AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಾದಾ ಸಾಹೇಬ್ ಫಾಲ್ಕೆ ಸುದ್ದಿ ಕೇಳಿ ಅನಂತ್ ನಾಗ್ ನಕ್ಕಿ ಮಲಗಿದ್ರು’; ಗಾಯತ್ರಿ ಅನಂತ್ ನಾಗ್

ಖ್ಯಾತ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅವರ ಪತ್ನಿ ಗಾಯತ್ರಿ ಸಂತಸ ಹಂಚಿಕೊಂಡರು. ಪ್ರಶಸ್ತಿ ಸುದ್ದಿ ಬಂದಾಗ ಅನಂತ್ ನಾಗ್ ಅವರು 'ಇದು ಸುಳ್ಳು ಸುದ್ದಿ' ಎಂದು ಮತ್ತೆ ಮಲಗಿದ್ದನ್ನು ನಗುತ್ತಾ ನೆನಪಿಸಿಕೊಂಡ ಗಾಯತ್ರಿ, ಪತಿಯ ನಟನೆ, ಸರಳತೆ ಹಾಗೂ ಮೌನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

‘ದಾದಾ ಸಾಹೇಬ್ ಫಾಲ್ಕೆ ಸುದ್ದಿ ಕೇಳಿ ಅನಂತ್ ನಾಗ್ ನಕ್ಕಿ ಮಲಗಿದ್ರು’; ಗಾಯತ್ರಿ ಅನಂತ್ ನಾಗ್
ಅನಂತ್ ನಾಗ್-ಗಾಯತ್ರಿ
ರಾಜೇಶ್ ದುಗ್ಗುಮನೆ
|

Updated on: Sep 16, 2026 | 8:00 PM

Share

ಮುಖ್ಯಾಂಶಗಳು

  • ‘ಸುಳ್ಳು ಸುದ್ದಿ’ ಎಂದು ಮತ್ತೆ ಮಲಗಿದ್ದ ಅನಂತ್ ನಾಗ್
  • ತಮ್ಮದೇ ವಿಶಿಷ್ಟ ಹಾದಿ ರೂಪಿಸಿಕೊಂಡ ಅಪರೂಪದ ನಟ
  • ಆಡಂಬರವಿಲ್ಲದ ಸರಳತೆ: ಅನಂತ್ ಮೌನವೇ ನನಗೆ ಇಷ್ಟ

ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಹರಿದು ಬರುತ್ತಿದೆ. ಈ ಬಗ್ಗೆ ಅವರ ಪತ್ನಿ ಗಾಯತ್ರಿ ಅನಂತ್ ನಾಗ್ ಅವರು ತಮ್ಮ ಮೊದಲ ಅನಿಸಿಕೆ ಹಾಗೂ ಖುಷಿಯನ್ನು ಹಂಚಿಕೊಂಡಿದ್ದಾರೆ. ಟಿವಿ9 ಕನ್ನಡ ಜೊತೆ ಮಾತನಾಡಿದ ಗಾಯತ್ರಿ ಅವರು, ಈ ವಿಚಾರ ತಮಗೆ ತಿಳಿದ ತಕ್ಷಣ ಮನೆಯಲ್ಲಿದ್ದ ಕ್ಷಣಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

ಸುದ್ದಿ ಕೇಳಿ ಮತ್ತೆ ಮಲಗಿಬಿಟ್ಟಿದ್ದರು

‘ಸುಮಾರು ಅರ್ಧ ಗಂಟೆಯಷ್ಟೇ ಮುಂಚೆ ನನಗೊಬ್ಬರು ಜರ್ನಲಿಸ್ಟ್ ಫೋನ್ ಮಾಡಿ ಈ ಸುದ್ದಿ ತಿಳಿಸಿದರು. ನನಗೆ ತಕ್ಷಣಕ್ಕೆ ಅದು ಸತ್ಯವೇ ಎಂದು ನಂಬಲು ಸಾಧ್ಯವಾಗಲಿಲ್ಲ. ಅನಂತ್ ಅವರು ಮನೆಯಲ್ಲೇ ಇದ್ದರು, ಅವರಿಗೆ ವಿಷಯ ತಿಳಿಸಿದೆ. ಆದರೆ ಅವರು ‘ಇದೇನೋ ಸುಳ್ಳು ಸುದ್ದಿ ಇರಬೇಕು’ ಎಂದು ಹೇಳಿ ಮತ್ತೆ ಮಲಗಲು ಹೊರಟುಬಿಟ್ಟರು’ ಎಂದು ನಗುತ್ತಾ ನೆನಪಿಸಿಕೊಂಡರು.

‘ಆ ನಂತರ ವಾಟ್ಸಾಪ್‌ನಲ್ಲಿ ಅಧಿಕೃತ ಮಾಹಿತಿ ಮತ್ತು ಪತ್ರಿಕಾ ಪ್ರಕಟಣೆ ಹರಿದಾಡಲು ಶುರುವಾದಾಗ, ಅದನ್ನು ನೋಡಿ ಅನಂತ್ ನಾಗ್ ಅವರು ಎದ್ದು ಓದಿದರು. ತದನಂತರ ಶುಭಾಶಯಗಳ ಫೋನ್‌ ಕರೆಗಳ ಮಹಾಪೂರವೇ ಹರಿಯಲು ಶುರುವಾಯಿತು’ ಎಂದು ಅವರು ತಿಳಿಸಿದರು.

ನನಗೆ ಅನಂತ್ ಅವರ ನಟನೆ ಬಗ್ಗೆ ಅಪಾರ ಹೆಮ್ಮೆ ಇದೆ

ತಮ್ಮ ಪತಿಯ ನಟನಾ ಪಯಣದ ಬಗ್ಗೆ ಮಾತನಾಡಿದ ಗಾಯತ್ರಿ ಅನಂತ್ ನಾಗ್, ‘ಒಬ್ಬ ನಟನಾಗಿ ಅನಂತ್ ನಾಗ್ ಅವರ ಸಾಧನೆ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಇದೆ. ಅವರು ಎಂದಿಗೂ ಬೇರೆಯವರ ಹಾದಿಯಲ್ಲಿ ನಡೆದವರಲ್ಲ . ತಮ್ಮದೇ ಆದ ವಿಶಿಷ್ಟ ಹಾದಿಯನ್ನು ರೂಪಿಸಿಕೊಂಡು ಬಂದವರು. ಅವರು ಬೇರೆ ಹಾದಿ ತುಳಿದರೂ ಸಹ ಕರ್ನಾಟಕದ ಜನತೆ ಅವರನ್ನು ಅಪಾರವಾಗಿ ಪ್ರೀತಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅನಂತ್​ ನಾಗ್​: ಪದೇ ಪದೇ ಸೆಳೆಯುವ ಒಗಟು

ಅವರ ಮೌನವೇ ನನಗೆ ಅತ್ಯಂತ ಇಷ್ಟ

ಅನಂತ್ ನಾಗ್ ಅವರ ವ್ಯಕ್ತಿತ್ವ ಹಾಗೂ ಸ್ವಭಾವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಯಾವುದೇ ಹೀರೋಗಳ ಕಲ್ಪನೆ ಇಲ್ಲ. ಆದರೆ ಅನಂತ್ ಅವರ ಮೌನ ಎಂದರೆ ನನಗೆ ತುಂಬಾ ಇಷ್ಟ. ಯಾವುದೇ ವಿಷಯಕ್ಕೂ ತಕ್ಷಣಕ್ಕೆ ಪ್ರತಿಕ್ರಿಯೆ ನೀಡದೆ, ಅನಗತ್ಯ ಗಡಿಬಿಡಿ ಇಲ್ಲದೆ, ತಮಗೆ ಏನು ಸರಿ ಅನಿಸುತ್ತದೋ ಅದನ್ನು ಶಾಂತವಾಗಿ ಮಾಡಿಕೊಂಡು ಹೋಗುವುದು ಅನಂತ್ ನಾಗ್ ಅವರ ನೈಜ ಸ್ವಭಾವ’ ಎಂದು ಪತಿಯ ಸರಳ ಹಾಗೂ ಗಂಭೀರ ವ್ಯಕ್ತಿತ್ವವನ್ನು ಶ್ಲಾಘಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ