂ ಓದಿ:ಸೈಮಾ ಪ್ರಶಸ್ತಿ ಪಡೆದ ಖುಷಿಯಲ್ಲಿ ನಟಿ ಆಶಿಕಾ ರಂಗನಾಥ್

ಭಾರತದಲ್ಲಿ ಚಲನಚಿತ್ರಗಳಿಗೆ ಸಾರ್ವಜನಿಕ ಪ್ರದರ್ಶನಕ್ಕಾಗಿ ಪ್ರಮಾಣಪತ್ರ ನೀಡುವ ಜವಾಬ್ದಾರಿಯನ್ನು ಸಿಬಿಎಫ್​​ಸಿ ಹೊಂದಿದೆ. ಸರ್ಕಾರವು 2026ರ ಮೇ ತಿಂಗಳಲ್ಲಿ ಶಶಿ ಶೇಖರ್ ವೆಂಪತಿ ಅವರನ್ನು ಮೂರು ವರ್ಷಗಳ ಅವಧಿಗೆ CBFC ಅಧ್ಯಕ್ಷರನ್ನಾಗಿ ನೇಮಿಸಿತ್ತು. ಪ್ರಸೂನ್ ಜೋಶಿ ಅವರು ಪ್ರಸಾರ ಭಾರತೀಯ ಅಧ್ಯಕ್ಷರಾಗಿ ನೇಮಕಗೊಂಡು ಹುದ್ದೆಯಿಂದ ಕೆಳಗಿಳಿದ ನಂತರ, ಶಶಿ ಶೇಖರ್ ವೆಂಪತಿ ಆ ಸ್ಥಾನವನ್ನು ವಹಿಸಿಕೊಂಡಿದ್ದರು. ಇತ್ತೀಚಿನ ಅಧಿಸೂಚನೆಯ ಪ್ರಕಾರ ಅಧ್ಯಕ್ಷರ ಹುದ್ದೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸಿಬಿಎಫ್​​ಸಿ ಹಾಗೂ ಸಿನಿಮಾ ನಿರ್ದೇಶಕರುಗಳ ಮಧ್ಯೆ ಸಾಕಷ್ಟು ತಿಕ್ಕಾಟಗಳು ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿದೆ. ಸಿಬಿಎಫ್​​ಸಿಯು ಅತಿಯಾದ ಸೆನ್ಸಾರ್​​ಶಿಪ್ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿದಾಗ ರಾಜಕೀಯದ ಆರೋಪವೂ ಸಹ ಕೇಳಿ ಬಂದಿತ್ತು. ಇದರ ನಡುವೆ ಇದೀಗ ಸದಸ್ಯರ ಬದಲಾವಣೆ ಆಗಿರುವುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ