ಅನಂತ್ ನಾಗ್ ಅವರಿಗೆ ಅಭಿನಂದನೆಗಳ ಸುರಿಮಳೆ, ಯಾರು ಏನು ಹೇಳಿದರು?
ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಲಾಗುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಸಹಜವಾಗಿಯೇ ಈ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅನಂತ್ ನಾಗ್ ಅವರಿಗೆ ರಾಜಕಾರಣಿಗಳು, ಸಿನಿಮಾ ರಂಗದ ಹಲವು ಗಣ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಈಗಾಗಲೇ ಅನಂತ್ ನಾಗ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಹ ಅನಂತ್ ನಾಗ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಮುಖ್ಯಾಂಶಗಳು
- ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
- ಅನಂತ್ ನಾಗ್ ಅವರಿಗೆ ಹಲವಾರು ಮಂದಿ ಅಭಿನಂದನೆ ಸಲ್ಲಿಸಿದೆ.
- ಸಿನಿಮಾ ಸೆಲೆಬ್ರಿಟಿಗಳು ಹೇಳಿರುವುದೇನು?
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದೆ. ಈ ಮೂಲಕ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಮೂರನೇ ಕನ್ನಡಿಗ ಎನಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಲಾಗುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಸಹಜವಾಗಿಯೇ ಈ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅನಂತ್ ನಾಗ್ ಅವರಿಗೆ ರಾಜಕಾರಣಿಗಳು, ಸಿನಿಮಾ ರಂಗದ ಹಲವು ಗಣ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಈಗಾಗಲೇ ಅನಂತ್ ನಾಗ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಹ ಅನಂತ್ ನಾಗ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ರಮೇಶ್ ಅರವಿಂದ್ ಅಭಿನಂದನೆ
ಸಂತೋಷದ ಸುದ್ದಿ, ಅನಂತ್ ನಾಗ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಅಭಿನಂದನೆಗಳು ಸರ್. ‘ಹಂಸಗೀತೆ’ಯಿಂದ ಹಿಡಿದು ‘ಗೋಧಿ ಬಣ್ಣ’ದವರೆಗಿನ ಅವರ ಪಯಣವು, ಕಳೆದ ನಾಲ್ಕು ದಶಕಗಳಿಂದ ದೀರ್ಘ ಕಾಲ ಅದ್ಭುತ ನಟನೆ ನೀಡಿದ ‘ಕಲಾಶಾಲೆ’. ಅತ್ಯಂತ ಘನತೆ ಮತ್ತು ಸಹಜ ನೈಜತೆಯಿಂದ ಅಭಿನಯಿಸಲು ನಟರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ ಎಂದಿದ್ದಾರೆ ನಟ ರಮೇಶ್ ಅರವಿಂದ್.
ಜಗ್ಗೇಶ್ ಹಳೆ ನೆನಪು
‘10ನೆ ಕ್ಲಾಸ್ ನಲ್ಲಿ ಇವರ ‘ಕಣ್ಣೇಶ್ವರರಾಮ’ ನಾನು ನೋಡಿದ ಮೊದಲ ಚಿತ್.ರ ಆಗ ನನಗೆ ಅನ್ನಿಸಿದ್ದು ಇವರ ಕನ್ನಡ ಏನು ಹಿಂಗಿದೆ ಅಂತ. ಶೇಷಾದ್ರಿಪುರ ಕಾಲೇಜಿಗೆ ಸೇರಿದಾಗ ಸ್ವಸ್ತಿಕ್ ಚಿತ್ರಮಂದಿರ ಬಹಳ ಹತ್ತಿರ ಅಲ್ಲಿ ನಾ ನೋಡಿದ್ದು “ಚಂದನದಗೊಂಬೆ” ಮುಂದೆ “ನಾ ನಿನ್ನ ಬಿಡಲಾರೆ” ಈ ಚಿತ್ರ ನೋಡಿದ ಮೇಲೆ ಫಿದ. ಅಲ್ಲಿಂದ ನಾನು ಇವರ ಚಿತ್ರ ಬಂದರೆ ತಪ್ಪದೆ ನೋಡುತಿದ್ದೆ. ಮುಂದೆ ನಾನು ನಟ ಆದಮೇಲೆ ಅವರೊಟ್ಟಿಗೆ ನಟಿಸುವ ಅನೇಕ ಅವಕಾಶ ಸಿಕ್ಕಿತು ಶಾರದextras ಎಂದು ಭಾವಿಸುವೆ. ಇಷ್ಟು ಧೀರ್ಘಕಾಲ ನಟಿಸಿ ಕನ್ನಡಿಗರ ರಂಜಿಸಿದ ನಮ್ಮ ನೆಚ್ಚಿನ ಹಿರಿಯ ನಟ ಅನಂತಣ್ಣನಿಗೆ ಕೇಂದ್ರ ಸರ್ಕಾರ ‘ದಾದಾಸಾಹೇಬ್’ ಪ್ರಶಸ್ತಿ ನೀಡಿ ಕನ್ನಡ ಚಿತ್ರರಂಗದ ಮೆರಗು ಹೆಚ್ಚಿಸಿದರು. ಅಭಿನಂದನೆಗಳು ಅನಂತಣ್ಣ’ ಎಂದು ಬರೆದುಕೊಂಡಿದ್ದಾರೆ ನಟ ಜಗ್ಗೇಶ್.
ಮಾಳವಿಕಾ ಅವಿನಾಶ್ ಹೇಳಿದ್ದೇನು?
‘ನಮ್ಮ ಪಾಲಿಗೆ ಅವರು ಭಾರತೀಯ ಚಲನಚಿತ್ರರಂಗದ ಅತ್ಯಂತ ಬಹುಮುಖ ಪ್ರತಿಭೆಯ ನಟ. ಅವರು ಒಬ್ಬ ದಿಗ್ಗಜ ನಟರಾಗಿ, ಅವರಲ್ಲಿರುವ ಆ ಮುಗ್ಧ ನಗು ಹಾಗೂ ಪ್ರಬುದ್ಧತೆಗಾಗಿ ನಾವು ಅವರನ್ನು ಪ್ರೀತಿಸುತ್ತೇವೆ. ಶ್ಯಾಮ್ ಬೆನೆಗಲ್ ಅವರ ‘ಅಂಕುರ್’ ಚಿತ್ರದ ಮೂಲಕ ಆರಂಭವಾದ ಅವರ ಪಯಣದಿಂದ ಹಿಡಿದು, ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’, ಲೆನಿನ್ ರಾಜೇಂದ್ರನ್ ಅವರ ಮಲಯಾಳಂ ಚಿತ್ರ ‘ಸ್ವಾತಿ ತಿರುನಾಳ್’, ಫಣಿ ರಾಮಚಂದ್ರ ಅವರ ‘ಗಣೇಶ’ ಸರಣಿ, ಸೀತಾರಾಮ್ ತಲಗಾವರ್ ಅವರ ‘ಮತದಾನ’ ಹಾಗೂ ಪ್ರಶಾಂತ್ ಅವರ ‘ಕೆಜಿಎಫ್’ವರೆಗೆ. ಗಂಭೀರ ಪಾತ್ರಗಳಲ್ಲಿನ ಅವರ ಅಭಿನಯದ ತೀವ್ರತೆ, ಕನ್ನಡ ಭಾಷೆಯ ಮೇಲಿನ ಅವರ ಹಿಡಿತ ಹಾಗೂ ಸಹಜ ನಿರೂಪಣೆ, ಹಾಸ್ಯ ದೃಶ್ಯಗಳಲ್ಲಿನ ಅವರ ನಿಖರವಾದ ಸಮಯಪ್ರಜ್ಞೆ (timing) – ಹೀಗೆ ಪ್ರತಿ ಬಾರಿಯೂ ಅವರು ನಮ್ಮನ್ನು ಬೆರಗುಗೊಳಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಬಗೆಗಿನ ಅವರ ತಿಳುವಳಿಕೆ ‘ಸ್ವಾತಿ ತಿರುನಾಳ್’ ಚಿತ್ರದಲ್ಲಿ ಎದ್ದು ಕಾಣುತ್ತದೆ; ಅಲ್ಲಿ “ಪನ್ನಗೇಂದ್ರ ಶಯನ” ಕೃತಿಯನ್ನು ಹಾಡುವಾಗ ಅವರು ‘ರೂಪಕ ತಾಳ’ದಿಂದ ‘ಮಿಶ್ರಚಾಪು ತಾಳ’ಕ್ಕೆ ಬದಲಾಯಿಸುವ ರೀತಿ ಅದ್ಭುತ – ಇದು ಅನಂತ್ ನಾಗ್ ಅವರಿಗೆ ಮಾತ್ರವೇ ಸಾಧ್ಯವಾದ ವಿಶಿಷ್ಟ ಶೈಲಿ. ನಮ್ಮ ಮಟ್ಟಿಗೆ ಅವರು ದೇಶ ಕಂಡ ಅಪ್ರತಿಮ ಕಲಾವಿದರು. ಪದ್ಮಭೂಷಣ ಅನಂತ್ ನಾಗ್ ಅವರ ಯಾವ ಚಿತ್ರ ಅಥವಾ ಪಾತ್ರ ನಿಮಗೆ ಅಚ್ಚುಮೆಚ್ಚು? ಅಭಿನಂದನೆಗಳು ಸರ್. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದಿದ್ದಾರೆ ನಟಿ ಮಾಳವಿಕಾ ಅವಿನಾಶ್.
ನಟಿ ರಮ್ಯಾ
‘ನಾನು ಚಿತ್ರರಂಗದಲ್ಲಿ ಈ ವರೆಗೆ ಭೇಟಿ ಮಾಡಿರುವ ಬಹಳ ಒಳ್ಳೆಯ ವ್ಯಕ್ತಿ ಅನಂತ್ ನಾಗ್. ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಸಿಗಬೇಕು’ ಎಂದಿದ್ದಾರೆ ನಟಿ ರಮ್ಯಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




